yakshadhruvapatlafoundation.org

ತುಳುನಾಡ ಪರಿಪೂರ್ಣ ಕಲೆ ಯಕ್ಷಗಾನ: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ

Mangaluru: ಜೂನ್ 1 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ಮೈದಾನದಲ್ಲಿ 10ನೇ ವರ್ಷದ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಸುಮಾರು 30 ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಅಬ್ಬರ ತಾಳದಿಂದ ಶುರುವಾದ ಕಾರ್ಯಕ್ರಮ ರಾತ್ರಿಯವರೆಗಗೂ ಸರಿಯಾದ ಸಮಯ ಪಾಾಲನೆಯಿಂದ ಮುಕ್ತಾಯವಾಯಿತು. ಈ ಬಾರಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ, ಯಕ್ಷಗಾನ ಕಾರ್ಯಕ್ರಮ ಸೇರಿದಂತೆ ಈ ವರ್ಷ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರಣಕ್ಕೆ ಭರತನಾಟ್ಯ, […]

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025: ಆಮಂತ್ರಣ ಪತ್ರಿಕೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025 ರಾಷ್ಟ್ರೀಯ ಕಲಾ ಸಮ್ಮೇಳನ ದಿನಾಂಕ ▪️ 01.06.2025 ಆದಿತ್ಯವಾರ ಸ್ಥಳ▪️ ಅಡ್ಯಾರ್ ಗಾರ್ಡನ್,ಮಂಗಳೂರು ಆಮಂತ್ರಣ ಪತ್ರಿಕೆ  

ಬೇಬಿ ಮತ್ತು ಬಾಲಕೃಷ್ಣ ಪುರುಷ ರಿಗೆ ಪಟ್ಲ ಯಕ್ಷಾಶ್ರಯದ 36ನೇ ಮನೆ

Mangaluru News: ಹಲವು ಕಲಾವಿದರಿಗೆ ಮನೆ ನಿರ್ಮಾಣ ಮಾಡಿ ಕೊಡುತ್ತಿರುವ ಪಟ್ಲ ಫೌಂಡೇಶನ್‌ ವತಿಯಿಂದ, ಇನ್ನೋರ್ವ ಕಲಾವಿದರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ವಿಶೇಷ ಅಂದ್ರೆ ಇದು ಪಟ್ಲ ಫೌಂಡೇಶನ್‌ ವತಿಯಿಂದ ಕಲಾವಿದರಿಗೆ ನೀಡುತ್ತಿರುವ 36ನೇ ಮನೆಯಾಗಿದೆ. ಬೇಬಿ ಮತ್ತು ಬಾಲಕೃಷ್ಣ ಪುರುಷ ಎಂಬುವವರಿಗೆ ಪರುವಾಯಿಯ ಓಣಿ ಬಾಗಿಲು ಎಂಬಲ್ಲಿ ಮನೆ ನಿರ್ಮಾಣಕ್ಕಾಗಿ ಪಟ್ಲ ಫೌಂಡೇಶನ್ ಸಹಾಯ ಮಾಡಿದ್ದು, ಅಜೇಯ ಎಂಬ ಮನೆಯ ಗೃಹಪ್ರವೇಶ ಕಾರ್ಯ ಸುಭೀಕ್ಷವಾಹಿ ನೆರವೇರಿದೆ. Triangle ತುಳುವೇರ್ ಚಾವಡಿ Raleigh USA ಇವರು […]

With 36 Homes Delivered, Patla Foundation Breaks Ground on 20 More for Artists

One of the flagship initiatives of the Yaksha Dhurva Patla Foundation Trust is the Patla Yakshashraya project. Under this initiative, 36 houses have already been handed over to artists, with another 26 currently nearing completion. The foundation stone-laying ceremony was held in Udupi for the construction of 20 new houses on land generously donated by […]

