Mangaluru News: ಎಷ್ಟೋ ಯಕ್ಷಗಾನ ಕಲಾವಿದರಿಗೆ ಪಟ್ಲ ಯಕ್ಷಾಶ್ರಯದಡಿ ಹಲವು ಮನೆಗಳನ್ನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರು ಕಟ್ಟಿ ಕೊಟ್ಟಿದ್ದಾರೆ. ಅದೇ ರೀತಿ, ಉಡುಪಿಯಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಹಲವು ಯಕ್ಷಗಾನ ಕಲಾವಿದರಿಗಾಗಿ ಮನೆ ನಿರ್ಮಿಸಲು ಭಾಗವತರು ಭೂಮಿ ಪೂಜೆ ನೆರವೇರಿಸಿದರು.
ಈಗಾಗಲೇ 36 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಿದ್ದು, 26 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದೆ. ಇದಲ್ಲದೆ ಇಂದು ಉಡುಪಿಯಲ್ಲಿ ಪ್ರೊಫೆಸರ್ ಎಂಎಲ್ ಸಾಮ್ಗರು ದಾನವಾಗಿ ಫೌಂಡೇಶನ್ ಗೆ ನೀಡಿದ ಅರ್ಧ ಎಕರೆ ಪ್ರದೇಶದಲ್ಲಿ 20 ಮನೆಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸ್ವಾಮಿಯವರು ತಮ್ಮ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ನೆರವೇರಿಸಿ ಫೌಂಡೇಶನ್ ಮಾಡುವ ಸತ್ಕಾರ್ಯಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ವಿದ್ಯಾ ಕುಮಾರಿ,ಉಡುಪಿ ಶಾಸಕರು ಯಶಪಾಲ್ ಸುವರ್ಣ, ಸ್ಥಳದಾನಿಗಳಾದಂತಹ ಎಂಎಲ್ ಸಾಮಗ, ಪ್ರತಿಭಾ ಸಾಮಗ, ಫೌಂಡೇಶನ್ ದಾನಿಗಳಾದಂತಹ ಕೆ ಕೆ ಶೆಟ್ಟಿಯವರು, ಪುರುಷೋತ್ತಮ್ ಶೆಟ್ಟಿ ಉಡುಪಿ, ದಿವಾಕರ್ ಶೆಟ್ಟಿ ಕೊಡವೂರು, ಶಶೀಂದ್ರ ಕುಮಾರ್ ಪಾವಂಜೆ, ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಇಂದ್ರಾಳಿ ಜಯಕರ ಶೆಟ್ಟಿ,ಅಜಿತ್ ಶೆಟ್ಟಿ ಗುಜರಾತ್, ಪುರುಷೋತ್ತಮ ಭಂಡಾರಿ ಅದ್ಯಾರ್, ಸಿಎ ಸುದೇಶ್ ರೈ, ಶ್ರೀಮತಿ ನಿರೂಪಮಾ ಶೆಟ್ಟಿ, ಸುಧಾಕರಾಚಾರ್ಯ, ಹಾಗೂ ಗಣ್ಯಾತಿ ಗಣ್ಯರು ಘಟಕಗಳ ಪದಾಧಿಕಾರಿಗಳು ಭಾಗವಹಿಸಿ ಸಹಕರಿಸಿದರು. ಶ್ರೀ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.