Mangaluru News: ಹಲವು ಕಲಾವಿದರಿಗೆ ಮನೆ ನಿರ್ಮಾಣ ಮಾಡಿ ಕೊಡುತ್ತಿರುವ ಪಟ್ಲ ಫೌಂಡೇಶನ್ ವತಿಯಿಂದ, ಇನ್ನೋರ್ವ ಕಲಾವಿದರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ವಿಶೇಷ ಅಂದ್ರೆ ಇದು ಪಟ್ಲ ಫೌಂಡೇಶನ್ ವತಿಯಿಂದ ಕಲಾವಿದರಿಗೆ ನೀಡುತ್ತಿರುವ 36ನೇ ಮನೆಯಾಗಿದೆ.
ಬೇಬಿ ಮತ್ತು ಬಾಲಕೃಷ್ಣ ಪುರುಷ ಎಂಬುವವರಿಗೆ ಪರುವಾಯಿಯ ಓಣಿ ಬಾಗಿಲು ಎಂಬಲ್ಲಿ ಮನೆ ನಿರ್ಮಾಣಕ್ಕಾಗಿ ಪಟ್ಲ ಫೌಂಡೇಶನ್ ಸಹಾಯ ಮಾಡಿದ್ದು, ಅಜೇಯ ಎಂಬ ಮನೆಯ ಗೃಹಪ್ರವೇಶ ಕಾರ್ಯ ಸುಭೀಕ್ಷವಾಹಿ ನೆರವೇರಿದೆ.
Triangle ತುಳುವೇರ್ ಚಾವಡಿ Raleigh USA ಇವರು ಕೊಡುಗೆ ನೀಡಿದ್ದು, ಪಟ್ಲ ಫೌಂಡೇಶನ್ ನ ಗೌರವ ಮಾರ್ಗದರ್ಶಕರಾದ ಶ್ರೀ ಪಟ್ಲಾಗುತ್ತು ಮಹಾಬಲ ಶೆಟ್ಟಿ ಗೃಹಪ್ರವೇಶ ಕಾಾರ್ಯಕ್ರಮಕ್ಕೆ ಆಗಮಿಸಿ, ಮನೆಯನ್ನು ಬೇಬಿ ಮತ್ತು ಬಾಲಕೃಷ್ಣ ಅವರಿಗೆ ಹಸ್ತಾಂತರಿಸಿದರು.
ಇದೇ ವೇಳೆ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೂವಪ್ಪ ಶೆಟ್ಟಿ ಅಳಿಕೆ ,ವಿಟ್ಲ ಘಟಕದ ಪದಾಧಿಕಾರಿಗಳಾದ ಶ್ರೀ ಭಾಸ್ಕರ್ ಶೆಟ್ಟಿ ವಿಟ್ಲ, ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ಶ್ರೀ ರೋಹಿತ್ ರೈ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಅವರು ಉಪಸ್ಥಿತರಿದ್ದರು.