2025 ಜೂನ್ 1ರಂದು ಯಕ್ಷಧ್ರುವ ಪಟ್ಲ ದಶಮಾನೋತ್ಸವ ಸಂಭ್ರಮ.

ಸಮಲೋಚನಾ ಸಭೆಯಲ್ಲೇ ರೂ 1-00 ಕೋಟಿ ದೇಣಿಗೆ ಘೋಷಿಸಿದ ಶಶಿಧರ ಶೆಟ್ಟಿ ಬರೋಡ

ಕರಾವಳಿಯ ಯಕ್ಷಗಾನ ಕಲೆಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಪಸರಿಸುತ್ತಿರುವ ಹಾಗೂ ತನ್ಮೂಲಕ ಯಕ್ಷಗಾನದ ಕಲಾವಿದರಿಗಲ್ಲದೆ ಇತರೇ ವಿವಿಧ ಪ್ರಕಾರದ ಅಶಕ್ತರ ಬಾಳಿಗೆ ಬೆಳಕಾಗಿ ಮೂಡಿಬಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರಗಿಸುವ ಕುರಿತಾಗಿ ಫೌಂಡೇಶನಿನ ಮಹಾದಾನಿಗಳ, ಮಹಾಪೋಷಕರ , ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಲೋಚನಾ ಸಭೆಯು ನಗರದ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.

ಸಭೆಯ ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು /ಮಹಾದಾನಿಗಳಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಡಾ. ಕೆ ಪ್ರಕಾಶ್ ಶೆಟ್ಟಿ(MRG Group), ಟ್ರಸ್ಟಿನ ಸಂಚಾಲಕರಾದ ಶ್ರೀ ಐಕಳ ಹರೀಶ್ ಶೆಟ್ಟಿ ,ಮಹಾ ಪೋಷಕರಾದ ಶ್ರೀ ಕೆ. ಎಂ. ಶೆಟ್ಟಿ, ಶ್ರೀ ತೋನ್ಸೆ ಆನಂದ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿ, ಶ್ರೀ ಸಂತೋಷ್ ಶೆಟ್ಟಿ ಪೂನಾ, ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ಸವಣೂರು ಸೀತಾರಾಮ ರೈಯವರು ಉಪಸ್ಥಿತರಿದ್ದು ದಶಮಾನೋತ್ಸವ ಸಂಭ್ರಮವು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಲಿ, ಕಾರ್ಯಕ್ರಮದ ಯಶಸ್ಸಿಗೆ ಗರಿಷ್ಠ ಮೊತ್ತದ ದೇಣಿಯನ್ನು ನೀಡಿ ಸಹಕರಿಸಲಾಗುವುದೆಂದು ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನಿನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡ ದಶಮಾನೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಪಟ್ಲ ಫೌಂಡೇಶನ್ನು ಸುಭಧ್ರಗೊಳಿಸುವ ಮತ್ತು ಅದರ ಮುಂದಿನ ಯೋಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಸುಮಾರು 10-00 ಕೋಟಿ ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಸಂಗ್ರಹಿಸುವುದು ಉತ್ತಮವೆಂದು ತಿಳಿಸಿ ಪ್ರಥಮ ಹೆಜ್ಜೆಯಾಗಿ ತಾನು ರೂ 1-00 ಕೋಟಿ ಮೊತ್ತವನ್ನು ದೇಣಿಗೆಯ ರೂಪದಲ್ಲಿ ನೀಡುವುದಾಗಿ ಎಂದು ಘೋಷಣೆ ಮಾಡಿದರು.

ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಇವತ್ತಿನವರೆಗೂ ಫೌಂಡೇಶನಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸುವುದರೊಂದಿಗೆ, ಈಗಾಗಲೇ ಟ್ರಸ್ಟಿಗೆ 1 ಕೋಟಿ ಮೊತ್ತವನ್ನು ನೀಡಿ ಮಹಾದಾನಿಯಾಗಿರುವ ಶಶಿಧರ ಶೆಟ್ಟಿಯವರು ದಶಮಾನೋತ್ಸವ ಕಾರ್ಯಕ್ರಮಕ್ಕೂ 1 ಕೋಟಿ ದೇಣಿಗೆಯ ಘೋಷಣೆಗೆ ಶಿರಬಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ಯಕ್ಷಧ್ರುವ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು 2025ರ ಜೂನ್ 1ರಂದು ಅಡ್ಯಾರ್ ಗಾರ್ಡನ್ ಇಲ್ಲಿ ಜರಗಲಿದ್ದು , ದಶಮಾನೋತ್ಸವ ಸಂಭ್ರಮಕ್ಕೆ ರಚಿಸಲಾಗುವ ಸಮಿತಿಗೆ ಗೌರವಾಧ್ಯಕ್ಷರಾಗಿ ಕೊಡುಗೈದಾನಿ, ಫೌಂಡೇಶನಿನ ಮಹಾದಾನಿ ಡಾ. ಕೆ ಪ್ರಕಾಶ್ ಶೆಟ್ಟಿ (MRG Group) ಹಾಗೂ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ ಇವರುಗಳ ಹೆಸರನ್ನು ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮ ಶಾಸ್ತ್ರಿ, ಶ್ರೀ ಲೋಕನಾಥ ಶೆಟ್ಟಿ, ಶ್ರೀ ವಿನಿತ್ ಕುಮಾರ್ ಶೆಟ್ಟಿ ಫೌಂಡೇಶನಿನ ಟ್ರಸ್ಟಿಗಳಾಗಿ ಸೇರ್ಪಡೆಗೊಂಡರು. ಗೃಹ ನಿರ್ಮಾಣಕ್ಕಾಗಿ ರೂ15 ಲಕ್ಷ ರೂಪಾಯಿ ಮೊತ್ತವನ್ನು 9 ಮಂದಿ ಕಲಾವಿದರಿಗೆ ವಿತರಿಸಲಾಯಿತು. 2025ರ ಜನವರಿ 8ರಂದು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ರವರ ಒಡೆತನದ ಒಡ್ಡೂರು ಫಾರ್ಮಿನಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನದ ಬಗ್ಗೆ ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿಯವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಫೌಂಡೇಶನಿನ ಕೋಶಾಧಿಕಾರಿಯವರಾದ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಅಡ್ಯಾರ್ ಪುರುಷೋತ್ತಮ ಕೆ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

