ಪ್ರತೀ ವರ್ಷ ಪಟ್ಲಾಭಿಮಾನಿಗಳು, ಯಕ್ಷಗಾನ ಅಭಿಮಾನಿಗಳು ಕಾಯುವ ದಿನ ಬಂದೇ ಬಿಟ್ಟಿದೆ. ಪಟ್ಲ ಫೌಂಡೇಶನ್ ವತಿಯಿಂದ ನಡೆಯುವ ಪಟ್ಲ ಸಂಭ್ರಮ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ.
ಮೇ 30ರಂದು ಅಡ್ಯಾರ್ ಗಾರ್ಡನ್ನಲ್ಲಿ ಪಟ್ಲ ಸಂಭ್ರಮ ನಡೆಯುತ್ತಿದ್ದು, ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಲಾಗುತ್ತಿದೆ.

