ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ರಿ. ಮಂಗಳೂರು ಇದರ ಕಾರ್ಕಳ ಘಟಕದ ಒಂಬತ್ತನೇ ಪಟ್ಲ ಸಂಭ್ರಮವು ಇದೇ ನವೆಂಬರ್ 16 ನೇ ಶನಿವಾರ ಕಾರ್ಕಳ ಮಾರಿಗುಡಿಯ ವಠಾರದಲ್ಲಿ ನಡೆಯಲಿದ್ದು, ಇಂದು ಆಮಂತ್ರಣ ಪತ್ರಿಕೆ ಮಾರಿಯಮ್ಮನ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಲಾಯಿತು.
ಅದ್ಯಕ್ಷರಾದ ವಿಜಯ ಶೆಟ್ಟಿ, ಕೋಶಾಧ್ಯಕ್ಷರಾದ ಶ್ರೀವರ್ಮ ಅಜ್ರಿ, ಉಪಾಧ್ಯಕ್ಷರಾದ ಬೇಬಿ ಕೆ, ಈಶ್ವರಮಂಗಲ, ಕಾರ್ಯದರ್ಶಿ ಮಹಾವೀರ ಪಾಂಡಿ ಹಾಗೂ ವೆಂಕಟೇಶ ಕಾರ್ಕಳ ಉಪಸ್ಥಿತರಿದ್ದರು.
ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಚಂದಗಾಣಿಸಿ ಕೊಡಬೇಕಾಗಿ ಈ ಸಂದರ್ಭದಲ್ಲಿ ವಿನಂತಿಸಿಕೊಳ್ಳಲಾಯಿತು.