yakshadhruvapatlafoundation.org

ಸಂಪತ್ತನ್ನು ಕೂಡಿಡುವ ಬದಲು ಹಂಚಿದರೆ ಅದು ದುಪ್ಪಟ್ಟಾಗುತ್ತದೆ: ಕನ್ಯಾಡಿ ಶ್ರೀ

ನಮ್ಮಲ್ಲಿರುವ ಸಂಪತ್ತನ್ನು ಕೂಡಿಡುವ ಬದಲು ಯೋಗ್ಯರಿಗೆ ಹಂಚಿದರೆ ಅದು ದುಪ್ಪಟ್ಟಾಗುತ್ತದೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ನಾಣ್ಣುಡಿಯಂತೆ ನಾವು ಬದುಕಬೇಕು. ಮನುಷ್ಯ ಜನ್ಮವನ್ನು ನಮಗೆ ಭಗವಂತ ನೀಡಿದ್ದಾನೆ

ಪ್ರಶಸ್ತಿ ಸಿಗದಿದ್ದರೂ ಕಲಾವಿದ ಸಣ್ಣವನಾಗಲ್ಲ: ರಾಮಚಂದ್ರ ಹೆಗಡೆ

ಈ ಪ್ರಶಸ್ತಿ ನನಗೆ ಸಿಕ್ಕಿದ್ದುಅಲ್ಲವೇ ಅಲ್ಲ. ನನ್ನ ಅಜ್ಜ ಮತ್ತು ಗುರು ಕೊಂಡದಕುಳಿ ರಾಮ ಹೆಗಡೆ, ನನ್ನನ್ನು ಬೆಳೆಸಿದ ಕಾಳಿಂಗ ನಾವಡರಿಗೆ ಸಿಗಬೇಕಾದ ಪ್ರಶಸ್ತಿ ಇದು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ಊರಿಂದ ಊರಿಗೆ ನಡೆದುಹೋಗಿ ಯಕ್ಷಗಾನ ಕಲೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ್ದಾರೆ. ಯಕ್ಷಗಾನಕ್ಕೆ ಬದುಕನ್ನೇ ಸವೆಸಿದ್ದಾರೆ. ಅವರಿಗೆ ಪ್ರಶಸ್ತಿಯೂ ಇಲ್ಲ, ಸಂಬಳವೂ ಇಲ್ಲ. ಅದರ ಫಲವನ್ನು ಈಗಿನ ತಲೆಮಾರಿನವರು ಅನುಭವಿಸುತ್ತಿದ್ದೇವೆ. ತೆಂಕುತಿಟ್ಟು ಆಗಲಿ, ಬಡಗು ಆಗಲಿ, ಬಡಾಬಡಗು ಆಗಲಿ ಯಕ್ಷಗಾನ ಕಲಾವಿದರು ಪರಸ್ಪರ ಗೌರವಿಸುವುದನ್ನು ಮೊದಲು ಕಲಿಯಬೇಕು

ಸಾರ್ಥಕ್ಯ ಕಂಡ ಪಟ್ಲ ಸಂಭ್ರಮ 2024

2024ರ ಪಟ್ಲ ಸಂಭ್ರಮವು ನಿಜ ಅರ್ಥದಲ್ಲಿ ಸಾರ್ಥಕ್ಯ ಪಡೆದಿದೆ ಎಂದರೆ ಖಂಡಿತವಾಗಿ ಅತಿಶಯದ ಮಾತಲ್ಲ. ಸದಾ ಮಂಗಲಮಯನಾದ ಅಡ್ಯಾರ್ ನ ಮಹಾಲಿಂಗೇಶ್ವರನ ಸನ್ನಿಧಾನದ ಪಕ್ಕದಲ್ಲಿ ನಡೆದ ಈ ಕಾರ್ಯಕ್ರಮವು ಸದಾಶಿವ ಶಶಿಧರನ ಅನುಗ್ರಹದಿಂದ ಹರಿ ಈಶರ ಪೂರ್ಣನುಗ್ರಹದೊಂದಿಗೆ ನಮ್ಮೆಲ್ಲರ ನಿರೀಕ್ಷೆಯಂತೆ ಸಂಪೂರ್ಣ ಯಶಸ್ಸಾಯಿತು ಎಂಬುದು ಎಲ್ಲರ ಉದ್ಘಾರ.

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ “ಪಟ್ಲ ಸಂಭ್ರಮ” ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ ಫೌಂಡೇಶನ್ ನ ಎಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ಸಕ್ರೀಯವಾಗಿ ಭಾಗವಹಿಸುವಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಪದಪ್ರದಾನ

ಪಟ್ಲ ಫೌಂಡೇಶನ್‌ನಲ್ಲಿ ಸ್ವಾರ್ಥವಿಲ್ಲ, ವ್ಯಕ್ತಿಗತವಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಯಕ್ಷರಂಗದ ಕಲಾವಿದರ ಬದುಕಿಗೋಸ್ಕರ ಸೇವೆ ನೀಡುವುದಾಗಿದೆ ಮಾತ್ರವಲ್ಲ ಇದರಿಂದ ನಮಗೆ ಆತ್ಮ ತೃಪ್ತಿ ಲಭಿಸುತ್ತದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಮಾತೃ ಘಟಕದ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿರವರು ಹೇಳಿದರು.

Bahrain: ‘Manishada Yakshagana’ to be held on Oct 20

Yakshadhruva Patla foundation, which has come into existence to help poor and weak Yakshagana artistes had more than 35 branches in India and abroad. Now the Bahrain-Saudi branch is going to celebrate its third anniversary.