yakshadhruvapatlafoundation.org

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕೇಂದ್ರೀಯ ಮಹಿಳಾ ಘಟಕದ 8ನೇ ವಾರ್ಷಿಕೋತ್ಸವ ಸುರತ್ಕಲ್‌ ನ ಬಂಟರ  ಭವನದಲ್ಲಿ ಈಚೆಗೆ ನಡೆಯಿತು. ಶಕುಂತಳಾ ರಮಾನಂದ ಭಟ್,  ಚಂದ್ರಕಲಾ ಬಾಲಕೃಷ್ಣ ಶೆಟ್ಟಿ, ಭಾರತಿ ಗಂಗಾಧರ್, ಮಮತಾ ಹೆಗ್ಡೆ ಹಾಗೂ ಸತ್ಯವತಿ ಡಿ. ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೃತ್ಯ ವಿದುಷಿ ಪ್ರತಿಭಾ ಎಲ್. ಸಾಮಗ ಮಾತನಾಡಿ, ‘ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ಸಹ ‘ಯಕ್ಷಗಾನದಲ್ಲಿ ಮುಂಚೂಣಿಯಲ್ಲಿದ್ದು ಕಲಾಸೇವೆ ಮಾಡುತ್ತಿದ್ದಾರೆ. ಅದರಲ್ಲೂ, ಮಕ್ಕಳು ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು. ಭಾಗವತ ಪಟ್ಲ ಸತೀಶ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ವಿದ್ಯಾ ರಾಕೇಶ್, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಸುಜಾತಾ ಧನಂಜಯ ಶೆಟ್ಟಿ ಹೊಸಬೆಟ್ಟು, ಚೈತ್ರಾ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ ಹಾಗೂ ಜ್ಯೋತಿ ಸುನಿಲ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಚೈತ್ರಾ ಎಚ್. ರಾವ್, ವಿದುಷಿ ವೈಷ್ಣವಿ ಸಾತ್ವಿಕ್ ರಾವ್, ವಿದುಷಿ ಮೈತ್ರಿ ಭಟ್ ಅವರನ್ನು ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರಿ, ಕೋಶಾಧಿಕಾರಿ ಭಾರತಿ ಎಸ್. ರಾವ್,  ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಇದ್ದರು. ಪೂರ್ಣಿಮಾ ಯತೀಶ್ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಆರತಿ ಆಳ್ವ ವಂದಿಸಿದರು. ಸಾಯಿಸುಮಾ ನಾವಡ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ಕಲಾವಿದೆಯರಿಂದ ದಶಾವತಾರ ಪ್ರದರ್ಶನಗೊಂಡಿತು.

[Best_Wordpress_Gallery id=”199″ gal_title=”ಪಟ್ಲ: ಮಹಿಳಾ ಘಟಕದ ವಾರ್ಷಿಕೋತ್ಸವ”]

Leave a Reply

Your email address will not be published. Required fields are marked *