ಪಟ್ಲ ಫೌಂಡೇಶನ್ ಮೂಲಕವಾಗಿ ಬಡ ಆಶಕ್ತ ಕಲಾವಿದರ ಕಣ್ಣೀರು ಒರೆಸುವ, ಕಷ್ಟ ಕಾಲಕ್ಕೆ ಸಹಾಯ ಹಸ್ತ ನೀಡುವ ಕೆಲಸ ಟ್ರಸ್ಟ್ ಮೂಲಕ ನಡೆದಿದೆ. ಮುಂದಕ್ಕೂ ಕಿನ್ನಿಗೋಳಿಯಲ್ಲಿ ಪಟ್ಲ ಫೌಂಡೇಶನ್ ಘಟಕ ಪ್ರಾರಂಭವಾಗಲಿದೆ ಎಂದು ಕಟೀಲು ಎಕ್ಕಾರು ಘಟಕದ ಅಧ್ಯಕ್ಷ ಗೀರೀಶ್ ಶೆಟ್ಟಿ ಕಟೀಲು ಹೇಳಿದರು.
ಅವರು ಕಿನ್ನಿಗೋಳಿ ಸಮೃದ್ಧಿ ಸಭಾಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಿನ್ನಿಗೋಳಿ ಘಟಕ ಪ್ರಾರಂಭಿಸುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ದೇಶ ವಿದೇಶದಲ್ಲಿ ಸುಮಾರು ಫೌಂಡೇಶನ್ 41 ಘಟಕಗಳು ಇದ್ದು, ಕಳೆದ 10 ವರ್ಷಗಳಲ್ಲಿ 14 ಕೋಟಿ ರೂ. ವೆಚ್ಚದಲ್ಲಿ 31 ಮನೆ, ಆರ್ಥಿಕ, ಶೈಕ್ಷಣಿಕ ಸಹಾಯಹಸ್ತದ ಕೆಲಸ ಮಾಡಿದೆ ಎಂದು ಹೇಳಿದರು.
ಸಮಿತಿ ರಚನೆಯ ಬಗ್ಗೆ ನಿರ್ಣಯ ಮಾಡಲಾಯಿತು. ಮೂಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಯುಗಪುರುಷದ ಭುವನಾಭಿರಾಮ ಉಡುಪ, ಸುರೇಶ್ ಶೆಟ್ಟಿ ಆಡು, ಸ್ವರಾಜ್ ಶೆಟ್ಟಿ ಶರತ್ ಕಾರ್ನಾಡ್, ಶಮೀನಾ ಆಳ್ವ ಕೆಂಚನಕೆರೆ, ನಿಶಾಂತ್ ಶೆಟ್ಟಿ ಕಿಲೆಂಜೂರು ಸೌದಾಮಣಿ ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ ವಂದಿಸಿದರು.