yakshadhruvapatlafoundation.org

ಪಳ್ಳಿ ನಿಂಜೂರು : ಯಕ್ಷ ಶಿಕ್ಷಣ ನಾಟ್ಯ ತರಬೇತಿ

ಯಕ್ಷಧ್ರುವ ಪಟ್ಲ ಪೌಂಡೇಶನ್ ಪಳ್ಳಿ ನಿಂಜೂರು ಇದರ ವತಿಯಿಂದ ಪಳ್ಳಿ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಬಹುಮೇಳಗಳ ವ್ಯವಸ್ಥಾಪಕರಾದ ಪಳ್ಳಿ ಕಿಶನ್ ಹೆಗ್ಡೆ ಉದ್ಘಾಟಿಸಿದರು.

ಬೋಳಂತೂರು: ಯಕ್ಷಧ್ರುವ ಪಟ್ಲ ಪೌಂಡೇಷನ್ ಪ್ರಾಯೋಜಿತ ಯಕ್ಷಧ್ರುವ-ಯಕ್ಷ ಶಿಕ್ಷಣ

ಬಂಟ್ವಾಳ ತಾಲ್ಲೂಕಿನ ಬೋಳಂತೂರು ಚಿಣ್ಣರ ಲೋಕಸೇವಾಬಂಧು ದತ್ತು ಸ್ವೀಕರಿಸಿ ಉನ್ನತಿಕರಿಸಿದ ಸರಕಾರಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಷನ್ ಪ್ರಾಯೋಜಿತ ಯಕ್ಷಧ್ರುವ-ಯಕ್ಷ ಶಿಕ್ಷಣವನ್ನು ಶಾಲಾ ಮೇಲುಸ್ತುವಾರಿ ಅಧ್ಯಕ್ಷರಾದ ಕೃಷ್ಣಪ್ಪ ಸಪಲ್ಯರ ಅಧ್ಯಕ್ಷತೆಯಲ್ಲಿ ಸರಳ ಸಮಾರಂಭದ ಮೂಲಕ ಉದ್ಘಾಟನೆ ಮಾಡಲಾಯ್ತು.

ನಿಡ್ಲೆ: ಯಕ್ಷನಾಟ್ಯ ತರಬೇತಿ ಉದ್ಘಾಟನೆ

ದಿನಾಂಕ 18-06-2024 ರಂದು ಅಪರಾಹ್ನ 2.30 ಗಂಟೆಗೆ  ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ ) ಯಕ್ಷ ಶಿಕ್ಷಣ ಯೋಜನೆಯ ಅಡಿಯಲ್ಲಿ ಸರ್ಕಾರಿ ಪ್ರೌಢ ಶಾಲೆ ನಿಡ್ಲೆ, ಬೆಳ್ತಂಗಡಿ ತಾಲೂಕು ಇಲ್ಲಿ  2024-25 ನೇ ಸಾಲಿನ ಯಕ್ಷನಾಟ್ಯ ತರಬೇತಿ ಉದ್ಘಾಟನೆಗೊಂಡಿತು.

‘ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮ ಯಕ್ಷಗಾನ’: ಗಿರೀಶ್ ಶೆಟ್ಟಿ

ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಸಮಾಜ ಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಯಕ್ಷಗಾನವು ಒಂದು ರಮ್ಯ ಅದ್ಬುತ ಕಲೆ ಎಂದು ಗಿರೀಶ್ ಶೆಟ್ಟಿ ಅಧ್ಯಕ್ಷರು ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು ಎಕ್ಕಾರು ಘಟಕ ಇವರು ಅಭಿಪ್ರಾಯಪಟ್ಟರು.

ಮಂಚಿ ಕೊಳ್ನಾಡು ಪ್ರೌಢಶಾಲೆ: ಯಕ್ಷಧ್ರುವ – ಯಕ್ಷ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮ

ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಇವರು ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಯಕ್ಷಧ್ರುವ ಯಕ್ಷ ಶಿಕ್ಷಣ ಎನ್ನುವ ವಿಶೇಷ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯಕ್ಷಗಾನ ಕಲಿಕಾ ಯೋಜನೆಯು ಕಳೆದ ಶೈಕ್ಷಣಿಕ ಸಾಲಿನಿಂದ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಆಯೋಜಿಸುತ್ತಾ ಬರುತ್ತಿದ್ದು, ಎರಡನೇ ಅವಧಿಯ 2024 – 25ನೇ ಶೈಕ್ಷಣಿಕ ಸಾಲಿನ ಯಕ್ಷ ಶಿಕ್ಷಣದ ಉದ್ಘಾಟನಾ ಕಾರ್ಯಕ್ರಮನ್ನು ಮಂಚಿ ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 14-06-2024 ರಂದು ನೆರವೇರಿಸಲಾಯಿತು.