LATEST POST
ತುಳುನಾಡ ಪರಿಪೂರ್ಣ ಕಲೆ ಯಕ್ಷಗಾನ: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ

ತುಳುನಾಡ ಪರಿಪೂರ್ಣ ಕಲೆ ಯಕ್ಷಗಾನ: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ

Mangaluru: ಜೂನ್ 1 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ಮೈದಾನದಲ್ಲಿ 10ನೇ ವರ್ಷದ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಸುಮಾರು 30 ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಅಬ್ಬರ ತಾಳದಿಂದ ಶುರುವಾದ ಕಾರ್ಯಕ್ರಮ ರಾತ್ರಿಯವರೆಗಗೂ ಸರಿಯಾದ ಸಮಯ...

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025: ಆಮಂತ್ರಣ ಪತ್ರಿಕೆ

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025: ಆಮಂತ್ರಣ ಪತ್ರಿಕೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಪಟ್ಲ ದಶಮ ಸಂಭ್ರಮ - 2025 ರಾಷ್ಟ್ರೀಯ ಕಲಾ ಸಮ್ಮೇಳನ ದಿನಾಂಕ ▪️ 01.06.2025 ಆದಿತ್ಯವಾರ ಸ್ಥಳ▪️ ಅಡ್ಯಾರ್ ಗಾರ್ಡನ್,ಮಂಗಳೂರು ಆಮಂತ್ರಣ ಪತ್ರಿಕೆ...

ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ “ಭಾರತ್ ಕಲಾ ವೈಭವ”

ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ “ಭಾರತ್ ಕಲಾ ವೈಭವ”

ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕವು ಮೇ 10, 2025 ರಂದು ಜರ್ಮನಿಯ ಅಲ್ಸ್ಬಾಕ್‌ನಲ್ಲಿ "ಭಾರತ್ ಕಲಾ ವೈಭವ" ಸಾಂಸ್ಕೃತಿಕ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಸಾಂಸ್ಕೃತಿಕ ಉತ್ಸವವು ನಮ್ಮ ಫೌಂಡೇಶನ್‌ಗಾಗಿ ಹೆಮ್ಮೆಗುರಿಯಾಗಿದೆ, ಯಾಕಂದರೆ ಇದು ಭಾರತದ ಕಲೆಗಳು ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಯೂರೋಪಿನ...

ಪಟ್ಲ ಫೌಂಡೇಶನ್ ಟ್ರಸ್ಟ್ ದಶಮ ಸಂಭ್ರಮ: 10 ಕೋಟಿ ದೇಣಿಗೆ ಸಂಗ್ರಹದ ಗುರಿ

ಪಟ್ಲ ಫೌಂಡೇಶನ್ ಟ್ರಸ್ಟ್ ದಶಮ ಸಂಭ್ರಮ: 10 ಕೋಟಿ ದೇಣಿಗೆ ಸಂಗ್ರಹದ ಗುರಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪಟ್ಲ ದಶಮ ಸಂಭ್ರಮದ ಸಮಾಲೋಚನಾ ಸಭೆ ಮೇ7ರಂದು ಮಂಗಳೂರಿನ ಪತ್ತುಮುಡಿ ಹೋಟೆಲ್ ನಲ್ಲಿ ನಡೆಯಿತು. ವಿಶೇಷವಾಗಿ ಫೌಂಡೇಶನ್ನ ಪೋಷಕರಾದ ಸುರೇಶ್ ಭಂಡಾರಿ ಕಡಂದಲೇ, ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಮುಖ್ಯಸ್ಥರು ಸೀತಾರಾಮ್ ತೋಲ್ಪಡಿತ್ತಯರು, ಹಾಗೂ ಎಲ್ಲಾ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು. ಈ...

