ಯಕ್ಷಗಾನ ಕಲಾವಿದರಿಗೆ ನೆರವಾಗಿರುವ ಹೆಮ್ಮೆ: ಪಟ್ಲ

ಯಕ್ಷಗಾನ, ನಾಟಕ ಕಲಾವಿದರಿಗೆ ಸುಮಾರು 15 ಕೋಟಿ ರೂ. ವರೆಗೆ ನೆರವು ನೀಡಿರುವ ಹೆಮ್ಮೆ, ಯಕ್ಷಗಾನ ಕಲಾವಿದನಾದ ತನಗೆ ಇದೆ. ಇದಕ್ಕೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಸುರತ್ಕಲ್ ಬಂಟರ ಭವನ ವಠಾರದಲ್ಲಿ ಶನಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ, ಸ್ಟಾರ್ ವ್ಯಾಲ್ಯೂ […]
ಯುವಜನೋತ್ಸವ ಕಾರ್ಯಕ್ರಮ: ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಪಟ್ಲ ಸತೀಶ್ ಶೆಟ್ಟಿ

ಮಂಗಳೂರು ಕೆನರಾ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು.
ಪೊಳಲಿ ಘಟಕದ 5ನೇ ವಾರ್ಷಿಕೋತ್ಸವ: ಯಕ್ಷಗಾನ ಬಯಲಾಟ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು, ಪೊಳಲಿ ಘಟಕದ 5ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷ ಪಯಣದ ರಜತ ಸಂಭ್ರಮದಲ್ಲಿರುವ ಪಾವಂಜೆ ಮೇಳದ ಸಂಚಾಲಕರು- ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. “ಯಕ್ಷಧ್ರುವ”ಎಂಬ ಬಿರುದನ್ನು ನೀಡಿ ಲೋಕವಿಖ್ಯಾತರನ್ನಾಗಿಸಿದ ಪಟ್ಲ ಭಾಗವತರ ಅಭಿಮಾನಿ ವರ್ಗ ಪೊಳಲಿ ಸನ್ನಿಧಾನದಲ್ಲಿ ಸಂಯೋಜಿಸಲ್ಪಟ್ಟಿತು. [Best_Wordpress_Gallery id=”191″ gal_title=”ಪೊಳಲಿ ಘಟಕದ 5ನೇ ವಾರ್ಷಿಕೋತ್ಸವ: ಯಕ್ಷಗಾನ ಬಯಲಾಟ”]
ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ-25

ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ನಡೆಯುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು,ಯಕ್ಷಧ್ರುವ – ಯಕ್ಷಶಿಕ್ಷಣ,ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2024-25
ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನವೂ ಸೇರಲಿ

ಗುಣಾತ್ಮಕ ಶಿಕ್ಷಣಕ್ಕೆ ಯಕ್ಷಗಾನ ಪೂರಕ ಕಲೆ. ಪ್ರತಿವರ್ಷ ಶಿಕ್ಷಣ ಇಲಾಖೆಯಿಂದ ಪ್ರತಿಭಾ ಕಾರಂಜಿ ನಡೆಸಲಾಗುತ್ತಿದೆ. ಆದರೆ ಈವರೆಗೆ ಯಕ್ಷಗಾನ ಸೇರ್ಪಡೆಯಾಗಿರಲಿಲ್ಲ. ಮುಂದೆ ಪ್ರತಿಭಾ ಕಾರಂಜಿಯಲ್ಲೂ ಯಕ್ಷಗಾನ ಸೇರ್ಪಡೆಗೊಳಿಸುವಂತೆ ಇಲಾಖೆಗೆ ನಾನು ಮನವಿ ಮಾಡುತ್ತೇನೆ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಹೇಳಿದರು.
ಬೆಳ್ತಂಗಡಿ ಘಟಕ ಯಕ್ಷ ಸಂಭ್ರಮ: ಉಜಿರೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಬಿಡುಗಡೆಗೊಳಿಸಿದರು.
ಬಹರೈನ್‌ನಲ್ಲಿ ಪಟ್ಲ ಫೌಂಡೇಶನ್ 4ನೇ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬಹರೈನ್ ಮತ್ತು ಸೌದಿ ಘಟಕದ ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮ ನವೆಂಬರ್ 1ರಂದು ಬಹರೈನ್ ಮನಾಮದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.
ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈ ಹಸ್ತಾಂತರ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಅವರ ಕನಸಿನ ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಶ್ರೀ ಧರ್ಮಸ್ಥಳದ ಮೇಳದ ಚೆಂಡೆ ವಾದಕರಾದ ಶ್ರೀ ಚಂದ್ರಶೇಖರವರಿಗೆ ಹಸ್ತಾಂತರಿಸಲಾಯಿತು.
ಕೇಪು, ಬಂಟ್ವಾಳ: ಉಚಿತ ಯಕ್ಷಗಾನ ತರಗತಿಯ ಉದ್ಘಾಟನೆ

ಯಕ್ಷಗಾನ ಶಿಕ್ಷಕರಾದ ಶ್ರೀ ಗಣೇಶ ಕುಂದಲಕೋಡಿ ದೀಪ ಬೆಳಗಿಸುವುದರ ಮೂಲಕ ಯಕ್ಷಗಾನ ತರಗತಿಗೆ ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟ ರಾಘವೇಂದ್ರ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ಅಮೆರಿಕಾ ಪ್ರವಾಸ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಪಟ್ಲ ಟ್ರಸ್ಟಿನ ಒಂಭತ್ತು ಹೆಸರಾಂತ ಕಲಾವಿದರು, 75 ದಿವಸಗಳ ಈ ಪ್ರವಾಸದ ಅವಧಿಯಲ್ಲಿ ವಿವಿಧಢೆ ಯಕ್ಷಗಾನದ ಕಾರ್ಯಕ್ರಮ ಹಾಗೂ ತರಬೇತಿ ಶಿಬಿರಗಳನ್ನು ನಡೆಸಿಕೊಡಲಿದ್ದಾರೆ.