ದುಬೈ ಯಕ್ಷೋತ್ಸವ 2024: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಆತ್ಮೀಯ ಸ್ವಾಗತ

ಯಕ್ಷಗಾನ ಅಭ್ಯಾಸ ಕೇಂದ್ರ UAE ಅರ್ಪಿಸುವ ” ದುಬೈ ಯಕ್ಷೋತ್ಸವ 2024 ” ಕಾರ್ಯಕ್ರಮಕ್ಕೆ ಆಗಮಿಸಿದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಕ್ಷಧ್ರುವ ದುಬೈ ಘಟಕದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು

ಪಟ್ಲ ಸಂಭ್ರಮ: ಧನ್ಯೋತ್ಸವ ಕಾರ್ಯಕ್ರಮ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್‌ ನಲ್ಲಿ ‘ಪಟ್ಲ ಸಂಭ್ರಮ-2024’ ಯಶಸ್ವಿಯಾಗಿ ನಡೆದ ಹಿನ್ನಲೆಯಲ್ಲಿ ಅಡ್ಯಾರ್‌ ನ ಸಂಭ್ರಮ ಸಭಾಂಗಣದಲ್ಲಿ ಧನ್ಯೋತ್ಸವ ಕಾರ್ಯಕ್ರಮ ನಡೆಯಿತು.

ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪದಲ್ಲಿ ನಟ ಕಿಚ್ಚ ಸುದೀಪ್

ಪಟ್ಲ ಫೌಂಡೇಶನ್ ಆಲದ ಮರ ಇದ್ದಂತೆ. ಕಲಾವಿದರ ಕಷ್ಟವನ್ನು ಅರಿತು ಸಂಘಟನೆ ಅವರನ್ನು ಸಲಹುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಸಾಮಾಜಿಕ ಕಾರ್ಯ ಅದ್ಭುತವಾದದ್ದು. ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ದಾನಿಗಳ ಜೊತೆಗೆ ವೇದಿಕೆ ಹಂಚಿಕೊಳ್ಳಲು ಖುಷಿ ಆಗುತ್ತದೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಜರುಗಿದ ಯಕ್ಷಧ್ರುವ ಪಟ್ಟ ಸಂಭ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಂಪತ್ತನ್ನು ಕೂಡಿಡುವ ಬದಲು ಹಂಚಿದರೆ ಅದು ದುಪ್ಪಟ್ಟಾಗುತ್ತದೆ: ಕನ್ಯಾಡಿ ಶ್ರೀ

ನಮ್ಮಲ್ಲಿರುವ ಸಂಪತ್ತನ್ನು ಕೂಡಿಡುವ ಬದಲು ಯೋಗ್ಯರಿಗೆ ಹಂಚಿದರೆ ಅದು ದುಪ್ಪಟ್ಟಾಗುತ್ತದೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ನಾಣ್ಣುಡಿಯಂತೆ ನಾವು ಬದುಕಬೇಕು. ಮನುಷ್ಯ ಜನ್ಮವನ್ನು ನಮಗೆ ಭಗವಂತ ನೀಡಿದ್ದಾನೆ

ಪ್ರಶಸ್ತಿ ಸಿಗದಿದ್ದರೂ ಕಲಾವಿದ ಸಣ್ಣವನಾಗಲ್ಲ: ರಾಮಚಂದ್ರ ಹೆಗಡೆ

ಈ ಪ್ರಶಸ್ತಿ ನನಗೆ ಸಿಕ್ಕಿದ್ದುಅಲ್ಲವೇ ಅಲ್ಲ. ನನ್ನ ಅಜ್ಜ ಮತ್ತು ಗುರು ಕೊಂಡದಕುಳಿ ರಾಮ ಹೆಗಡೆ, ನನ್ನನ್ನು ಬೆಳೆಸಿದ ಕಾಳಿಂಗ ನಾವಡರಿಗೆ ಸಿಗಬೇಕಾದ ಪ್ರಶಸ್ತಿ ಇದು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ಊರಿಂದ ಊರಿಗೆ ನಡೆದುಹೋಗಿ ಯಕ್ಷಗಾನ ಕಲೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ್ದಾರೆ. ಯಕ್ಷಗಾನಕ್ಕೆ ಬದುಕನ್ನೇ ಸವೆಸಿದ್ದಾರೆ. ಅವರಿಗೆ ಪ್ರಶಸ್ತಿಯೂ ಇಲ್ಲ, ಸಂಬಳವೂ ಇಲ್ಲ. ಅದರ ಫಲವನ್ನು ಈಗಿನ ತಲೆಮಾರಿನವರು ಅನುಭವಿಸುತ್ತಿದ್ದೇವೆ. ತೆಂಕುತಿಟ್ಟು ಆಗಲಿ, ಬಡಗು ಆಗಲಿ, ಬಡಾಬಡಗು ಆಗಲಿ ಯಕ್ಷಗಾನ ಕಲಾವಿದರು ಪರಸ್ಪರ ಗೌರವಿಸುವುದನ್ನು ಮೊದಲು ಕಲಿಯಬೇಕು