ಪಟ್ಲ ಯಕ್ಷಾಶ್ರಯದಡಿ 20 ಮನೆಗಳಿಗೆ ಭೂಮಿ ಪೂಜೆ ನೆರವೇರಿಸಿದ ಶೃಂಗೇರಿ ಶ್ರೀಗಳು

Mangaluru News: ಎಷ್ಟೋ ಯಕ್ಷಗಾನ ಕಲಾವಿದರಿಗೆ ಪಟ್ಲ ಯಕ್ಷಾಶ್ರಯದಡಿ ಹಲವು ಮನೆಗಳನ್ನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರು ಕಟ್ಟಿ ಕೊಟ್ಟಿದ್ದಾರೆ. ಅದೇ ರೀತಿ, ಉಡುಪಿಯಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಹಲವು ಯಕ್ಷಗಾನ ಕಲಾವಿದರಿಗಾಗಿ ಮನೆ ನಿರ್ಮಿಸಲು ಭಾಗವತರು ಭೂಮಿ ಪೂಜೆ ನೆರವೇರಿಸಿದರು. ಈಗಾಗಲೇ 36 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಿದ್ದು, 26 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದೆ. ಇದಲ್ಲದೆ ಇಂದು ಉಡುಪಿಯಲ್ಲಿ ಪ್ರೊಫೆಸರ್ ಎಂಎಲ್ ಸಾಮ್ಗರು ದಾನವಾಗಿ ಫೌಂಡೇಶನ್ ಗೆ ನೀಡಿದ ಅರ್ಧ ಎಕರೆ ಪ್ರದೇಶದಲ್ಲಿ […]

ಯುವಜನೋತ್ಸವ ಕಾರ್ಯಕ್ರಮ: ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಪಟ್ಲ ಸತೀಶ್ ಶೆಟ್ಟಿ

ಮಂಗಳೂರು ಕೆನರಾ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಕಲಾಪೋಷಕ ಪ್ರಶಸ್ತಿ

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ರಿ. ಇದರ 90ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ 9ನೇ ದಿನದ ಕಾರ್ಯಕ್ರಮ ಇಂದು ಹೊನ್ನಾವರ ಬಳಿಯ ಗುಣವಂತೆ ಇಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್: ಕಲಾವಿದನಿಗೆ ಧನಸಹಾಯ

ಕಳೆದ 35 ವರ್ಷಕ್ಕೂ ಮಿಕ್ಕಿ ಸಸಿಹಿತ್ಲು ಮೇಳ ಸೇರಿದಂತೆ ವಿವಿಧ ಮೇಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ ಅನಾರೋಗ್ಯಕ್ಕೊಳಗಾಗಿರುವ ಕಲಾವಿದರಾದ ಶ್ರೀ ನಾಗೇಶ್ ಆಚಾರ್ಯ ಕುಲಶೇಖರ ಇವರ ಮನೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಇಂದು ಭೇಟಿ ನೀಡಿ ಆರೋಗ್ಯಕ್ಷೇಮ ವಿಚಾರಿಸಿ ಫೌಂಡೇಶನ್ ನ ವತಿಯಿಂದ ಧನಸಹಾಯ ನೀಡಿದರು.

ಪಟ್ಲ ಫೌಂಡೇಶನ್: ನವೀನ್ ಕುತ್ತಾರು ನೇತೃತ್ವದಲ್ಲಿ ಹತ್ತು ಸಮಸ್ತರಿಂದ 25,000/- ಮೊತ್ತದ ಚೆಕ್ ಹಸ್ತಾಂತರ

ನವೀನ್ ಕುತ್ತಾರು ಇವರ ನೇತೃತ್ವದಲ್ಲಿ ಹತ್ತು ಸಮಸ್ತರ ವತಿಯಿಂದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಮುಖಾಂತರ 25,000/- ಮೊತ್ತದ ಚೆಕ್’ನ್ನು ಟ್ರಸ್ಟಿಗೆ ಹಸ್ತಾಂತರಿಸಿದರು.

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ರೂ. 25 ಲಕ್ಷ ಅನುದಾನ ವಿತರಣೆ

ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಾಶ್ರಯ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ವಿವಿಧ ಯಕ್ಷಗಾನ ಮೇಳಗಳ ಕಲಾವಿದರಿಗೆ ಹಾಗೂ ದೈವಾರಾದನೆಯ ಪರಿಚಾರಕರಿಗೆ ರೂ. 25 ಲಕ್ಷದ ಮೊತ್ತದ ಚೆಕ್ಕುಗಳನ್ನು ಇಂದು ಟ್ರಸ್ಟಿನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಇವರ ಕಚೇರಿಯಲ್ಲಿ 16 ಮಂದಿ ಫಲಾನುಭವಿಗಳಿಗೆ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ವಿತರಿಸಿದರು.