Skip to main content

yakshadhruvapatlafoundation.org

ಅಡ್ಯಾರ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026: ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ

Mangaluru: ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ಶನಿವಾರ ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು. ಬೆಳಿಗ್ಗೆ ಯಕ್ಷಧ್ರುವ ಪಟ್ಲ ಸಂಭ್ರಮ 2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿಗಳಾದ ಡಾ ಯಾಜಿ ನಿರಂಜನ ಭಟ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕರಾದ, ಉದ್ಯಮಿ ಶಶಿಧರ ಬಿ ಶೆಟ್ಟಿ ಉದ್ಘಾಟಿಸಿದರು. ಸಂಘ ಸಂಸ್ಥೆಗಳು […]

ಈ ನೆಲದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸ ಯಕ್ಷಗಾನ‌ ಮಾಡಿದೆ: ಕ್ಯಾಪ್ಟನ್ ಬ್ರಿಜೇಶ್ ಚೌಟ

Mangaluru: ಮಂಗಳೂರು: ಈ ನೆಲದ ಅಸ್ಮಿತೆ ಸನಾತನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಕರಾವಳಿಗರು. ಇಲ್ಲಿ ಕಲೆ ಮತ್ತು ಸಂಸ್ಕೃತಿ ದೊಡ್ಡ ಪಾತ್ರವನ್ನು ವಹಿಸಿಕೊಂಡಿದೆ. ಈ ನೆಲದ ಕಲೆ ಮತ್ತು ಸಂಸ್ಜೃತಿಯನ್ನು ಉಳಿಸುವ ಕೆಲಸ ಯಕ್ಷಗಾನ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗದೊಂದಿಗೆ ನಡೆದ ಯಕ್ಷಧ್ರುವ-ಯಕ್ಷ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26 ವನ್ನು […]

ಕಡಬ ತಾಲೂಕು ಘಟಕದ ವತಿಯಿಂದ ಶರವೂರಿನಲ್ಲಿ ಪಾವಂಜೆ ಮೇಳದ ಛಾಯನಂದನ ಯಕ್ಷಗಾನ

ಆಲಂಕಾರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಕಡಬ ತಾಲ್ಲೂಕು ಘಟಕದ ವತಿಯಿಂದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಛಾಯಾನಂದನ ಯಕ್ಷಗಾನ ಬಯಲಾಟ ನಡೆಯಿತು.ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಕಡಬ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕಡಬ ತಾಲ್ಲೂಕು ಘಟಕದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಯಕ್ಷಧ್ರುವ ಪಟ್ಲ ಪೌಂಡೇಶನ್ ವತಿಯಿಂದ […]

ತುಳುನಾಡ ಪರಿಪೂರ್ಣ ಕಲೆ ಯಕ್ಷಗಾನ: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ

Mangaluru: ಜೂನ್ 1 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ಮೈದಾನದಲ್ಲಿ 10ನೇ ವರ್ಷದ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಸುಮಾರು 30 ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಅಬ್ಬರ ತಾಳದಿಂದ ಶುರುವಾದ ಕಾರ್ಯಕ್ರಮ ರಾತ್ರಿಯವರೆಗಗೂ ಸರಿಯಾದ ಸಮಯ ಪಾಾಲನೆಯಿಂದ ಮುಕ್ತಾಯವಾಯಿತು. ಈ ಬಾರಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ, ಯಕ್ಷಗಾನ ಕಾರ್ಯಕ್ರಮ ಸೇರಿದಂತೆ ಈ ವರ್ಷ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರಣಕ್ಕೆ ಭರತನಾಟ್ಯ, […]

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025: ಆಮಂತ್ರಣ ಪತ್ರಿಕೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025 ರಾಷ್ಟ್ರೀಯ ಕಲಾ ಸಮ್ಮೇಳನ ದಿನಾಂಕ ▪️ 01.06.2025 ಆದಿತ್ಯವಾರ ಸ್ಥಳ▪️ ಅಡ್ಯಾರ್ ಗಾರ್ಡನ್,ಮಂಗಳೂರು ಆಮಂತ್ರಣ ಪತ್ರಿಕೆ  

