ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಮಂಗಳೂರು ಮೂಡಬಿದರೆ ಘಟಕದ 8ನೇ ವಾರ್ಷಿಕೋತ್ಸವವು ಎರಡು ದಿನಗಳ ಪರ್ಯಂತ ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಪಾವಂಜೆ ಮೇಳದ ನೇಪಥ್ಯ ಕಲಾವಿದ ಮಹಾಲಿಂಗ ನಾಯ್ಕ್ ನೀರ್ಚಾಲು ಇವರನ್ನು ಸನ್ಮಾನಿಸಲಾಯಿತು. ಶಾಂತರಾಮ ಕುಡ್ವ ಇವರು ಅಭಿನಂದನಾ ಭಾಷಣ ಮಾಡಿದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಘಟಕದ ಗೌರವಾಧ್ಯಕ್ಷರಾದ ಶ್ರೀಪತಿ ಭಟ್, ಸುಬ್ರಹ್ಮಣ್ಯ ಭಟ್ ಅಲಂಗಾರು, ಪ್ರೇಮನಾಥ ಮಾರ್ಲ, ಸದಾಶಿವ ರಾವ್ ನೆಲ್ಲಿಮಾರ್ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.