Skip to main content

yakshadhruvapatlafoundation.org

ಕಾರ್ಕಳ: 9ನೇ ಪಟ್ಲ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ರಿ. ಮಂಗಳೂರು ಇದರ ಕಾರ್ಕಳ ಘಟಕದ ಒಂಬತ್ತನೇ ಪಟ್ಲ ಸಂಭ್ರಮವು ಇದೇ ನವೆಂಬರ್‌ 16 ನೇ ಶನಿವಾರ ಕಾರ್ಕಳ ಮಾರಿಗುಡಿಯ ವಠಾರದಲ್ಲಿ ನಡೆಯಲಿದ್ದು, ಇಂದು ಆಮಂತ್ರಣ ಪತ್ರಿಕೆ ಮಾರಿಯಮ್ಮನ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಲಾಯಿತು.

ರಂಗ ಶಂಕರ ಆಡಿಟೋರಿಯಂನಲ್ಲಿ ಅಪಾರ ಮೆಚ್ಚುಗೆ ಗಳಿಸಿದ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನ

ಪಟ್ಲ ಸತೀಶ್ ಶೆಟ್ಟಿ ನೇತ್ರತ್ವದಲ್ಲಿ ರಂಗಭೂಮಿ ಹಾಗೂ ಚಲನಚಿತ್ರದಲ್ಲಿ ಮಿಂಚಿದ ಮೇರುನಟ ದಿ| ಶಂಕರ್ ನಾಗ್ ಇವರ ಧರ್ಮಪತ್ನಿ ಅರುಂಧತಿ ನಾಗ್ ಅವರ ಪರಿಕಲ್ಪನೆಯ  ರಂಗ ಶಂಕರ ಆಡಿಟೋರಿಯಂನಲ್ಲಿ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನ ಪ್ರಬುದ್ಧ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕನ್ಯಾನ ಸದಾಶಿವ ಶೆಟ್ಟಿ ಆಯ್ಕೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೊಡುಗೈ ದಾನಿಗಳೂ, ಶ್ರೇಷ್ಠ ಉದ್ಯಮಿಯಾಗಿ ಸಹಸ್ರಾರು ಕುಟುಂಬಗಳಿಗೆ ಉದ್ಯೋಗದಾತರಾಗಿ, ಅನ್ನದಾತರಾಗಿ ತುಳುನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಭೂಪಟದಲ್ಲಿ ಮಿನುಗಿಸಿದ, ಮಾರ್ಗದರ್ಶಕರಾದ ಮಂಗಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. 

ತ್ರಿರಂಗ ಸಂಗಮ ಮುಂಬಯಿ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೌರವ

ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಮುಂಬಯಿ ಯಾನ 2024ರ ಸಮಾರೋಪ ಸಮಾರಂಭ, ಶ್ರೀ ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನ ನಡೆಯಿತು.

ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈ ಹಸ್ತಾಂತರ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ  ಸತೀಶ್ ಅವರ  ಕನಸಿನ ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಶ್ರೀ ಧರ್ಮಸ್ಥಳದ  ಮೇಳದ ಚೆಂಡೆ ವಾದಕರಾದ ಶ್ರೀ ಚಂದ್ರಶೇಖರವರಿಗೆ ಹಸ್ತಾಂತರಿಸಲಾಯಿತು.

‘ಆಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನ; ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ

ನಮ್ಮ ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿರಿಸಿಕೊಂಡು ಬೆಳೆಸುವಂತರಾಗಬೇಕು, ಕೇವಲ ಶ್ರೀಮಂತರಾಗಿದ್ದರೆ ಸಾಲದು. ಹೃದಯ ಶ್ರೀಮಂತಿಕೆ ನಮ್ಮಲ್ಲಿರಬೇಕು.

ಯಕ್ಷಾಶ್ರಯ ಫಲಾನುಭವಿಗಳಿಗೆ ಗೃಹನಿರ್ಮಾಣ ಮೊತ್ತದ ವಿತರಣೆ

ಪಟ್ಲ ಯಕ್ಷಾಶ್ರಯ ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಿದ ಯಕ್ಷಗಾನ ಕಲಾವಿದರು ಹಾಗೂ ದೈವಾರಾಧನೆ ಕ್ಷೇತ್ರದ ದೈವ ನರ್ತಕರು ಈಗಾಗಲೇ ಗೃಹನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದಾರೆ. ಈ ನಿರ್ಮಾಣಕ್ಕಾಗಿ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು, ಕೊಡುಗೈ ದಾನಿಗಳು ನೀಡಿದ ಸುಮಾರು 15 ಲಕ್ಷ ಮೊತ್ತವನ್ನು ಫಲಾನುಭವಿಗಳಿಗೆ ದಿನಾಂಕ 21-10-2024 ಸೋಮವಾರ ಸಂಜೆ ಫೌಂಡೇಶನ್ ನ ಆಫೀಸಿನಲ್ಲಿ ವಿತರಿಸಿದರು.

ತ್ರಿರಂಗ ಸಂಗಮ ಮುಂಬಯಿ ಇದರ ಸಂಯೋಜನೆಯಲ್ಲಿ ಪಾವಂಜೆ ಮೇಳ

ತ್ರಿರಂಗ ಸಂಗಮ ಮುಂಬಯಿ ಇದರ ಸಂಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಪಾವಂಜೆ ಮೇಳದ 2024ರ ಮುಂಬಯಿ ಯಾನದ ಎರಡನೇ ದಿನದ ಕಾರ್ಯಕ್ರಮವು ಅಂಧೇರಿ ಪೂರ್ವದ ಶ್ರೀ ದತ್ತ  ಜಗದಂಬಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಗೋವಾದಲ್ಲಿಯು ಯಕ್ಷಗಾನ ಕಲೆ ಬೆಳೆಸಿದ ರೀತಿ ಹೆಮ್ಮೆ ಪಡವಂತದ್ದು- ಸತೀಶ್ ಪಟ್ಲ

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಲೆ ಬೆಳೆದ ರೀತಿ, ಗೋವಾದಲ್ಲಿ ನೀವೆಲ್ಲರೂ ಸೇರಿ ಕಲೆ ಬೆಳೆಸಿದ ವಿಷಯ ತಿಳಿದು ನನಗೆ ಹೆಮ್ಮೆ ಅನಿಸುತ್ತದೆ. ಯಕ್ಷಗಾನ ಆರಾಧನಾ ಕಲೆ, ಸಂಸ್ಕೃತಿ, ಸಂದೇಶ ಸಾರುವ ಕಲೆ ಎಂದು ಪಟ್ಲ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶ್ರೇಷ್ಠ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ನುಡಿದರು.

ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ

ಯಕ್ಷಧ್ರುವ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯ ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಾವೂರಿನಲ್ಲಿ ನಡೆಯಿತು.