ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ವತಿಯಿಂದ ಕುಂಬ್ಳೆ ಶ್ರೀಧರ ರಾವ್ ಇವರಿಗೆ ನುಡಿನಮನ ಕಾರ್ಯಕ್ರಮ

ಉಪ್ಪಿನಂಗಡಿ ಪರಿಸರದ 34 ನೆಕ್ಕಿಲಾಡಿ ನಿವಾಸಿ ತೆಂಕುತಿಟ್ಟಿನ ಅಗ್ರಮಾನ್ಯ ಹಿರಿಯ ಕಲಾವಿದರಾದ ಶ್ರೀಮಾನ್ ಕುಂಬ್ಳೆ ಶ್ರೀಧರ ರಾವ್ ಇವರ ಆಕಸ್ಮಿಕ ನಿಧನಕ್ಕೆ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಉಪ್ಪಿನಂಗಡಿಯ ಶ್ರೀಗುರು ಸುದೀಂದ್ರ ಕಲಾಮಂದಿರದಲ್ಲಿ ಜರಗಿತು.
ಯಕ್ಷಾಶ್ರಯ ಯೋಜನೆ: ಪ್ರಶಾಂತ ಕಲ್ಲಡ್ಕ ಅವರಿಗೆ ಮನೆ ಹಸ್ತಾಂತರ

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷಾಶ್ರಯ ಯೋಜನೆಯಲ್ಲಿ ನಿರ್ಮಿಸಿದ ವಿನೂತನ ಮನೆಯನ್ನು ಕಟೀಲು ಮೇಳದ ಕಲಾವಿದರಾದ ಪ್ರಶಾಂತ ಕಲ್ಲಡ್ಕ ಅವರ ಕುಟುಂಬಕ್ಕೆ 12.07.2024 ಶುಕ್ರವಾರದಂದು ಹಸ್ತಾಂತರಿಸಲಾಯಿತು. ಎಂ ಆರ್ ಜಿ ಗ್ರೂಪ್ಸ್ ನ ಸಂಸ್ಥಾಪಕರಾದ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಈ ಮನೆಯನ್ನು ನಿರ್ಮಿಸಲು ಆರ್ಥಿಕ ಸಹಕಾರ ನೀಡಿದ್ದಾರೆ.
ಅಮೆರಿಕಾ ತಲುಪಿದ ಪಟ್ಲ ಫೌಂಡೇಶನ್ ತಂಡ

ಅಮೇರಿಕಾ ದೇಶಕ್ಕೆ ಬಂದಿಳಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ. ತಂಡವನ್ನು ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ USA ಘಟಕದ ಜನರಲ್ ಸೆಕ್ರೆಟರಿ ಡಾ.ಶ್ರೀಧರ್ ಆಳ್ವಾ, ಸುಭಾಷ್ ಶೆಟ್ಟಿ ಮತ್ತು ಅಜಯ್ ಹಾಗೂ ತಂಡ.
ಬೆಂಗಳೂರಿನಲ್ಲಿ ಉಡುಪಿಯ ಪಟ್ಲ ಯಕ್ಷಾಶ್ರಯ ಕಾರ್ಯಕ್ಕೆ ಚಾಲನೆ

ಅಮೇರಿಕದಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ತೆರಳುತ್ತಿರುವ ಶ್ರೀ ಪಟ್ಲ ಸತೀಶ ಶೆಟ್ಟರು, ಶ್ರೀಯುತ ಪ್ರೊ.ಎಂ. ಎಲ್. ಸಾಮಗರು ಉಡುಪಿಯಲ್ಲಿ ದಾನವಾಗಿ ನೀಡಿದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಮಹತ್ವಾಕಾಂಕ್ಷೆ ಯೋಜನೆ “ಪಟ್ಲ ಯಕ್ಷಾಶ್ರಯ”ದ ದಾಖಲೆಗಳನ್ನು ದಿನಾಂಕ 09/07/2024 ರಂದು ಉಡುಪಿ ಘಟಕದ ಸಂಚಾಲಕರಾದ ಶ್ರೀ ಸುಧಾಕರ ಆಚಾರ್ಯರಿಗೆ ಬೆಂಗಳೂರಿನ ಸೌಂದರ್ಯ ಹೋಟೆಲ್ ನಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಘಟಕದ ಶ್ರೀ ಗೋಪಿ ಭಟ್, ಶ್ರೀ ಸತ್ರಾಜಿತ ಭಾರ್ಗವ, ಕಲಾವಿದರಾದ ಶ್ರೀ ಚಂದ್ರಶೇಖರ ಧರ್ಮಸ್ಥಳ, ಶ್ರೀ ಮಹೇಶ ಮಣಿಯಾಣಿ, ಶ್ರೀ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಶ್ರೀ ಮೋಹನ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.
ಪಟ್ಲ ಯಕ್ಷಾಶ್ರಯ ಯೋಜನೆಯ ನೂತನ ಮನೆಯ ಹಸ್ತಾಂತರ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹತ್ವದ ಯೋಜನೆಯಲ್ಲಿ ಒಂದಾದ ಪಟ್ಲ ಯಕ್ಷಾಶ್ರಯ ಕಲಾವಿದನಿಗೆ ನೂತನ ಮನೆಯನ್ನು ಮಂದಾರ್ತಿ ಮೇಳದ ಕಲಾವಿದ ಉದಯ ಸುವರ್ಣ ಇವರಿಗೆ ಪ್ರವೀಣ್ ಶೆಟ್ಟಿಯವರು ಹಾಗೂ ಬ್ರಹ್ಮಾವರ ಘಟಕದ ಪದಾಧಿಕಾರಿಗಳು 08/07/24 ನೇ ಸೋಮವಾರ ಉಡುಪಿ ತಾಲೂಕಿನ ಹೆಬ್ರಿಯಲ್ಲಿ ಹಸ್ತಾಂತರಿಸಿದರು.
ನಮ್ಮ ಫೌಂಡೇಶನ್ ನ ಪೋಷಕರಾದ ಫೋರ್ಚೂನ್ ಗ್ರೂಪ್ಸ್ ನ ಮಾಲೀಕರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಯವರು ಈ ಮನೆಯ ಕೊಡುಗೈ ದಾನಿಗಳು..
ಚಂದ್ರಶೇಖರ ಸಿದ್ದಕಟ್ಟೆಯವರಿಗೆ ಪಟ್ಲ ಫೌಂಡೇಶನ್ ನಿಂದ ನೆರವು

ವಿಶೇಷ ಚೇತನ ಚಲನಚಿತ್ರ ಹಾಗೂ ರಂಗನಟ ಶ್ರೀ ಚಂದ್ರಶೇಖರ ಸಿದ್ದಕಟ್ಟೆಯವರ ಜೀವನ ನಿರ್ವಹಣೆಗಾಗಿ ಅವರು ಪ್ರಾರಂಭಿಸಲಿರುವ ಸ್ವಂತ ಸೆಲೂನಿನ (ಕ್ಷೌರಿಕ ವೃತ್ತಿಗಾಗಿ) ಕೆಲಸ ಕಾರ್ಯಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ರೂ. 25,000/- ನೆರವನ್ನು ನೀಡಿ ಸಹಕರಿಸಲಾಯಿತು.
ಮೂಡುಬಿದ್ರೆ: ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭ

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಮಂಗಳೂರು ಇದರ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ಮೂಡುಬಿದ್ರಿ ಜ್ಯೋತಿನಗರದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಜರಗಿತು.
ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಯಕ್ಷಶಿಕ್ಷಣ ನಾಟ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ದಿನಾಂಕ 01.07.2024 ರಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಪ್ರಾಯೋಜಿತ ಯಕ್ಷ ಶಿಕ್ಷಣ ನಾಟ್ಯ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆಯಿತು. ಯಕ್ಷ ಧ್ರುವ ಪಟ್ಲ ಫೌಂಡೇಶನ್, ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಬಹರೈನ್ ಸೌದಿ ಘಟಕದ ವಾರ್ಷಿಕೋತ್ಸವದ ಪೂರ್ವಸಿದ್ಧತೆ

ಯಕ್ಷಧ್ರುವ ಪಟ್ಲ ಫೌಂಡೇಶನ್ – ಬಹರೈನ್ ಸೌದಿ ಘಟಕದ ವಾರ್ಷಿಕೋತ್ಸವ – ಪಟ್ಲ ಸಂಭ್ರಮ 2024 ರ ಪೂರ್ವಸಿದ್ಧತೆಯ ಸಮಾಲೋಚನಾ ಸಭೆ ಇಂದು ಕನ್ನಡ ಭವನದಲ್ಲಿ ನಡೆಸಲಾಯಿತು.
ಯಕ್ಷಧ್ರುವ ಯಕ್ಷ ಶಿಕ್ಷಣ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಳ್ಳಿ, ಇಲ್ಲಿ ‘ಯಕ್ಷಧ್ರುವ ಯಕ್ಷ ಶಿಕ್ಷಣ’ ಯಕ್ಷಗಾನ ತರಗತಿಯನ್ನು ಯಕ್ಷಗಾನ ಗುರುಗಳಾದ ಸುರೇಶ್ ಆಚಾರ್ಯ ಮರ್ಣೆಯವರಿಂದ ಚಾಲನೆಗೊಂಡಿತು. ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
