Kadaba News: ಕಡಬ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಡಬ ತಾಲೂಕು ಘಟಕ ರಚನೆಯಾಗಿದ್ದು,.ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪಡ್ಡಿಲ್ಲಾಯ , ಅಧ್ಯಕ್ಷರಾಗಿ ದಯಾನಂದ ರೈ ಮನವಳಿಕೆಗುತ್ತು, ಪ್ರಧಾನ ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆಗುತ್ತು ಆಯ್ಕೆಯಾಗಿದ್ದಾರೆ.
ಸೆ.5ರಂದು ಆಲಂಕಾರಿನ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಪಟ್ಲ ಫೌಂಡೇಶನ್ ನ ಅಭಿಮಾನಿಗಳ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಎಸ್ ವಿ ಪ್ರಸಾದ್ ಕಣಿಪುರ , ಜತೆ ಕಾರ್ಯದರ್ಶಿಯಾಗಿ ಜನಾರ್ಧನ ಗೌಡ ಕಯ್ಯಪೆ,
ಕೋಶಾಧಿಕಾರಿಯಾಗಿ ಶ್ರೀಮತಿ ಮಮತಾ ಅಂಬರಾಜೆ ಉಪಾಧ್ಯಕ್ಷರಾಗಿ ವಿಠಲ್ ರೈ ಕೊಣಾಲುಗುತ್ತು , ಶ್ರೀಮತಿ ಬೇಬಿ ಪಾಟಾಲಿ, ಗೌರವ ಸಲಹೆಗಾರರಾಗಿ ಸುಬ್ರಹ್ಮಣ್ಯ ರಾವ್ ನಗ್ರಿ, ರಮೇಶ್ ಭಟ್ ಉಪ್ಪಂಗಳ, ಈಶ್ವರ ಗೌಡ ಪಜ್ಜಡ್ಕ, ರಾಧಾಕೃಷ್ಣ ರೈ ಪರಾರಿಗುತ್ತು, ಕೆ ಗೋಪಾಲ ಕಡಬ, ಮುತ್ತಪ್ಪ ಪೂಜಾರಿ ನೆಯ್ಯಲ್ಗ ಆಯ್ಕೆಯಾಗಿದ್ದಾರೆ.
ಪಟ್ಲ ಫೌಂಡೇಶನ್ ವಿಶೇಷತೆ:
ಕರಾವಳಿಯ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಸಂಸ್ಥೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ). ಮಂಗಳೂರು, ನಂತರ ನಾಟಕರಂಗ, ದೈವನರ್ತಕರು ಹಾಗೂ ಇತರ ಕಲಾವಿದರ ಪಾಲಿಗೆ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿದೆ.
₹17 ಕೋಟಿ ಮೊತ್ತದ ಸೇವಾ ಯೋಜನೆಯನ್ನು 10 ವರ್ಷಗಳಲ್ಲಿ ಅನುಷ್ಠಾನಗೊಳಿಸಿದೆ.
ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಟ್ಲ ಫೌಂಡೇಶನ್ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 43 ಘಟಕಗಳನ್ನು ಹೊಂದಿದೆ.
ಪಟ್ಲ ಪ್ರಶಸ್ತಿ : ಪ್ರಖ್ಯಾತ ಏಳು ಮಂದಿ ಕಲಾವಿದರಿಗೆ ತಲಾ 1 ಲಕ್ಷ ನಗದು, ಬೆಳ್ಳಿಯ ಪದಕ, ಸನ್ಮಾನ ಫಲಕದೊಂದಿಗೆ ವಿಶೇಷ ಸನ್ಮಾನ ನಡೆಸಿದೆ.
ಪಟ್ಲ ಯಕ್ಷಾಶ್ರಯ : ಈ ಯೋಜನೆಯಡಿಯಲ್ಲಿ 35 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದೆ ಹಾಗೂ 22 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದೆ.

ಗೃಹ ನಿರ್ಮಾಣ : 180 ಕಲಾವಿದರಿಗೆ ತಲಾ ₹25,000 ಮನೆ ರಿಪೇರಿಗೆ ಸಹಾಯ ಧನ ವಿತರಣೆ.
ಗೌರವ ಧನ ಸಹಾಯ ಹಸ್ತ: 175 ತೀರಾ ಅಶಕ್ತ ಕಲಾವಿದರಿಗೆ ತಲಾ ₹50,000
ಯಕ್ಷಧ್ರುವ ಯಕ್ಷಶಿಕ್ಷಣ : ಈ ಯೋಜನೆ ಅಡಿಯಲ್ಲಿ 87 ಸರಕಾರಿ ಶಾಲೆಗಳಲ್ಲಿ ಸುಮಾರು 9,500 ವಿದ್ಯಾರ್ಥಿಗಳಿಗೆ 48 ಮಂದಿ ಯಕ್ಷ ಗುರುಗಳ ಮೂಲಕ ಉಚಿತ ಯಕ್ಷಗಾನ ತರಬೇತಿ ಹಾಗೂ ಸುಮಾರು 650 ಮಂದಿ ವಿದ್ಯಾರ್ಥಿಗಳಿಗೆ ವಿವಿಧ ಘಟಕಗಳ ವತಿಯಿಂದ ಯಕ್ಷಗಾನ ತರಬೇತಿ
ಅಪಘಾತ ವಿಮಾ ಯೋಜನೆ : ಪ್ರತಿವರ್ಷ ಸುಮಾರು 2450 ಕಲಾವಿದರಿಗೆ (ಅಪಘಾತ ಚಿಕಿತ್ಸಾ ವೆಚ್ಚ ₹60,000 ಹಾಗೂ ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ)
ಪರಿಹಾರ ಧನ : ದೈವ ನರ್ತನದ ಸಂದರ್ಭದಲ್ಲಿ ಇಹಲೋಕ ತ್ಯಜಿಸಿದ ಕಾಂತು ಅಜಿಲ ಎಡಮೊಗರು ಕುಟುಂಬಿಕರಿಗೆ 1 ಲಕ್ಷ, ರಂಗಸ್ಥಳದಲ್ಲೇ ಇಹಲೋಕ ತ್ಯಜಿಸಿದ ಕಟೀಲು ಮೇಳದ ಗುರುವಪ್ಪ ಬಾಯಾರ್ ಕುಟುಂಬಕ್ಕೆ 1 ಲಕ್ಷ, ತಿರುಗಾಟದ ಸಂದರ್ಭದಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸಸಿಹಿತ್ಸು ಮೇಳದ ಕಲಾವಿದ ಜಗದೀಶ್ ನಲ್ಕ ಕುಟುಂಬಕ್ಕೆ 1 ಲಕ್ಷ ನೀಡಿದೆ.

