Skip to main content

yakshadhruvapatlafoundation.org

ಯಕ್ಷಧ್ರುವ ಪಟ್ಲ ಫೌಂಡೇಶನ್ ರಕ್ತದಾನ ಶಿಬಿರ ಯಶಸ್ವಿ

ಬಹ್ರೈನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹ್ರೈನ್ ಮತ್ತು ಸೌದಿ ಘಟಕವು ತಮ್ಮ ಮೂರನೇ ವಾರ್ಷಿಕ ರಕ್ತದಾನ ಶಿಬಿರವನ್ನು ಸಲ್ಮಾನಿಯಾ ಮೆಡಿಕಲ್ ಕಾಂಪ್ಲೆಕ್ಸ್‌ನ ಸೆಂಟ್ರಲ್ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಸಂಜೆ 7:00 ಗಂಟೆಯಿಂದ ರಾತ್ರಿ 11:30ರವರೆಗೆ ನಡೆದ ಈ ಶಿಬಿರದಲ್ಲಿ 80 ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ಅತ್ಯುತ್ಸಾಹ ಪ್ರದರ್ಶಿಸಿದರು.

ಜೂನ್ 1ರಂದು ಪಟ್ಲ ದಶಮ ಸಂಭ್ರಮ

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ದೊಡ್ಡ ಯಶಸ್ಸು ಕಾಣಲಿದೆ. ಯಕ್ಷಗಾನ ಕ್ಷೇತ್ರ ಇಂದು ಪಟ್ಲ ಸತೀಶ್ ಶೆಟ್ಟಿ ಅವರಿಂದ ನಾಡಿನೆಲ್ಲೆಡೆ ಬೆಳಗುತ್ತಿದೆ. ಇದು ಬಹಳ ಸಂತಸದ ವಿಚಾರ. ಯಕ್ಷಗಾನದ ಮೇಲಿನ ಭಕ್ತಿ ಶ್ರದ್ಧೆಯಿಂದ ನಾವೆಲ್ಲರೂ ಜೊತೆಯಾಗಿದ್ದೇವೆ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುತ್ತಿರುವ ಇಂತಹ ಸಂಘಟನೆ ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.

ಯಕ್ಷಧ್ರುವ ಕಲಾವಿದರ ಆಶಾಕಿರಣ: ಮಂಗಳೂರು ಘಟಕದ 6ನೇ ವಾರ್ಷಿಕ ಸಮಾರಂಭ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮಂಗಳೂರು ಘಟಕದ 6ನೇ ವಾರ್ಷಿಕ ಸಮಾರಂಭ ಮಾ.28ರಂದು ಮಂಗಳೂರಿನ ಪುರಭವನದಲ್ಲಿ ಜರುಗಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕದ್ರಿ ಸರ್ಕಾರಿ ಹಿರಿಯ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಬಂಟ್ವಾಳ ಘಟಕದ 2ನೇ ವಾರ್ಷಿಕೋತ್ಸವ: ಪೂರ್ವಭಾವಿ ಸಭೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಮಾ. 27 ರಂದು ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಇಂದು ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಘಟಕ ಅಧ್ಯಕ್ಷರಾದ ಚಂದ್ರಹಾಸ ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುರತ್ಕಲ್‌ನಲ್ಲಿ ಪಟ್ಲ ಫೌಂಡೇಶನ್ ಘಟಕದ ಪಂಚಮ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ (ರಿ) ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಮಾರ್ಚ್ 15ರಂದು ಶನಿವಾರ ಸಂಜೆ 6.30 ಗಂಟೆಗೆ ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಲಿದೆ.

ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ

ಯಕ್ಷಮಿತ್ರರು ಅಸೈಗೋಳಿ ಇದರ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ ದಿವಾಣ ಶಿವಶಂಕರಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ರಘು ಶೆಟ್ಟಿ ನಾಳ ಹಾಗೂ ಅಸೈಗೋಳಿಯ ಉದಯ ಭಟ್ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್: ಕಲಾವಿದನಿಗೆ ಧನಸಹಾಯ

ಕಳೆದ 35 ವರ್ಷಕ್ಕೂ ಮಿಕ್ಕಿ ಸಸಿಹಿತ್ಲು ಮೇಳ ಸೇರಿದಂತೆ ವಿವಿಧ ಮೇಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ ಅನಾರೋಗ್ಯಕ್ಕೊಳಗಾಗಿರುವ ಕಲಾವಿದರಾದ ಶ್ರೀ ನಾಗೇಶ್ ಆಚಾರ್ಯ ಕುಲಶೇಖರ ಇವರ ಮನೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಇಂದು ಭೇಟಿ ನೀಡಿ ಆರೋಗ್ಯಕ್ಷೇಮ ವಿಚಾರಿಸಿ ಫೌಂಡೇಶನ್ ನ ವತಿಯಿಂದ ಧನಸಹಾಯ ನೀಡಿದರು.

ಪಟ್ಲ ಫೌಂಡೇಶನ್: ನವೀನ್ ಕುತ್ತಾರು ನೇತೃತ್ವದಲ್ಲಿ ಹತ್ತು ಸಮಸ್ತರಿಂದ 25,000/- ಮೊತ್ತದ ಚೆಕ್ ಹಸ್ತಾಂತರ

ನವೀನ್ ಕುತ್ತಾರು ಇವರ ನೇತೃತ್ವದಲ್ಲಿ ಹತ್ತು ಸಮಸ್ತರ ವತಿಯಿಂದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಮುಖಾಂತರ 25,000/- ಮೊತ್ತದ ಚೆಕ್’ನ್ನು ಟ್ರಸ್ಟಿಗೆ ಹಸ್ತಾಂತರಿಸಿದರು.

‘ತ್ರಿಜನ್ಮ ಮೋಕ್ಷ’ ಯಕ್ಷಗಾನ ಬಯಲಾಟದಲ್ಲಿ ಪಟ್ಲ ಫೌಂಡೇಶನಿಗೆ ನೆನಪಿನ ಕಾಣಿಕೆ

ಜಪ್ಪು ಮಜಿಲ ಹತ್ತು ಸಮಸ್ತರ ವತಿಯಿಂದ ಮಂಗಳಾದೇವಿ ದೇವಸ್ಥಾನದ ಎದುರುಗಡೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಯವರಿಂದ ‘ತ್ರಿಜನ್ಮ ಮೋಕ್ಷ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ರೂ. ಒಂದು ಲಕ್ಷ ಮೊತ್ತದ ಚೆಕ್‌ನ್ನು ಹಾಗೂ 2 ಬೆಳ್ಳಿಯ ದೀಪವನ್ನು ಮೇಳದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಇವರಿಗೆ ನೀಡಲಾಯಿತು.

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ರೂ. 25 ಲಕ್ಷ ಅನುದಾನ ವಿತರಣೆ

ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಾಶ್ರಯ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ವಿವಿಧ ಯಕ್ಷಗಾನ ಮೇಳಗಳ ಕಲಾವಿದರಿಗೆ ಹಾಗೂ ದೈವಾರಾದನೆಯ ಪರಿಚಾರಕರಿಗೆ ರೂ. 25 ಲಕ್ಷದ ಮೊತ್ತದ ಚೆಕ್ಕುಗಳನ್ನು ಇಂದು ಟ್ರಸ್ಟಿನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಇವರ ಕಚೇರಿಯಲ್ಲಿ 16 ಮಂದಿ ಫಲಾನುಭವಿಗಳಿಗೆ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ವಿತರಿಸಿದರು.