Skip to main content

yakshadhruvapatlafoundation.org

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್: ಸುರತ್ಕಲ್ ಘಟಕದ 4ನೇ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು- ಸುರತ್ಕಲ್ ಘಟಕದ 4ನೇ ವಾರ್ಷಿಕೋತ್ಸವವು ಸುರತ್ಕಲ್ ಭಂಟರ ಭವನದ ಆವರಣದಲ್ಲಿ ನಡೆಯಿತು. ಸುರತ್ಕಲ್ ಘಟಕದ ಅಧ್ಯಕ್ಷರಾದ ಸುಧಾಕರ ಎಸ್. ಪೂಂಜ ಸ್ವಾಗತಿಸಿ ಜಗನ್ನಾಥ ಶೆಟ್ಟಿ ಬಾಳ ಇವರು ಪ್ರಸ್ತಾವನೆಗೈದರು.

ಯಕ್ಷಧ್ರುವ ಪಟ್ಲ ಸಂಭ್ರಮ 2024: ಆಮಂತ್ರಣ ಪತ್ರಿಕೆಯ ಬಿಡುಗಡೆ

ಯಕ್ಷಧ್ರುವ ಪಟ್ಲ ಸಂಭ್ರಮ 2024 ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಕದ್ರಿ ಮೈದಾನದಲ್ಲಿ ನಡೆಯುತ್ತಿರುವ ಪಾವಂಜೆ ಮೇಳದ ರಂಗವೇದಿಕೆಯಲ್ಲಿ ಕದ್ರಿ ಜೋಗಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಇವರ ಶಿಷ್ಯರು, ಯಕ್ಷಧ್ರುವ ಪಟ್ಲ ಫೌಂಡೇಶನ್’ನ ಸ್ಥಾಪಕಧ್ಯಕ್ಷರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಪಟ್ಲ ಸಂಭ್ರಮ 2024 ಇದೇ ಬರುವ 26-05-2024ರಂದು ಮಂಗಳೂರಿನ ‌ಅಡ್ಯಾರ್ ಗಾರ್ಡನ್’ನಲ್ಲಿ ನಡೆಯಲಿದೆ.

ಯಕ್ಷ ಕಲಾವಿದನಿಗೆ ನೂತನ ಗೃಹ ಹಸ್ತಾಂತರ

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಯಕ್ಷಗಾನ ರಂಗದ ಹಿರಿಯ ಕಲಾವಿದರು ಸಸಿಹಿತ್ಲು ಭಗವತೀ ಮೇಳದ ಶ್ರೀ ಗುಡ್ಡಪ್ಪ ಸುವರ್ಣರಿಗೆ ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ಪಟ್ಲ ಫೌಂಡೇಶನಿನ ಮೂಲಕ ನೂತನ ಮನೆಯನ್ನು ನಿರ್ಮಿಸಿ ಗೃಹಪ್ರವೇಶ ಕಾರ್ಯಕ್ರಮ ನೆರವೇರಿಸಿ ಮನೆಯನ್ನು ಹಸ್ತಾಂತರಿಸಲಾಯಿತು.

ಪಟ್ಲ ಯಕ್ಷಗಾಯನದಲ್ಲಿ ಕಟೀಲು ದೇವಿ ಸ್ತುತಿ

ವಿಕ ಸುದ್ದಿಲೋಕ ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಸಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿ ಕುಟುಂಬದ ಸೇವಾ ಸಂಕಲ್ಪವಾದ ಚಿನ್ನದ ರಥೋತ್ಸವ ಸೇವೆ ಸಕಲ ಧಾರ್ಮಿಕ ವಿಧಿಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು. ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು. ಅರಿಕೆ ಸಿದ್ದಿಗಾಗಿ ಹರಕೆ: ಹೆಣ್ಣು ಮಗು ಬೇಕೆಂದು ಪಟ್ಲ ಸತೀಶ್ ಶೆಟ್ಟಿ- ನಿರ್ಮಿತಾ ಶೆಟ್ಟಿ ದಂಪತಿಯ ಪ್ರಾಂಜಲ ಮನಸ್ಸಿನ ಪ್ರಾರ್ಥನೆ ಫಲಿಸಿ ಜನಿಸಿದ ಹೆಣ್ಣು ಮಗು ರಿತ್ವಿಕಾ ಹೆಸರಲ್ಲಿ ಸಂಕಲ್ಪ ಮಾಡಿದಂತೆ ದೇವಿ ಭ್ರಮರಾಂಬಿಕೆ […]

ಉಡುಪಿಯಲ್ಲಿ 40ನೇ ಘಟಕ ಸ್ಥಾಪನೆ: ಅಧ್ಯಕ್ಷರಾಗಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

ಟ್ರಸ್ಟ್ ನ 40ನೇ ನೂತನ ಉಡುಪಿ ಘಟಕದ ಅಧ್ಯಕ್ಷರನ್ನಾಗಿ ” ಸಹಕಾರಿ ರತ್ನ ” ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಒಮ್ಮತದೊಂದಿಗೆ ಆಯ್ಕೆ ಮಾಡಲಾಯಿತು. ಶ್ರೀಯುತರು ಹಿರಿಯ ಯಕ್ಷಗಾನ ಸಂಸ್ಥೆ ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು, ಉಡುಪಿಯ ಗೌರವಾಧ್ಯಕ್ಷರಾಗಿ ಹಾಗೂ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುತ್ತಾರೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಪದಪ್ರದಾನ

ಪಟ್ಲ ಫೌಂಡೇಶನ್‌ನಲ್ಲಿ ಸ್ವಾರ್ಥವಿಲ್ಲ, ವ್ಯಕ್ತಿಗತವಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಯಕ್ಷರಂಗದ ಕಲಾವಿದರ ಬದುಕಿಗೋಸ್ಕರ ಸೇವೆ ನೀಡುವುದಾಗಿದೆ ಮಾತ್ರವಲ್ಲ ಇದರಿಂದ ನಮಗೆ ಆತ್ಮ ತೃಪ್ತಿ ಲಭಿಸುತ್ತದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಮಾತೃ ಘಟಕದ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿರವರು ಹೇಳಿದರು.

ಕನ್ನಡದ ಶುದ್ಧ ಭಾಷೆಯನ್ನು ಯಕ್ಷಗಾನದಲ್ಲಿ ಕಾಣಬಹುದು-ಶಾಸಕ ಗುರುರಾಜ ಗಂಟಿಹೊಳೆ

ಕನ್ನಡದ ಶುದ್ದ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು, ಸಂಸ್ಕಾರ, ಶ್ರದ್ದಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ. ಕರಾವಳಿಯ ಗಂಡುಕಲೆಯಲ್ಲಿ ಸಂಘಟನೆಯ ಜೊತೆಗೆ ಭಾಷಾ ಶುದ್ದತೆಯೂ ಇದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಗೋವಾ ಘಟಕ ಉದ್ಘಾಟನೆ

ಟ್ರಸ್ಟ್‌ನ ಕಾರ್ಯವೈಖರಿಯಲ್ಲಿ ನಾನು ಕೇವಲ ನಿಮಿತ್ತ, ಎಲ್ಲವೂ ಕಟೀಲು ಅಮ್ಮನವರ ಕೃಪೆ. ಹೃದಯ ಶ್ರೀಮಂತ ದಾನಿಗಳಿಂದ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕಲಾಸೇವೆಯಲ್ಲಿ ಮುಂದುವರೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟರು.