Skip to main content

yakshadhruvapatlafoundation.org

ಯಕ್ಷಧ್ರುವ ಕಲಾವಿದರ ಆಶಾಕಿರಣ: ಮಂಗಳೂರು ಘಟಕದ 6ನೇ ವಾರ್ಷಿಕ ಸಮಾರಂಭ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮಂಗಳೂರು ಘಟಕದ 6ನೇ ವಾರ್ಷಿಕ ಸಮಾರಂಭ ಮಾ.28ರಂದು ಮಂಗಳೂರಿನ ಪುರಭವನದಲ್ಲಿ ಜರುಗಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕದ್ರಿ ಸರ್ಕಾರಿ ಹಿರಿಯ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಬಂಟ್ವಾಳ ಘಟಕದ 2ನೇ ವಾರ್ಷಿಕೋತ್ಸವ: ಪೂರ್ವಭಾವಿ ಸಭೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಮಾ. 27 ರಂದು ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಇಂದು ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಘಟಕ ಅಧ್ಯಕ್ಷರಾದ ಚಂದ್ರಹಾಸ ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಯಕ್ಷಗಾನ ಕಲಾವಿದರಿಗೆ ನೆರವಾಗಿರುವ ಹೆಮ್ಮೆ: ಪಟ್ಲ

ಯಕ್ಷಗಾನ, ನಾಟಕ ಕಲಾವಿದರಿಗೆ ಸುಮಾರು 15 ಕೋಟಿ ರೂ. ವರೆಗೆ ನೆರವು ನೀಡಿರುವ ಹೆಮ್ಮೆ, ಯಕ್ಷಗಾನ ಕಲಾವಿದನಾದ ತನಗೆ ಇದೆ. ಇದಕ್ಕೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಸುರತ್ಕಲ್ ಬಂಟರ ಭವನ ವಠಾರದಲ್ಲಿ ಶನಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ, ಸ್ಟಾರ್ ವ್ಯಾಲ್ಯೂ […]

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸನ್ಮಾನ

ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು – ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸುವುದರೊಂದಿಗೆ ಕಲಾವಿದರಾದ ಸುಬ್ರಾಯ ಹೊಳ್ಳ ಕಾಸರಗೋಡು, ಅಕ್ಷಯಕುಮಾರ್ ಮಾರ್ನಾಡ್ ಇವರನ್ನು ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಸಂಘಟಕರ ಉಪಸ್ಥಿತಿಯಲ್ಲಿ ಸಂಮಾನಿಸಲಾಯಿತು.

ಸುರತ್ಕಲ್‌ನಲ್ಲಿ ಪಟ್ಲ ಫೌಂಡೇಶನ್ ಘಟಕದ ಪಂಚಮ ವಾರ್ಷಿಕೋತ್ಸವ

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ (ರಿ) ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಮಾರ್ಚ್ 15ರಂದು ಶನಿವಾರ ಸಂಜೆ 6.30 ಗಂಟೆಗೆ ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಲಿದೆ.

ಯಕ್ಷಧ್ರುವ ಪಟ್ಲ ಫೌಂಡೇಶನ್: ಕಲಾವಿದನಿಗೆ ಧನಸಹಾಯ

ಕಳೆದ 35 ವರ್ಷಕ್ಕೂ ಮಿಕ್ಕಿ ಸಸಿಹಿತ್ಲು ಮೇಳ ಸೇರಿದಂತೆ ವಿವಿಧ ಮೇಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ ಅನಾರೋಗ್ಯಕ್ಕೊಳಗಾಗಿರುವ ಕಲಾವಿದರಾದ ಶ್ರೀ ನಾಗೇಶ್ ಆಚಾರ್ಯ ಕುಲಶೇಖರ ಇವರ ಮನೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಇಂದು ಭೇಟಿ ನೀಡಿ ಆರೋಗ್ಯಕ್ಷೇಮ ವಿಚಾರಿಸಿ ಫೌಂಡೇಶನ್ ನ ವತಿಯಿಂದ ಧನಸಹಾಯ ನೀಡಿದರು.

‘ತ್ರಿಜನ್ಮ ಮೋಕ್ಷ’ ಯಕ್ಷಗಾನ ಬಯಲಾಟದಲ್ಲಿ ಪಟ್ಲ ಫೌಂಡೇಶನಿಗೆ ನೆನಪಿನ ಕಾಣಿಕೆ

ಜಪ್ಪು ಮಜಿಲ ಹತ್ತು ಸಮಸ್ತರ ವತಿಯಿಂದ ಮಂಗಳಾದೇವಿ ದೇವಸ್ಥಾನದ ಎದುರುಗಡೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಯವರಿಂದ ‘ತ್ರಿಜನ್ಮ ಮೋಕ್ಷ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ರೂ. ಒಂದು ಲಕ್ಷ ಮೊತ್ತದ ಚೆಕ್‌ನ್ನು ಹಾಗೂ 2 ಬೆಳ್ಳಿಯ ದೀಪವನ್ನು ಮೇಳದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಇವರಿಗೆ ನೀಡಲಾಯಿತು.

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ರೂ. 25 ಲಕ್ಷ ಅನುದಾನ ವಿತರಣೆ

ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಾಶ್ರಯ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ವಿವಿಧ ಯಕ್ಷಗಾನ ಮೇಳಗಳ ಕಲಾವಿದರಿಗೆ ಹಾಗೂ ದೈವಾರಾದನೆಯ ಪರಿಚಾರಕರಿಗೆ ರೂ. 25 ಲಕ್ಷದ ಮೊತ್ತದ ಚೆಕ್ಕುಗಳನ್ನು ಇಂದು ಟ್ರಸ್ಟಿನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಇವರ ಕಚೇರಿಯಲ್ಲಿ 16 ಮಂದಿ ಫಲಾನುಭವಿಗಳಿಗೆ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ವಿತರಿಸಿದರು.

ಮಂಗಳೂರು ಮಹಾನಗರ ಪಾಲಿಕೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ ರೂ. 10 ಲಕ್ಷ ಫ್ರೋತ್ಸಾಹಧನ ವಿತರಣೆ

ಮಂಗಳೂರು ಮಹಾಪಾಲಿಕೆಯ ವತಿಯಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ರಾಜ್ಯದ್ಯಂತ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಗಾನಂ ವಿಶ್ವಗಾನಂ ಯೋಜನೆಯಡಿ 2024-25ನೇ ಸಾಲಿನ ಬಜೆಟಿನಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಸ್ಟಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಇವರು ಘೋಷಿಸಿದ ರೂ. 10 ಲಕ್ಷ ಪ್ರೋತ್ಸಾಹಧನವನ್ನು ಮಾನ್ಯ ಮೇಯರ್ ಮನೋಜ್ ಕುಮಾರ್ ಇವರು ಪಟ್ಲ ಫೌಂಡೇಶನಿನ ಕೇಂದ್ರೀಯ ಸಮಿತಿಯ ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಇವರ ಮೂಲಕ ಟ್ರಸ್ಟಿಗೆ ನೀಡಿದರು.