ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ

ಯಕ್ಷಮಿತ್ರರು ಅಸೈಗೋಳಿ ಇದರ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ ದಿವಾಣ ಶಿವಶಂಕರಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ರಘು ಶೆಟ್ಟಿ ನಾಳ ಹಾಗೂ ಅಸೈಗೋಳಿಯ ಉದಯ ಭಟ್ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.
ಶಿವಮೊಗ್ಗ: ಉಚಿತ ಯಕ್ಷಗಾನ ತರಗತಿಯ ಉದ್ಘಾಟನೆ

ಸರ್ಕಾರಿ ಪ್ರೌಢಶಾಲೆ ನಗರ ಮತ್ತು ಪ್ರಜ್ಞಾಭಾರತಿ ವಿದ್ಯಾಕೇಂದ್ರ ನಿಟ್ಟೂರು ಶಾಲೆಯಲ್ಲಿ ಉಚಿತ ಯಕ್ಷಗಾನ ತರಗತಿಯು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ಪಟ್ಲ ಫೌಂಡೇಶನ್ ಕಿನ್ನಿಗೋಳಿ ಘಟಕ ಸ್ಥಾಪನೆ: ಪೂರ್ವಭಾವಿ ಸಭೆ

ಪಟ್ಲ ಫೌಂಡೇಶನ್ ಮೂಲಕವಾಗಿ ಬಡ ಆಶಕ್ತ ಕಲಾವಿದರ ಕಣ್ಣೀರು ಒರೆಸುವ, ಕಷ್ಟ ಕಾಲಕ್ಕೆ ಸಹಾಯ ಹಸ್ತ ನೀಡುವ ಕೆಲಸ ಟ್ರಸ್ಟ್ ಮೂಲಕ ನಡೆದಿದೆ. ಮುಂದಕ್ಕೂ ಕಿನ್ನಿಗೋಳಿಯಲ್ಲಿ ಪಟ್ಲ ಫೌಂಡೇಶನ್ ಘಟಕ ಪ್ರಾರಂಭವಾಗಲಿದೆ ಎಂದು ಕಟೀಲು ಎಕ್ಕಾರು ಘಟಕದ ಅಧ್ಯಕ್ಷ ಗೀರೀಶ್ ಶೆಟ್ಟಿ ಕಟೀಲು ಹೇಳಿದರು.
ಕೊಲಂಬಸ್ ನಿಂದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರಕ್ಕೆ ಪ್ರಯಾಣ ಬೆಳೆಸಿದ ಕಲಾವಿದರು

ಅಮೇರಿಕಾ ದೇಶದಲ್ಲಿ ಯಕ್ಷಗಾನದ ದಿಗ್ವಿಜಯ ಸಾಧಿಸಿರುವ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ನ ಕಲಾವಿದರು ಇಂದು ಒಹಾಯೊ ರಾಜ್ಯದ ರಾಜಧಾನಿ ಕೊಲಂಬಸ್ ನಿಂದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರಕ್ಕೆ ಪ್ರಯಾಣ ಬೆಳೆಸಿದರು.
ನೆಟ್ಟಣಿಗೆ ಮುಡ್ನೂರು ಕರ್ನೂರು – ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಇಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭ ಇಂದು ನೆರವೇರಿತು.
Mumbai: Patla Foundation holds Yakshadhruva Sambhrama

Patla Foundation held Yakshagana Sambhrama, a programme to honour Yakshagana artistes and promoters at Kurla east on Sunday August 13.
