Skip to main content

yakshadhruvapatlafoundation.org

ಪಟ್ಲ ಯಕ್ಷಾಶ್ರಯದ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ

ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ, ಹಾಗೂ ಕಲಾವಿದರ ತುರ್ತು ಆರೋಗ್ಯ ಚಿಕಿತ್ಸಾ ವೆಚ್ಚಕ್ಕೆ  ಸುಮಾರು 20 ಲಕ್ಷ ರೂಪಾಯಿ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಉಚಿತ ಯಕ್ಷಗಾನ ತರಬೇತಿ ಅಭಿಯಾನ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವನ್ನು, ಮುಳ್ಳಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಂಗಳೂರಿನ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿದರು.

ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನೆ ಕಾರ್ಯಕ್ರಮ

ದಿನಾಂಕ :25-06-2024 ನೇ ಮಂಗಳವಾರ ರಂದು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಅತಿಥಿ ಅಭ್ಯಾಗತರಿಂದ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಶ್ರೀವತ್ಸ ದೇವರ ಸ್ತುತಿಯನ್ನು ಹಾಡಿದನು.

ಉಚಿತ ಯಕ್ಷಗಾನ ತರಬೇತಿ ಅಭಿಯಾನ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣದ ಉದ್ಘಾಟನಾ ಸಮಾರಂಭವು ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ SDMC ಅಧ್ಯಕ್ಷರಾದ ದುರ್ಗಾ ದಾಸ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಾಂಸ್ಕೃತಿಕ ಲೋಕಕ್ಕೆ ಅದ್ವಿತೀಯ ಕೊಡುಗೆ ಯಕ್ಷಗಾನ ಕಲೆ

ಮಲೆನಾಡಿನಲ್ಲಿ ಬಾಲ್ಯದಲ್ಲಿಯೇ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಬೇಕೆಂದು ಕಲೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದು. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ಎಲ್ಲರೂ ಸೇರಿ ಯಕ್ಷಗಾನ ಕಲೆ ಉಳಿಸೋಣ ಎಂದು ಎಂದು ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಹೇಳಿದರು.

ಕಾರ್ಕಳ: ಯಕ್ಷಗಾನ ತರಗತಿ ಉದ್ಘಾಟನೆ

ನಮ್ಮ ಕರಾವಳಿಯಲ್ಲಿ ಇತಿಹಾಸ ನಿರ್ಮಿತ ಕಲೆ ಯಕ್ಷಗಾನ .ಅಂತಹ ಕಲೆ ಉಳಿದು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸ ನಮ್ಮ ಕಾರ್ಕಳದ ಯಕ್ಷ ಕಲಾರಂಗ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಮಾಡುತ್ತಿದೆ.

ಯಕ್ಷಗಾನ ಜ್ಞಾನ ವೃದ್ದಿಗೆ ಪ್ರಯೋಜನ : ಪ್ರಸಿದ್ಧ ಪಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಯಕ್ಷ ಶಿಕ್ಷಣ ಯೋಜನೆಯ ಅಡಿಯಲ್ಲಿ ಸರಕಾರಿ ಪ್ರೌಢ ಶಾಲೆ, ಮೀನಕಳಿಯ ಬೈಕಂಪಾಡಿಯಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿ ಉದ್ಘಾಟನೆಗೊಂಡಿತು. ಶ್ಯಾಮ ಕನ್ ಸ್ಟ್ರಕ್ಷನ್ಸ್ ನ ಇಂಜಿನಿಯರ್ ಪ್ರಸಿದ್ಧ ಪಿ. ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ಎಲ್ಲಾ ಪ್ರಕಾರಗಳಲ್ಲಿಯೂ ಜ್ಞಾನ ವೃದ್ಧಿಗೆ ಪ್ರಯೋಜನ ವಾಗುತ್ತದೆ, ಯಕ್ಷಗಾನ ಬರೇ ಕಲೆಗೋಸ್ಕರ ಕಲಿಯುವುದಲ್ಲ, ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಸದವಕಾಶ ಎಂದು ಅವರು ತಿಳಿಸಿದರು. ಯಕ್ಷ ಶಿಕ್ಷಣ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ (USA) […]

ಅರ್ಕುಳ ಫರಂಗಿಪೇಟೆ: ಉಚಿತ ಯಕ್ಷಗಾನ ತರಬೇತಿ ಅಭಿಯಾನ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ಶ್ರೀರಾಮ ವಿದ್ಯಾ ಸಂಸ್ಥೆಗಳು, ಅರ್ಕುಳ ಫರಂಗಿಪೇಟೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎ. ಕೆ. ಜಯರಾಮ ಶೇಕ ಇವರ ಅಧ್ಯಕ್ಷತೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಇವರು ನಡೆಸಿಕೊಟ್ಟರು.

ಕಡಂದಲೆ: ಯಕ್ಷ ಶಿಕ್ಷಣ ನಾಟ್ಯ ತರಬೇತಿ ಅಭಿಯಾನ

ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ( ರಿ.) ಮಂಗಳೂರು, ಇದರ ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ಮೂಡಬಿದ್ರೆಯ ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಸಹಕಾರದೊಂದಿಗೆ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಅಭಿಯಾನ ಕಾರ್ಯಕ್ರಮವನ್ನು ಶ್ರೀಯುತ ಉಮನಾಥ್ ಕೋಟ್ಯಾನ್ ಶಾಸಕರು ಮುಲ್ಕಿ ಮೂಡಬಿದ್ರಿ ಕ್ಷೇತ್ರ ಇವರು ಉದ್ಘಾಟಿಸಿದರು.

ಬಂಟ್ವಾಳ: ಯಕ್ಷ ಶಿಕ್ಷಣ ಉದ್ಘಾಟನೆ

ಬಂಟ್ವಾಳ ತಾಲೂಕಿನ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಎರಡನೇ ವರ್ಷದ ಯಕ್ಷ ಧ್ರುವ ಯಕ್ಷ ಶಿಕ್ಷಣದ ಉದ್ಘಾಟನೆಯು ಈ ದಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಅಧ್ಯಕ್ಷತೆಯಲ್ಲಿ ನೆರವೇರಿತು.