ಮೂಡುಬಿದ್ರೆ: ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭ

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಮಂಗಳೂರು ಇದರ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ಮೂಡುಬಿದ್ರಿ ಜ್ಯೋತಿನಗರದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಜರಗಿತು.
ಪ್ರಶಸ್ತಿ ಸಿಗದಿದ್ದರೂ ಕಲಾವಿದ ಸಣ್ಣವನಾಗಲ್ಲ: ರಾಮಚಂದ್ರ ಹೆಗಡೆ

ಈ ಪ್ರಶಸ್ತಿ ನನಗೆ ಸಿಕ್ಕಿದ್ದುಅಲ್ಲವೇ ಅಲ್ಲ. ನನ್ನ ಅಜ್ಜ ಮತ್ತು ಗುರು ಕೊಂಡದಕುಳಿ ರಾಮ ಹೆಗಡೆ, ನನ್ನನ್ನು ಬೆಳೆಸಿದ ಕಾಳಿಂಗ ನಾವಡರಿಗೆ ಸಿಗಬೇಕಾದ ಪ್ರಶಸ್ತಿ ಇದು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ಊರಿಂದ ಊರಿಗೆ ನಡೆದುಹೋಗಿ ಯಕ್ಷಗಾನ ಕಲೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ್ದಾರೆ. ಯಕ್ಷಗಾನಕ್ಕೆ ಬದುಕನ್ನೇ ಸವೆಸಿದ್ದಾರೆ. ಅವರಿಗೆ ಪ್ರಶಸ್ತಿಯೂ ಇಲ್ಲ, ಸಂಬಳವೂ ಇಲ್ಲ. ಅದರ ಫಲವನ್ನು ಈಗಿನ ತಲೆಮಾರಿನವರು ಅನುಭವಿಸುತ್ತಿದ್ದೇವೆ. ತೆಂಕುತಿಟ್ಟು ಆಗಲಿ, ಬಡಗು ಆಗಲಿ, ಬಡಾಬಡಗು ಆಗಲಿ ಯಕ್ಷಗಾನ ಕಲಾವಿದರು ಪರಸ್ಪರ ಗೌರವಿಸುವುದನ್ನು ಮೊದಲು ಕಲಿಯಬೇಕು
ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಧಾನ

ಯುವಜನತೆ ಯಕ್ಷಗಾನದಿಂದ ದೂರವಾಗುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಯಕ್ಷಗಾನದ ವೈಭವ ಮರುಕಳಿಸುವಲ್ಲಿ ಯಕ್ಷಧ್ರುವ ಪಟ್ಲ ಟ್ರಸ್ಟ್ ಶ್ರಮ ಶ್ಲಾಘನೀಯವಾದುದು. ತುಳುನಾಡಿನ ಕಲೆಯನ್ನು ಮರಳಿ ಉಳಿಸುವಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಯೋಜನೆ ಮತ್ತು ಯೋಚನೆ ಇದೇ ರೀತಿ ಮುಂದುವರಿಯಲಿ
