ದಿನಾಂಕ 6.01.2025ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಯಕ್ಷಧ‍್ರುವ ಪಟ್ಲಾ ಫೌಂಡೇಶನ್ ರಿ.ಮಂಗಳೂರು ವಿಟ್ಲ ಘಟಕದ ಸಹಯೋಗದಲ್ಲಿ ಉಚಿತ ಯಕ್ಷ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ರಂಗ ಪ್ರವೇಶ ಹಾಗೂ ಮಕ್ಕಳ ಯಕ್ಷಗಾನ ಪ್ರದರ್ಶನ ಯಕ್ಷ ಗುರುಗಳಾದ ಗಣೇಶ ಆಚಾರ್ಯರವರ ನಿರ್ದೇಶನದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿತು.
ಕಿಕ್ಕರಿದು ತುಂಬಿದ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಈ ಕಾರ್ಯಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪುರುಷೋತ್ತಮ ಗೌಡ ಕಲ್ಲಂಗಳ ವಹಿಸಿದ್ದರು. ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕಾರ್ಯದರ್ಶಿಯಾದ ಪೂವಪ್ಪ ಶೆಟ್ಟಿ ಅಳಿಕೆ, ಮುಖ್ಯ ಅತಿಥಿಯವರಾದ ಹಿರಿಯ ವಿದ್ಯಾರ್ಥಿ ಮೋಹನ್ ಮೈರ, ನಿರ್ಮಲ ಕೆಎನ್, ನಿವೃತ್ತ ಬ್ಯಾಂಕ್ ಪ್ರಬಂಧಕರು ಬ್ಯಾಂಕ್ ಆಫ್ ಬರೋಡ, ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ, ವಿನೋದ್ ಶೆಟ್ಟಿ ಚೆಲ್ಲಡ್ಕ, ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಪ್ರಕಾಶ್ ರೈ ಕಲ್ಲಂಗಳ, ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಪಡಿಬಾಗಿಲು, ಮುಖ್ಯ ಶಿಕ್ಷಕಿ ಭಾಗೀರಥಿ, ಸಿಆರ್ ಪಿ ಪುಷ್ಪಾವತಿ ಬಲ್ಲಾಳ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿಧರ್ ರೈ ಗುತ್ತು ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ವರದಿ ವಾಚಿಸಿದರು. ಸಹಶಿಕ್ಷಕಿ ಜಯಂತಿ ವಂದಿಸಿದರು. ಶ್ರೀಉಳ್ಳಾಳ್ತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಉಮೇಶ್ ಗೌಡ ಕೊರತಿಗದ್ದೆ, ಟ್ರಸ್ಟಿಗಳು,ಎಸ್.ಡಿ.ಎಂ.ಸಿ.ಸದಸ್ಯರು ಸಹಕರಿಸಿದರು.