yakshadhruvapatlafoundation.org

ಯಕ್ಷಾಶ್ರಯ ಫಲಾನುಭವಿಗಳಿಗೆ ಗೃಹನಿರ್ಮಾಣದ ಮೊತ್ತ ವಿತರಣೆ

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು. ಯಕ್ಷಾಶ್ರಯ ಫಲಾನುಭವಿಗಳಿಗೆ ಇಂದು (05-08-2024) ಸಂಜೆ ಎಂಪೈರ್ ಮಾಲ್ ನಲ್ಲಿರುವ ಸಿ ಎ ಸುದೇಶ್ ಕುಮಾರ್ ರೈ ಅವರ ಆಫೀಸಿನ ಬಳಿ ಗೃಹನಿರ್ಮಾಣದ ಮುಂದಿನ ಮೊತ್ತ ಸುಮಾರು 10 ಲಕ್ಷದವರೆಗೆ ವಿತರಿಸಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ದಿನ: ಐತಿಹಾಸಿಕ ಮೈಲಿಗಲ್ಲು

ಫೀನಿಕ್ಸ್‌ನಲ್ಲಿರುವ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ದೇವಸ್ಥಾನದಲ್ಲಿ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಅಭೂತಪೂರ್ವ ಗೌರವಕ್ಕೆ ಪಾತ್ರವಾಗಿದೆ.  ಜುಲೈ 27 ರಂದು ಈ ಪ್ರದರ್ಶನ ನಡೆದ ಕಾರಣ ಆ ದಿನವನ್ನು ಅರಿಜೋನಾದ ಟೆಂಪೆ ನಗರದ ಮೇಯರ್ ಶ್ರೀ ಕೋರೆ ವುಡ್ಸ್, “ಯಕ್ಷಧ್ರುವ ಪಟ್ಲ ಫೌಂಡೇಶನ್ ದಿನ” ಎಂದು ಘೋಷಿಸಿದ್ದಾರೆ!

ಅಮೇರಿಕಾದಲ್ಲಿ 75 ದಿನಗಳ ಯಕ್ಷಗಾನ ಪ್ರಚಾರ: ಪಟ್ಲ ಫೌಂಡೇಷನ್‌ ಟ್ರಸ್ಟ್‌ನ ಹಿರಿಮೆ

ಪಟ್ಲಾ ಫೌಂಡೇಶನ್ ಜುಲೈ 9 ರಂದು ಅಮೆರಿಕ ಪ್ರವಾಸ ಕೈಗೊಂಡು ಅಮೇರಿಕಾದಲ್ಲಿ ಯಕ್ಷಗಾನ ಕಾರ್ಯಕ್ರಮ ಮತ್ತು ತರಬೇತಿ ಶಿಬಿರಗಳನ್ನು ಮಾಡಿ ಸತತ 75 ದಿನಗಳವರೆಗೆ ಅಲ್ಲಿನ ಯಕ್ಷಾಭಿಮಾನಿಗಳಿಗೆ ಈ ಕಲೆಯ ವೈಭವವನ್ನು ನೀಡುತ್ತಿದ್ದಾರೆ.

ಅಮೇರಿಕಾದಲ್ಲಿರುವ ಭಾರತದ ರಾಯಭಾರಿಯಿಂದ ಯಕ್ಷಗಾನ ಕಲೆಗೆ ಅಪಾರ ಮೆಚ್ಚುಗೆ

ಅಮೇರಿಕಾದ ಸಿಯಾಟಲ್ ನಲ್ಲಿ ನಡೆದ “ಶ್ರೀ ದೇವಿ ಮಹಾತ್ಮ್ಯೆ” ಯಕ್ಷಗಾನದ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರಿ (Consulate General) ಪ್ರಕಾಶ್ ಗುಪ್ತಾ ಹಾಗೂ ರಾಯಭಾರಿ ಕಛೇರಿಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಅವರು ಪಟ್ಲ ಫೌಂಡೇಶನ್ ಗೆ ಎಲ್ಲಾ ರೀತಿಯ ಸಹಕಾರ Consulate ಕಡೆಯಿಂದ ನೀಡುವುದಾಗಿ ಭರವಸೆ ನೀಡಿದರು.