ಪರಿಹಾರ ಧನ : ಅಪಘಾತ ಹಾಗೂ ಅನಾರೋಗ್ಯದಿಂದ ವಿಧಿವಶರಾದ 30 ಮಂದಿ ಕಲಾವಿದರ ಕುಟುಂಬದವರಿಗೆ ತಲಾ 50,000
ಪರಿಹಾರ ಧನ : ರಂಗಸ್ಥಳದಲ್ಲೇ ತನ್ನ ಬದುಕನ್ನು ಅಂತ್ಯಗೊಳಿಸಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರ ಕುಟುಂಬಕ್ಕೆ ₹2.5 ಲಕ್ಷ ವಿತರಿಸಿದೆ.
ಪರಿಹಾರ ಧನ : ಅಪಘಾತಕ್ಕೀಡಾಗಿ ದೇವರ ಪಾದ ಸೇರಿದ ಕಲಾವಿದ ದಿನೇಶ್ ಮಡಿವಾಳ (ಸೌಕೂರು ಮೇಳ) ಮತ್ತು ವಾಮನ ದೇವಾಡಿಗ (ಹಿರಿಯಡ್ಕ ಮೇಳ) ಇವರ ಕುಟುಂಬಕ್ಕೆ ತಲಾ 78 ಲಕ್ಷ ಹಾಗೂ ಪ್ರವೀತ್ ಆಚಾರ್ಯ (ಸಸಿಹಿತ್ತು ಮೇಳ) ಮತ್ತು ಆನಂದ ಕಟೀಲು (ಕಟೀಲು ಮೇಳ) ಇವರ ಕುಟುಂಬಕ್ಕೆ ತಲಾ ₹10 ಲಕ್ಷ – ಒಟ್ಟು ₹36 ಲಕ್ಷ ವಿಮಾಯೋಜನೆಯಲ್ಲಿ ಸಲ್ಲುತ್ತದೆ.

ಶೈಕ್ಷಣಿಕ : ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ಬಂಗಾರದ ಪದಕ ನೀಡಿದೆ.
ಕ್ರೀಡಾಕೂಟ ಆಯೋಜನೆ : ಪ್ರಪ್ರಥಮ ಬಾರಿಗೆ ತೆಂಕು-ಬಡಗಿನ ಮೇಳಗಳ ಯಕ್ಷಗಾನ ಕಲಾವಿದರಿಗೆ – ಇದರಲ್ಲಿ 800 ಕಲಾವಿದರು ಭಾಗವಹಿಸಿದ್ದು ವಿಶೇಷ
ಯಕ್ಷಧ್ರುವ ಕಲಾ ಗೌರವ : ತೆಂಕು-ಬಡಗಿನ 40 ಪ್ರಸಿದ್ಧ ಕಲಾವಿದರಿಗೆ ತಲಾ ₹10,000 ಗೌರವ ನಿಧಿಯೊಂದಿಗೆ ನೀಡಿದೆ.
ಯಕ್ಷಧ್ರುವ ಕಲಾ ಗೌರವ : ತೆಂಕು-ಬಡಗಿನ 45 ಪ್ರಸಿದ್ಧ ಕಲಾವಿದರಿಗೆ ತಲಾ ₹20,000 ಗೌರವ ನಿಧಿಯೊಂದಿಗೆ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ: ಕಲಾವಿದರಿಗೆ ಹಾಗೂ ಅವರ ಕುಟುಂಬದವರಿಗೆ ನೀಡಿದೆ.
ಮಾಸಾಶನ : ಸತ್ಪಾತ್ರ ತೀರ ಅಸಹಾಯಕ ಕಲಾವಿದರಿಗೆ ವಾರ್ಷಿಕ ತಲಾ ₹12,000 ನೀಡಿದೆ.
ಕಡಬ ತಾಲೂಕು ಘಟಕದ ಪದಗ್ರಹಣ
ನವರಾತ್ರಿಯ ಸುಸಂದರ್ಭದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ಕಡಬ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಕೇಂದ್ರ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.
