yakshadhruvapatlafoundation.org

ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟರಿಗೆ ಪ್ರಶಸ್ತಿ ಪ್ರದಾನ

ಯಕ್ಷಗಾನಕ್ಕೆ ಹೊಸ ಆಯಾಮ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ್ ಶೆಟ್ಟಿ ಅವರು. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ. ಅದರಲ್ಲಿ ಶಶಿಧರ್ ಶೆಟ್ಟಿ ಅವರಿಗೆ ಅವರ ತಾಯಿ ಕಾಶಿ ಶೆಟ್ಟಿ ಅವರ ಆಶೀರ್ವಾದದಿಂದ ಬಂದಿದೆ ಎಂದು ಹರೀಶ್ ಪೂಂಜ ಅಭಿಪ್ರಾಯಪಟ್ಟರು.

ಜಾತಿ, ಧರ್ಮ ಒಗ್ಗೂಡಿಸುವ ಕಾರ್ಯ: ಪೂಂಜ

ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧ‌ರ ಶೆಟ್ಟಿ ಅವರು. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನವೂ ಸೇರಲಿ

ಗುಣಾತ್ಮಕ ಶಿಕ್ಷಣಕ್ಕೆ ಯಕ್ಷಗಾನ ಪೂರಕ ಕಲೆ. ಪ್ರತಿವರ್ಷ ಶಿಕ್ಷಣ ಇಲಾಖೆಯಿಂದ ಪ್ರತಿಭಾ ಕಾರಂಜಿ ನಡೆಸಲಾಗುತ್ತಿದೆ. ಆದರೆ ಈವರೆಗೆ ಯಕ್ಷಗಾನ ಸೇರ್ಪಡೆಯಾಗಿರಲಿಲ್ಲ. ಮುಂದೆ ಪ್ರತಿಭಾ ಕಾರಂಜಿಯಲ್ಲೂ ಯಕ್ಷಗಾನ ಸೇರ್ಪಡೆಗೊಳಿಸುವಂತೆ ಇಲಾಖೆಗೆ ನಾನು ಮನವಿ ಮಾಡುತ್ತೇನೆ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಹೇಳಿದರು.

ಯಕ್ಷಗಾನ ಕಲೆಗೆ ಹೊಸ ರೂಪ ಕೊಟ್ಟ ಯಕ್ಷಧ್ರುವ

ಯಕ್ಷಗಾನ ಶ್ರೀಮಂತ ಕಲೆಯಾಗಿದೆ. ಕಲೆಗೆ, ಕಲಾವಿದರ ಬದುಕಿಗೆ ಹೊಸ ರೂಪ ಕೊಟ್ಟವರು ಸತೀಶ್ ಶೆಟ್ಟಿ ಪಟ್ಲ. ಯಕ್ಷಧ್ರುವ ಪಟ್ಲ ಫೌಂಡೇಷನ್ ಗೆ ಶಕ್ತಿಯಾಗಿ ನಿಂತ ಉದ್ಯಮಿ ಶಶಿಧರ ಶೆಟ್ಟಿಯವರು ತಾಲೂಕಿನಲ್ಲಿ ಯಕ್ಷ ಸಂಭ್ರಮ ನಡೆಸಿ ಕಲೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ.

ಡಿ. 14 ಗುರುವಾಯನಕೆರೆಯಲ್ಲಿ ಯಕ್ಷ ಸಂಭ್ರಮ

ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಡಿಸೆಂಬರ್ 14 ಶನಿವಾರದಂದು ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ “ಯಕ್ಷ ಸಂಭ್ರಮ” ಅದ್ದೂರಿಯಾಗಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಮಾಹಿತಿ ನೀಡಿದರು.

ಬೆಳ್ತಂಗಡಿ ಘಟಕ ಯಕ್ಷ ಸಂಭ್ರಮ: ಉಜಿರೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಬಿಡುಗಡೆಗೊಳಿಸಿದರು.

ಬಹರೈನ್‌ನಲ್ಲಿ ಪಟ್ಲ ಫೌಂಡೇಶನ್ 4ನೇ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬಹರೈನ್ ಮತ್ತು ಸೌದಿ ಘಟಕದ ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮ ನವೆಂಬರ್ 1ರಂದು ಬಹರೈನ್ ಮನಾಮದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.

ಓಂ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಂಟ್ವಾಳ ಜಯರಾಮ ಆಚಾರ್ಯರ ಸಂಸ್ಮರಣೆ

ಓಂ ಫ್ರೆಂಡ್ಸ್ ಕ್ಲಬ್ (ರಿ) ಕಳ್ಳಿಗೆ- ಪಚ್ಚಿನಡ್ಕ ಇದರ ರಜತ ಸಂಭ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಹಾಸ್ಯಗಾರರು ಬಂಟ್ವಾಳ ಜಯರಾಮ ಆಚಾರ್ಯ ಇವರ ಸಂಸ್ಮರಣೆ ಮತ್ತು  ಧನಸಹಾಯ ಮಾಡಲಾಯಿತು.

ನಾಗತೀರ್ಥ ಚಿಟ್ಸ್ ತೀರ್ಥಹಳ್ಳಿ: ಪಟ್ಲ ಸತೀಶ್ ಶೆಟ್ಟಿಯವರಿಗೆ ವಿಶೇಷ ಗೌರವ

ನಾಗತೀರ್ಥ ಚಿಟ್ಸ್ ತೀರ್ಥಹಳ್ಳಿ ಇದರ ಪ್ರಧಾನ ಕಚೇರಿಯಲ್ಲಿ ತೀರ್ಥಹಳ್ಳಿಯ ಗಣ್ಯರ ಸಮ್ಮುಖದಲ್ಲಿ ಪಟ್ಲ ಸತೀಶ್ ಶೆಟ್ಟಿಯವರಿಗೆ ವಿಶೇಷ ಗೌರವ ಅಭಿವಂದನೆ ಸಲ್ಲಿಸಲಾಯಿತು.

ಸಿಹಿಮೊಗೆ ಸಂಭ್ರಮ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ

ಅನವರತ – ಸಿರಿಮೊಗೆ 01 ಕಾರ್ಯಕ್ರಮ ನಿಮಿತ್ತ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಮೇಳದ ಸಂಚಾಲಕರು- ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಶಿವಮೊಗ್ಗದ ಶಾಸಕರಾದ ಎಸ್. ಎನ್. ಚನ್ನಬಸಪ್ಪ ಇವರು ಗೌರವಿಸಿದರು.