ಸರಪಾಡಿ ಸರಕಾರಿ ಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿ ಉದ್ಘಾಟನೆ

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆಸುವ ಯಕ್ಷಧ್ರುವ-ಯಕ್ಷಶಿಕ್ಷಣ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ತರಬೇತಿ ತರಗತಿ ಫೌಂಡೇಶನ್‌ ನ ಸರಪಾಡಿ ಘಟಕದ ಸಹಕಾರದಲ್ಲಿ ಸರಪಾಡಿ ಸ.ಪ್ರೌ.ಶಾಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರಿನಲ್ಲಿ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ

ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ ) ಮಂಗಳೂರು, ಇದರ ಬೆಳ್ತಂಗಡಿ ಘಟಕದ ಸಹಯೋಗದೊಂದಿಗೆ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರಿನಲ್ಲಿ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಯಕ್ಷಾಶ್ರಯ ಯೋಜನೆ: ಪ್ರಶಾಂತ ಕಲ್ಲಡ್ಕ ಅವರಿಗೆ ಮನೆ ಹಸ್ತಾಂತರ

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷಾಶ್ರಯ ಯೋಜನೆಯಲ್ಲಿ ನಿರ್ಮಿಸಿದ ವಿನೂತನ ಮನೆಯನ್ನು ಕಟೀಲು ಮೇಳದ  ಕಲಾವಿದರಾದ ಪ್ರಶಾಂತ ಕಲ್ಲಡ್ಕ ಅವರ ಕುಟುಂಬಕ್ಕೆ 12.07.2024 ಶುಕ್ರವಾರದಂದು ಹಸ್ತಾಂತರಿಸಲಾಯಿತು.  ಎಂ ಆರ್ ಜಿ ಗ್ರೂಪ್ಸ್ ನ ಸಂಸ್ಥಾಪಕರಾದ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಈ ಮನೆಯನ್ನು ನಿರ್ಮಿಸಲು ಆರ್ಥಿಕ ಸಹಕಾರ ನೀಡಿದ್ದಾರೆ.   

ಅಮೆರಿಕಾ ತಲುಪಿದ ಪಟ್ಲ ಫೌಂಡೇಶನ್ ತಂಡ

ಅಮೇರಿಕಾ ದೇಶಕ್ಕೆ ಬಂದಿಳಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ. ತಂಡವನ್ನು ಸ್ಯಾನ್ ಫ್ರಾನ್ಸಿಸ್ಕೋ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ USA ಘಟಕದ ಜನರಲ್ ಸೆಕ್ರೆಟರಿ ಡಾ.ಶ್ರೀಧರ್ ಆಳ್ವಾ, ಸುಭಾಷ್ ಶೆಟ್ಟಿ ಮತ್ತು ಅಜಯ್ ಹಾಗೂ ತಂಡ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ಅಮೆರಿಕಾ ಪ್ರವಾಸ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಪಟ್ಲ ಟ್ರಸ್ಟಿನ ಒಂಭತ್ತು ಹೆಸರಾಂತ ಕಲಾವಿದರು, 75 ದಿವಸಗಳ ಈ ಪ್ರವಾಸದ ಅವಧಿಯಲ್ಲಿ ವಿವಿಧಢೆ ಯಕ್ಷಗಾನದ ಕಾರ್ಯಕ್ರಮ ಹಾಗೂ ತರಬೇತಿ ಶಿಬಿರಗಳನ್ನು ನಡೆಸಿಕೊಡಲಿದ್ದಾರೆ.

ಬೆಂಗಳೂರಿನಲ್ಲಿ ಉಡುಪಿಯ ಪಟ್ಲ ಯಕ್ಷಾಶ್ರಯ ಕಾರ್ಯಕ್ಕೆ ಚಾಲನೆ

ಅಮೇರಿಕದಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ತೆರಳುತ್ತಿರುವ ಶ್ರೀ ಪಟ್ಲ ಸತೀಶ ಶೆಟ್ಟರು, ಶ್ರೀಯುತ ಪ್ರೊ.ಎಂ. ಎಲ್. ಸಾಮಗರು ಉಡುಪಿಯಲ್ಲಿ ದಾನವಾಗಿ ನೀಡಿದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಮಹತ್ವಾಕಾಂಕ್ಷೆ  ಯೋಜನೆ “ಪಟ್ಲ ಯಕ್ಷಾಶ್ರಯ”ದ ದಾಖಲೆಗಳನ್ನು ದಿನಾಂಕ 09/07/2024 ರಂದು ಉಡುಪಿ ಘಟಕದ ಸಂಚಾಲಕರಾದ  ಶ್ರೀ ಸುಧಾಕರ ಆಚಾರ್ಯರಿಗೆ ಬೆಂಗಳೂರಿನ ಸೌಂದರ್ಯ ಹೋಟೆಲ್ ನಲ್ಲಿ ಹಸ್ತಾಂತರಿಸಿದರು.  ಈ ಸಂದರ್ಭದಲ್ಲಿ ಬೆಂಗಳೂರು ಘಟಕದ ಶ್ರೀ ಗೋಪಿ ಭಟ್, ಶ್ರೀ ಸತ್ರಾಜಿತ ಭಾರ್ಗವ, ಕಲಾವಿದರಾದ ಶ್ರೀ ಚಂದ್ರಶೇಖರ ಧರ್ಮಸ್ಥಳ, ಶ್ರೀ ಮಹೇಶ ಮಣಿಯಾಣಿ, ಶ್ರೀ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಶ್ರೀ ಮೋಹನ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.