yakshadhruvapatlafoundation.org

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ  ಸತೀಶ್ ಅವರ  ಕನಸಿನ ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಶ್ರೀ ಧರ್ಮಸ್ಥಳದ  ಮೇಳದ ಚೆಂಡೆ ವಾದಕರಾದ ಶ್ರೀ ಚಂದ್ರಶೇಖರವರಿಗೆ ಹಸ್ತಾಂತರಿಸಲಾಯಿತು.

ಕೊಡುಗೈ ದಾನಿಗಳಾದ ಖ್ಯಾತ ಉದ್ಯಮಿ ಶ್ರೀ ರಘುನಾಥ ಸೋಮಯಾಜಿಯವರ ಕೊಡುಗೆಯ ಈ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಶ್ರೀ ಆರ್. ಕೆ. ಭಟ್ ಬೆಂಗಳೂರು, ಟ್ರಸ್ಟಿನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ  ಕೆ ಭಂಡಾರಿ, ಟ್ರಸ್ಟಿನ ಸರಪಾಡಿ ಘಟಕದ ಸಂಚಾಲಕರಾದ ಶ್ರೀ ಸರಪಾಡಿ ಅಶೋಕ್ ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ, ಗೌರವಾಧ್ಯಕ್ಷರಾದ ಶ್ರೀ ಜಗನ್ನಾಥ ಚೌಟ, ಶ್ರೀ ಶ್ರೀಕಾಂತ್ ಅರಳ ಇನ್ನಿತರರು ಭಾಗವಹಿಸಿದರು. ಸರಪಾಡಿ ಘಟಕದ ಕಾರ್ಯದರ್ಶಿಗಳಾದ ಶ್ರೀ ಧನಂಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

[Best_Wordpress_Gallery id=”153″ gal_title=”ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈ ಹಸ್ತಾಂತರ”]

Leave a Reply

Your email address will not be published. Required fields are marked *