ಯಕ್ಷಧ್ರುವ ಪಟ್ಲ ಫೌಂಡೇಶನ್ ರಕ್ತದಾನ ಶಿಬಿರ ಯಶಸ್ವಿ

ಬಹ್ರೈನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹ್ರೈನ್ ಮತ್ತು ಸೌದಿ ಘಟಕವು ತಮ್ಮ ಮೂರನೇ ವಾರ್ಷಿಕ ರಕ್ತದಾನ ಶಿಬಿರವನ್ನು ಸಲ್ಮಾನಿಯಾ ಮೆಡಿಕಲ್ ಕಾಂಪ್ಲೆಕ್ಸ್‌ನ ಸೆಂಟ್ರಲ್ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಸಂಜೆ 7:00 ಗಂಟೆಯಿಂದ ರಾತ್ರಿ 11:30ರವರೆಗೆ ನಡೆದ ಈ ಶಿಬಿರದಲ್ಲಿ 80 ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ಅತ್ಯುತ್ಸಾಹ ಪ್ರದರ್ಶಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್: ಕಲಾವಿದನಿಗೆ ಧನಸಹಾಯ

ಕಳೆದ 35 ವರ್ಷಕ್ಕೂ ಮಿಕ್ಕಿ ಸಸಿಹಿತ್ಲು ಮೇಳ ಸೇರಿದಂತೆ ವಿವಿಧ ಮೇಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ ಅನಾರೋಗ್ಯಕ್ಕೊಳಗಾಗಿರುವ ಕಲಾವಿದರಾದ ಶ್ರೀ ನಾಗೇಶ್ ಆಚಾರ್ಯ ಕುಲಶೇಖರ ಇವರ ಮನೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಇಂದು ಭೇಟಿ ನೀಡಿ ಆರೋಗ್ಯಕ್ಷೇಮ ವಿಚಾರಿಸಿ ಫೌಂಡೇಶನ್ ನ ವತಿಯಿಂದ ಧನಸಹಾಯ ನೀಡಿದರು.

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ರೂ. 25 ಲಕ್ಷ ಅನುದಾನ ವಿತರಣೆ

ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಾಶ್ರಯ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ವಿವಿಧ ಯಕ್ಷಗಾನ ಮೇಳಗಳ ಕಲಾವಿದರಿಗೆ ಹಾಗೂ ದೈವಾರಾದನೆಯ ಪರಿಚಾರಕರಿಗೆ ರೂ. 25 ಲಕ್ಷದ ಮೊತ್ತದ ಚೆಕ್ಕುಗಳನ್ನು ಇಂದು ಟ್ರಸ್ಟಿನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಇವರ ಕಚೇರಿಯಲ್ಲಿ 16 ಮಂದಿ ಫಲಾನುಭವಿಗಳಿಗೆ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ವಿತರಿಸಿದರು.

ಮಂಗಳೂರು ಮಹಾನಗರ ಪಾಲಿಕೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ ರೂ. 10 ಲಕ್ಷ ಫ್ರೋತ್ಸಾಹಧನ ವಿತರಣೆ

ಮಂಗಳೂರು ಮಹಾಪಾಲಿಕೆಯ ವತಿಯಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ರಾಜ್ಯದ್ಯಂತ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಗಾನಂ ವಿಶ್ವಗಾನಂ ಯೋಜನೆಯಡಿ 2024-25ನೇ ಸಾಲಿನ ಬಜೆಟಿನಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಸ್ಟಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಇವರು ಘೋಷಿಸಿದ ರೂ. 10 ಲಕ್ಷ ಪ್ರೋತ್ಸಾಹಧನವನ್ನು ಮಾನ್ಯ ಮೇಯರ್ ಮನೋಜ್ ಕುಮಾರ್ ಇವರು ಪಟ್ಲ ಫೌಂಡೇಶನಿನ ಕೇಂದ್ರೀಯ ಸಮಿತಿಯ ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಇವರ ಮೂಲಕ ಟ್ರಸ್ಟಿಗೆ ನೀಡಿದರು.