A New Beginning: Housewarming Held for 36th Artist Home by Patla Foundation

ಬೇಬಿ ಮತ್ತು ಬಾಲಕೃಷ್ಣ ಪುರುಷ ರಿಗೆ ಪಟ್ಲ ಯಕ್ಷಾಶ್ರಯದ 36ನೇ ಮನೆ

Mangaluru News: ಹಲವು ಕಲಾವಿದರಿಗೆ ಮನೆ ನಿರ್ಮಾಣ ಮಾಡಿ ಕೊಡುತ್ತಿರುವ ಪಟ್ಲ ಫೌಂಡೇಶನ್‌ ವತಿಯಿಂದ, ಇನ್ನೋರ್ವ ಕಲಾವಿದರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ವಿಶೇಷ ಅಂದ್ರೆ ಇದು ಪಟ್ಲ ಫೌಂಡೇಶನ್‌ ವತಿಯಿಂದ ಕಲಾವಿದರಿಗೆ ನೀಡುತ್ತಿರುವ 36ನೇ ಮನೆಯಾಗಿದೆ. ಬೇಬಿ ಮತ್ತು ಬಾಲಕೃಷ್ಣ ಪುರುಷ ಎಂಬುವವರಿಗೆ ಪರುವಾಯಿಯ ಓಣಿ ಬಾಗಿಲು...

With 36 Homes Delivered, Patla Foundation Breaks Ground on 20 More for Artists

ಪಟ್ಲ ಯಕ್ಷಾಶ್ರಯದಡಿ 20 ಮನೆಗಳಿಗೆ ಭೂಮಿ ಪೂಜೆ ನೆರವೇರಿಸಿದ ಶೃಂಗೇರಿ ಶ್ರೀಗಳು

Mangaluru News: ಎಷ್ಟೋ ಯಕ್ಷಗಾನ ಕಲಾವಿದರಿಗೆ ಪಟ್ಲ ಯಕ್ಷಾಶ್ರಯದಡಿ ಹಲವು ಮನೆಗಳನ್ನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರು ಕಟ್ಟಿ ಕೊಟ್ಟಿದ್ದಾರೆ. ಅದೇ ರೀತಿ, ಉಡುಪಿಯಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಹಲವು ಯಕ್ಷಗಾನ ಕಲಾವಿದರಿಗಾಗಿ ಮನೆ ನಿರ್ಮಿಸಲು ಭಾಗವತರು ಭೂಮಿ ಪೂಜೆ ನೆರವೇರಿಸಿದರು. ಈಗಾಗಲೇ 36 ಮನೆಗಳನ್ನು...

ಯಕ್ಷಧ್ರುವ ಪಟ್ಲ ಫೌಂಡೇಶನ್ ರಕ್ತದಾನ ಶಿಬಿರ ಯಶಸ್ವಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ರಕ್ತದಾನ ಶಿಬಿರ ಯಶಸ್ವಿ

ಬಹ್ರೈನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹ್ರೈನ್ ಮತ್ತು ಸೌದಿ ಘಟಕವು ತಮ್ಮ ಮೂರನೇ ವಾರ್ಷಿಕ ರಕ್ತದಾನ ಶಿಬಿರವನ್ನು ಸಲ್ಮಾನಿಯಾ ಮೆಡಿಕಲ್ ಕಾಂಪ್ಲೆಕ್ಸ್‌ನ ಸೆಂಟ್ರಲ್ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಸಂಜೆ 7:00 ಗಂಟೆಯಿಂದ ರಾತ್ರಿ 11:30ರವರೆಗೆ ನಡೆದ ಈ ಶಿಬಿರದಲ್ಲಿ 80 ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ಅತ್ಯುತ್ಸಾಹ ಪ್ರದರ್ಶಿಸಿದರು.

ಜೂನ್ 1ರಂದು ಪಟ್ಲ ದಶಮ ಸಂಭ್ರಮ

ಜೂನ್ 1ರಂದು ಪಟ್ಲ ದಶಮ ಸಂಭ್ರಮ

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ದೊಡ್ಡ ಯಶಸ್ಸು ಕಾಣಲಿದೆ. ಯಕ್ಷಗಾನ ಕ್ಷೇತ್ರ ಇಂದು ಪಟ್ಲ ಸತೀಶ್ ಶೆಟ್ಟಿ ಅವರಿಂದ ನಾಡಿನೆಲ್ಲೆಡೆ ಬೆಳಗುತ್ತಿದೆ. ಇದು ಬಹಳ ಸಂತಸದ ವಿಚಾರ. ಯಕ್ಷಗಾನದ ಮೇಲಿನ ಭಕ್ತಿ ಶ್ರದ್ಧೆಯಿಂದ ನಾವೆಲ್ಲರೂ ಜೊತೆಯಾಗಿದ್ದೇವೆ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುತ್ತಿರುವ ಇಂತಹ ಸಂಘಟನೆ ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.