ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪಟ್ಲ ದಶಮ ಸಂಭ್ರಮದ ಸಮಾಲೋಚನಾ ಸಭೆ ಮೇ7ರಂದು ಮಂಗಳೂರಿನ ಪತ್ತುಮುಡಿ ಹೋಟೆಲ್ ನಲ್ಲಿ ನಡೆಯಿತು.
ವಿಶೇಷವಾಗಿ ಫೌಂಡೇಶನ್ನ ಪೋಷಕರಾದ ಸುರೇಶ್ ಭಂಡಾರಿ ಕಡಂದಲೇ, ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಮುಖ್ಯಸ್ಥರು ಸೀತಾರಾಮ್ ತೋಲ್ಪಡಿತ್ತಯರು, ಹಾಗೂ ಎಲ್ಲಾ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರು, ಈ ಬಾರಿ ದಶಮದ ಸಂಭ್ರಮದ ಕಾರಣ, ದಾನಿಗಳಿಂದ, ಕಲಾಭಿಮಾನಿಗಳಿಂದ 10 ಕೋಟಿ ರೂ. ದೇಣಿಗೆ ಸಂಗ್ರಹದ ಗುರಿ ಹೊಂದಿದ್ದೇವೆ. ಬಳಿಕ ಇದೇ ಹಣದಿಂದ ಸಹಾಯದ ನಿರೀಕ್ಷೆಯಲ್ಲಿರುವ ಕಲಾವಿದರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ ಎಂದರು.

ಜೂನ್ 1ರಂದು ಅಡ್ಯಾರ್ ಗಾಾರ್ಡನ್‌ನಲ್ಲಿ ನಡೆಯಲಿರುವ ಪಟ್ಲ ದಶಮ ಸಂಭ್ರಮದ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಪಟ್ಲರು, ಪಟ್ಲ ಸಂಭ್ರಮದ ಹಿನ್ನೆಲೆ ಎಲ್ಲಾ ಘಟಕಗಳಿಗೆ ಜವಾಾಬ್ದಾರಿ ವಹಿಸಲಾಗುವುದು. ಕಳೆದ 10 ವರ್ಷಗಳಿಂದ ನಮ್ಮ ಟ್ರಸ್ಟ್ 15 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಆದರೆ ಈ ಬಾರಿ ಪ್ರತೀ ವರ್ಷದಂತೆ ದೇಣಿಗೆ ಸಂಗ್ರಹಿಸದೇ, 10 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ. ಅಲ್ಲದೇ, ಅಡ್ಯಾರ್‌ನಲ್ಲಿ ಜೂನ್ 1ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾಾರ ಬೇಕು ಎಂದು ಪಟ್ಲ Trust ಸದಸ್ಯರಿಗೆ ಮನವಿ ಮಾಡಿದರು.