ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025: ಆಮಂತ್ರಣ ಪತ್ರಿಕೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025 ರಾಷ್ಟ್ರೀಯ ಕಲಾ ಸಮ್ಮೇಳನ ದಿನಾಂಕ ▪️ 01.06.2025 ಆದಿತ್ಯವಾರ ಸ್ಥಳ▪️ ಅಡ್ಯಾರ್ ಗಾರ್ಡನ್,ಮಂಗಳೂರು ಆಮಂತ್ರಣ ಪತ್ರಿಕೆ
ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ “ಭಾರತ್ ಕಲಾ ವೈಭವ”

ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕವು ಮೇ 10, 2025 ರಂದು ಜರ್ಮನಿಯ ಅಲ್ಸ್ಬಾಕ್‌ನಲ್ಲಿ “ಭಾರತ್ ಕಲಾ ವೈಭವ” ಸಾಂಸ್ಕೃತಿಕ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಸಾಂಸ್ಕೃತಿಕ ಉತ್ಸವವು ನಮ್ಮ ಫೌಂಡೇಶನ್‌ಗಾಗಿ ಹೆಮ್ಮೆಗುರಿಯಾಗಿದೆ, ಯಾಕಂದರೆ ಇದು ಭಾರತದ ಕಲೆಗಳು ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಯೂರೋಪಿನ ಮನಸ್ಸಿನಲ್ಲಿ ಉಳಿಸುವ ಪ್ರಯತ್ನವಾಗಿತ್ತು. ಈ ಕಾರ್ಯಕ್ರಮದಲ್ಲಿ ಯುರೋಪ್‌ನ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು, 350ಕ್ಕೂ ಹೆಚ್ಚು ಪ್ರೇಕ್ಷಕರಿಗೆ – ಭಾರತೀಯರು ಮತ್ತು ಸ್ಥಳೀಯರು – ಭಾರತೀಯ ಸಂಸ್ಕೃತಿಯ ವಿಶಿಷ್ಟತೆಯನ್ನು […]
ಬಂಟ್ವಾಳ ಘಟಕದ 2ನೇ ವಾರ್ಷಿಕೋತ್ಸವ: ಪೂರ್ವಭಾವಿ ಸಭೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಮಾ. 27 ರಂದು ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಇಂದು ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಘಟಕ ಅಧ್ಯಕ್ಷರಾದ ಚಂದ್ರಹಾಸ ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸನ್ಮಾನ

ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು – ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸುವುದರೊಂದಿಗೆ ಕಲಾವಿದರಾದ ಸುಬ್ರಾಯ ಹೊಳ್ಳ ಕಾಸರಗೋಡು, ಅಕ್ಷಯಕುಮಾರ್ ಮಾರ್ನಾಡ್ ಇವರನ್ನು ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಸಂಘಟಕರ ಉಪಸ್ಥಿತಿಯಲ್ಲಿ ಸಂಮಾನಿಸಲಾಯಿತು.
ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ

ಯಕ್ಷಮಿತ್ರರು ಅಸೈಗೋಳಿ ಇದರ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ ದಿವಾಣ ಶಿವಶಂಕರಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ರಘು ಶೆಟ್ಟಿ ನಾಳ ಹಾಗೂ ಅಸೈಗೋಳಿಯ ಉದಯ ಭಟ್ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.
ಉಡುಪಿಯ ಪಲಿಮಾರು ಮಠದ ಪೂಜ್ಯ ಸ್ವಾಮೀಜಿಯವರೊಂದಿಗೆ ಪ್ರಯಾಗ್ ರಾಜ್ ಕುಂಭ ಮೇಳದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ

ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಕೇಂದ್ರೀಯ ಸಮಿತಿಯ ತಂಡವನ್ನು ಪೂಜ್ಯ ಸ್ವಾಮೀಜಿಯವರ ಶಿಷ್ಯ ವೃಂದದವರು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಊಟ ಫಲಹಾರಗಳನ್ನು ನೀಡಿ ಸತ್ಕರಿಸಿದರು. ಹಾಗೂ ಬ್ರಾಹ್ಮೀ ಮುಹೂರ್ತದಲ್ಲಿ ತ್ರಿವೇಣಿ ಸಂಗಮದ ಪುಣ್ಯ ತೀರ್ಥ ಸ್ನಾನವು ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿತು.
ಪೆರುವಾಜೆ : ಬಾರತವರ್ಷಿಣಿ ಯಕ್ಷಗಾನ ಬಯಲಾಟ ಪ್ರದರ್ಶನ

ಪೆರುವಾಜೆ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಶನಿವಾರ ರಾತ್ರಿ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶನಿವಾರ ರಾತ್ರಿ ಬಾರತವರ್ಷಿಣಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಪ್ಪಳ ಘಟಕದ 7ನೇ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಉಪ್ಪಳ ಘಟಕದ 7ನೇ ವಾರ್ಷಿಕೋತ್ಸವವು ಶ್ರೀಹರಿ ಭಜನಾ ಮಂದಿರ ಕುಳೂರು ಇಲ್ಲಿ ಉಪ್ಪಳ ಘಟಕದ ಗೌರವಾಧ್ಯಕ್ಷರಾದ ಶ್ರೀ ಪಿ. ಆರ್. ಶೆಟ್ಟಿ ಪೊಯ್ಯೇಲು ಕುಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
2025 ಜೂನ್ 1ರಂದು ಯಕ್ಷಧ್ರುವ ಪಟ್ಲ ದಶಮಾನೋತ್ಸವ ಸಂಭ್ರಮ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರಗಿಸುವ ಕುರಿತಾಗಿ ಫೌಂಡೇಶನಿನ ಮಹಾದಾನಿಗಳ, ಮಹಾಪೋಷಕರ , ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಲೋಚನಾ ಸಭೆಯು ನಗರದ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.
ಜಾತಿ, ಧರ್ಮ ಒಗ್ಗೂಡಿಸುವ ಕಾರ್ಯ: ಪೂಂಜ

ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ ಶೆಟ್ಟಿ ಅವರು. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
