ತ್ರಿರಂಗ ಸಂಗಮ ಮುಂಬಯಿ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೌರವ

ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಮುಂಬಯಿ ಯಾನ 2024ರ ಸಮಾರೋಪ ಸಮಾರಂಭ, ಶ್ರೀ ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನ ನಡೆಯಿತು.
ಗೋವಾದಲ್ಲಿಯು ಯಕ್ಷಗಾನ ಕಲೆ ಬೆಳೆಸಿದ ರೀತಿ ಹೆಮ್ಮೆ ಪಡವಂತದ್ದು- ಸತೀಶ್ ಪಟ್ಲ

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಲೆ ಬೆಳೆದ ರೀತಿ, ಗೋವಾದಲ್ಲಿ ನೀವೆಲ್ಲರೂ ಸೇರಿ ಕಲೆ ಬೆಳೆಸಿದ ವಿಷಯ ತಿಳಿದು ನನಗೆ ಹೆಮ್ಮೆ ಅನಿಸುತ್ತದೆ. ಯಕ್ಷಗಾನ ಆರಾಧನಾ ಕಲೆ, ಸಂಸ್ಕೃತಿ, ಸಂದೇಶ ಸಾರುವ ಕಲೆ ಎಂದು ಪಟ್ಲ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶ್ರೇಷ್ಠ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ನುಡಿದರು.
ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ

ಯಕ್ಷಧ್ರುವ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯ ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಾವೂರಿನಲ್ಲಿ ನಡೆಯಿತು.
ಪೌರಾಣಿಕ ನಾಟಕಗಳಿಂದ ಪ್ರೇಕ್ಷಕರಿಗೆ ಭಕ್ತಿಯ ಸಂದೇಶ: ಪಟ್ಲ ಸತೀಶ್ ಶೆಟ್ಟಿ

ಶ್ರೀ ಲಲಿತೆ ಕಲಾವಿದರು (ರಿ) ಮಂಗಳೂರು ಇವರ ನೂತನ ಕಲಾಕೃತಿ ಕದ್ರಿ ನವನೀತ ಶೆಟ್ಟಿಯವರು ರಚಿಸಿರುವ ಜೀವನ್ ಉಳ್ಳಾಲ್ ನಿರ್ದೇಶನ, ಲಯನ್ ಕಿಶೋರ್ ಡಿ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಶನಿ ಮಹಾತ್ಮೆ ತುಳು ಕನ್ನಡ ಪೌರಾಣಿಕ ನಾಟಕದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಕದ್ರಿ ಮಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ e.V. ಉದ್ಘಾಟನೆ

ಅಕ್ಟೊಬರ್ 3. ಜರ್ಮನಿಯು ಏಕೀಕರಣವಾದ ದಿನ. ಮ್ಯೂನಿಕ್ ನಗರದಲ್ಲಿ ಅಕ್ಟೊಬರ್ ಫೆಸ್ಟ್ ನೋಡಲೆಂದು ಜನಸಾಗರ. ಈ ಸಂಭ್ರಮದ ಮಧ್ಯವೇ ಇತ್ತಕಡೆಯಲ್ಲಿ ಐನೇವೆಲ್ಟ್ ಹೌಸ್ ನಲ್ಲಿರುವ ಒಂದು ರಂಗಮಂದಿರದಲ್ಲಿ ಸುಮಾರು ಜನ ಕಿಕ್ಕಿರಿದು ತುಂಬಿದ್ದರು. ಎಲ್ಲರಲ್ಲೂ ಕಾರ್ಯಕ್ರಮದ ಬಗ್ಗೆ ಕುತೂಹಲ. ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ಯುರೋಪ್ ಘಟಕ ಸ್ಥಾಪಿಸಿ ಔಪಚಾರಿಕವಾಗಿ ಘೋಷಣೆ ಮಾಡುವ ದಿನ.
ಯೂರೋಪ್ ರಾಷ್ಟ್ರಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ ಪಟ್ಲ ಫೌಂಡೇಶನ್ – ಅಕ್ಟೋಬರ್ 3ರಂದು ಜರ್ಮನಿಯಲ್ಲಿ ಉದ್ಘಾಟನೆ

ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದ ಉದ್ಘಾಟನಾ ಸಮಾರಂಭ ಅಕ್ಟೋಬರ್ 3ರಂದು ಜರ್ಮನಿಯಲ್ಲಿ ನೆರವೇರಲಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ ಗೌರವ

ಯಕ್ಷಧ್ರುವ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಲಿ. ಇದರ ದ್ವಿತೀಯ ವಾರ್ಷಿಕ ಮಹಾಸಭೆಯನ್ನು ಸದ್ರಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಸತೀಶ ಶೆಟ್ಟಿ ಪಟ್ಲ ಅವರು, ಸೊಸೈಟಿಯ ನಿರ್ದೇಶಕರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು. ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರು ಶ್ರೀ ಸತೀಶ ಶೆಟ್ಟಿ ಪಟ್ಲರವರನ್ನು ಗೌರವಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ

ಕಳೆದ 75 ದಿನಗಳಿಂದ ಉತ್ತರ ಅಮೆರಿಕದ ಮೂಲೆಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್ ನಲ್ಲಿ ಸೆ.22ರಂದು ಯಶಸ್ವಿಯಾಗಿ ಮುಗಿಸಿದರು.
ಅಮೇರಿಕಾದಿಂದ ಯಕ್ಷ ಯಾತ್ರೆ ಮುಗಿಸಿ ಮಂಗಳೂರಿಗೆ ಆಗಮಿಸಿದ ಪಟ್ಲ ಸತೀಶ್ ಶೆಟ್ಟಿ ಮತ್ತು ತಂಡ

ಎರಡೂವರೆ ತಿಂಗಳ ಕಾಲ ಅಮೇರಿಕಾದ ತಿರುಗಾಟದಲ್ಲಿ ಹೊಸ ಹೊಸ ದಾಖಲೆಗಳೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇತಿಹಾಸವನ್ನೇ ನಿರ್ಮಿಸಿದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ತಂಡ ತವರಿಗೆ ಮರಳಿದೆ.
ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪಟ್ಲ ಫೌಂಡೇಶನ್ ಕಲಾವಿದರು

ಅಮೇರಿಕಾ ದೇಶದ ಮೂಲೆ ಮೂಲೆಗೂ ಯಕ್ಷಗಾನದ ಕಂಪನ್ನು ಹರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ, ಭಾರತಕ್ಕೆ ಮರಳುತಿರುವ ನಮ್ಮ ಹೆಮ್ಮೆಯ ಕಲಾವಿದರು.
