ತ್ರಿರಂಗ ಸಂಗಮ ಮುಂಬಯಿ ಇದರ ಸಂಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಪಾವಂಜೆ ಮೇಳದ 2024ರ ಮುಂಬಯಿ ಯಾನದ ಎರಡನೇ ದಿನದ ಕಾರ್ಯಕ್ರಮವು ಅಂಧೇರಿ ಪೂರ್ವದ ಶ್ರೀ ದತ್ತ ಜಗದಂಬಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸೇವಾಕರ್ತರಾದ ಕೋಟ್ಯಾನ್ ಮೆನ್ಸ್’ವೇರ್ ಇದರ ಮಾಲಕರಾದ ಹರೀಶ್ ಕೋಟ್ಯಾನ್ ಮತ್ತು ಮನೆಯವರ ವತಿಯಿಂದ ಮೇಳದ ಸಂಚಾಲಕರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು.
ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ಬಂಟರ ಸಂಘ ಮುಂಬಯಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ಬಂಟರವಾಣಿ ಸಮಿತಿ ಕುರ್ಲಾ ವತಿಯಿಂದ ನಡೆದ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
ಟೀಮ್ ಯುವ ಬ್ರಿಗೇಡ್ ವತಿಯಿಂದ ಮುಂಬಯಿ ಮೀರಾ ರೋಡ್’ನಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.