Skip to main content

yakshadhruvapatlafoundation.org

ಯೂರೋಪ್ ರಾಷ್ಟ್ರಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ ಪಟ್ಲ ಫೌಂಡೇಶನ್ – ಅಕ್ಟೋಬರ್ 3ರಂದು ಜರ್ಮನಿಯಲ್ಲಿ ಉದ್ಘಾಟನೆ

ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದ ಉದ್ಘಾಟನಾ ಸಮಾರಂಭ ಅಕ್ಟೋಬರ್ 3ರಂದು ಜರ್ಮನಿಯಲ್ಲಿ ನೆರವೇರಲಿದೆ.

ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ

ಕಳೆದ 75 ದಿನಗಳಿಂದ ಉತ್ತರ ಅಮೆರಿಕದ ಮೂಲೆಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್ ನಲ್ಲಿ ಸೆ.22ರಂದು ಯಶಸ್ವಿಯಾಗಿ ಮುಗಿಸಿದರು.

ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪಟ್ಲ ಫೌಂಡೇಶನ್ ಕಲಾವಿದರು

ಅಮೇರಿಕಾ ದೇಶದ ಮೂಲೆ ಮೂಲೆಗೂ ಯಕ್ಷಗಾನದ ಕಂಪನ್ನು ಹರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ, ಭಾರತಕ್ಕೆ ಮರಳುತಿರುವ ನಮ್ಮ ಹೆಮ್ಮೆಯ ಕಲಾವಿದರು.

ಕೊಲಂಬಸ್ ನಿಂದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರಕ್ಕೆ ಪ್ರಯಾಣ ಬೆಳೆಸಿದ ಕಲಾವಿದರು

Yakshagana in America

ಅಮೇರಿಕಾ ದೇಶದಲ್ಲಿ ಯಕ್ಷಗಾನದ ದಿಗ್ವಿಜಯ ಸಾಧಿಸಿರುವ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ನ ಕಲಾವಿದರು ಇಂದು ಒಹಾಯೊ ರಾಜ್ಯದ ರಾಜಧಾನಿ ಕೊಲಂಬಸ್ ನಿಂದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರಕ್ಕೆ ಪ್ರಯಾಣ ಬೆಳೆಸಿದರು.