yakshadhruvapatlafoundation.org

ಮಂಗಳೂರು ಮಹಾನಗರ ಪಾಲಿಕೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ ರೂ. 10 ಲಕ್ಷ ಫ್ರೋತ್ಸಾಹಧನ ವಿತರಣೆ

ಮಂಗಳೂರು ಮಹಾಪಾಲಿಕೆಯ ವತಿಯಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ರಾಜ್ಯದ್ಯಂತ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಗಾನಂ ವಿಶ್ವಗಾನಂ ಯೋಜನೆಯಡಿ 2024-25ನೇ ಸಾಲಿನ ಬಜೆಟಿನಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಸ್ಟಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಇವರು ಘೋಷಿಸಿದ ರೂ. 10 ಲಕ್ಷ ಪ್ರೋತ್ಸಾಹಧನವನ್ನು ಮಾನ್ಯ ಮೇಯರ್ ಮನೋಜ್ ಕುಮಾರ್ ಇವರು ಪಟ್ಲ ಫೌಂಡೇಶನಿನ ಕೇಂದ್ರೀಯ ಸಮಿತಿಯ ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಇವರ ಮೂಲಕ ಟ್ರಸ್ಟಿಗೆ ನೀಡಿದರು.

ಯಕ್ಷಶಿಕ್ಷಣದ 1000 ವಿದ್ಯಾರ್ಥಿಗಳ ರಂಗಪ್ರವೇಶ

ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಒಡ್ಡೂರು ಫಾರ್ಮ್ ಹೌಸ್‌ನ ಮೈದಾನದಲ್ಲಿ ಹಾಕಲಾದ ಎರಡು ವೇದಿಕೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನದ ಬೆಂಡೆ, ಮದ್ದಳೆ, ಹಿಮ್ಮೇಳದ ಅಬ್ಬರಕ್ಕೆ ವಿವಿಧ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಧಿಗಿಣ, ನಾಟ್ಯ, ಕುಣಿತದ ಮೂಲಕ ಗಮನಸೆಳೆದರು.

ಯಕ್ಷಶಿಕ್ಷಣ ವಿದ್ಯಾರ್ಥಿಗಳ ಜೊತೆ ಪಟ್ಲ ಸತೀಶ್ ಶೆಟ್ಟಿ ಸಂವಾದ

ಶಿವಮೊಗ್ಗ ಜಿಲ್ಲೆಯ ಹೆಬ್ಬಯಿಲು ಗ್ರಾಮದ ಸರಕಾರಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತವಾಗಿ ನಡೆಯುತ್ತಿರುವ ಯಕ್ಷಧ್ರುವ ಯಕ್ಷಶಿಕ್ಷಣದ ವಿದ್ಯಾರ್ಥಿಗಳ ಜೊತೆ ಪಟ್ಲ ಸತೀಶ್ ಶೆಟ್ಟಿಯವರು ಸಂವಾದ ನಡೆಸಿ ನಾಟ್ಯಭ್ಯಾಸವನ್ನು ಕಣ್ಣುತುಂಬಿಸಿಕೊಂಡರು.