ಮಹಾನಗರ, ಮಾ. 3: ಯಕ್ಷಮಿತ್ರರು ಅಸೈಗೋಳಿ ಇದರ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ ದಿವಾಣ ಶಿವಶಂಕರಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ರಘು ಶೆಟ್ಟಿ ನಾಳ ಹಾಗೂ ಅಸೈಗೋಳಿಯ ಉದಯ ಭಟ್ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.
ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನದ ಬೆಳವಣಿಗೆಗೆ ಸಂಘ – ಸಂಸ್ಥೆಗಳ ಪಾತ್ರ ಮಹತ್ತರವಾದುದು. ಯಕ್ಷಮಿತ್ರರು ಅಸೈಗೋಳಿ ವತಿಯಿಂದ ಐದು ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಸೇವೆಯು ನಡೆಯುತ್ತಿದೆ. ದೇವರು ಹಾಗೂ ಕಲಾಮಾತೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದರು. ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಮಾತನಾಡಿ, ನಾವೆಲ್ಲರೂ ಹಿರಿಯ ಕಲಾವಿದರನ್ನು ನೋಡಿ ಬೆಳೆದು ಬಂದವರು. ಯಕ್ಷಗಾನ ರಂಗದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮಗಳು ಅಗತ್ಯ ಎಂದರು. ಯಕ್ಷಮಿತ್ರರು ಅಸೈಗೋಳಿಯ ಅಧ್ಯಕ್ಷ ರವಿಶಂಕರ್ ಭಟ್ ಅಸೈಗೋಳಿ, ಸದಸ್ಯರಾದ ಪರಮೇಶ್ವರ ಭಟ್, ಶಬರೀಶ್ ಭಟ್, ಅರುಣ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕರಾದ ವಿನಯಕೃಷ್ಣ ಕುರ್ನಾಡು ಕಾರ್ಯಕ್ರಮ ನಿರೂಪಿಸಿದರು.
ಮೆಣ್ಗಲ್ ಫ್ರೆಂಡ್ಸ್, ಮೆಣ್ಗಲಪದವು
ಮೆಣ್ಗಲ್ ಫ್ರೆಂಡ್ಸ್, ಮೆಣ್ಗಲಪದವು ಇವರ 13ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು – ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಹಿರಿಯ ಕಲಾವಿದ ಸುಬ್ರಾಯ ಹೊಳ್ಳ, ಕಾಸರಗೋಡು ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.