ಬಂಟ್ವಾಳ ತಾಲ್ಲೂಕಿನ ಬೋಳಂತೂರು ಚಿಣ್ಣರ ಲೋಕಸೇವಾಬಂಧು ದತ್ತು ಸ್ವೀಕರಿಸಿ ಉನ್ನತಿಕರಿಸಿದ ಸರಕಾರಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಷನ್ ಪ್ರಾಯೋಜಿತ ಯಕ್ಷಧ್ರುವ-ಯಕ್ಷ ಶಿಕ್ಷಣವನ್ನು ಶಾಲಾ ಮೇಲುಸ್ತುವಾರಿ ಅಧ್ಯಕ್ಷರಾದ ಕೃಷ್ಣಪ್ಪ ಸಪಲ್ಯರ ಅಧ್ಯಕ್ಷತೆಯಲ್ಲಿ ಸರಳ ಸಮಾರಂಭದ ಮೂಲಕ ಉದ್ಘಾಟನೆ ಮಾಡಲಾಯ್ತು.
ಪ್ರಾಸ್ತಾವಿಕವಾಗಿ ಮಾತಾಡಿದ ಖ್ಯಾತ ಯಕ್ಷಗಾನ ರಾಜ್ಯ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿಯವರು ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿಯವರ ದೂರದೃಷ್ಟಿಯ ಈ ಯಕ್ಷ ಶಿಕ್ಷಣ ಸ್ವಸ್ಥ ಸಮಾಜ ನಿರ್ಮಾಣ ಆಗುವಲ್ಲಿ ಮಹತ್ತರ ಪರಿಣಾಮಕಾರಿ ಅಲ್ಲದೆ ನಮ್ಮ ಸನಾತನ ಧರ್ಮದ ಬಗ್ಗೆ ಹಾಗೂ ಮಕ್ಕಳಿಗೆ ಪುರಾಣ ಪುಣ್ಯ ಪುರುಷರ ಆದರ್ಶಗಳು ಈ ಯಕ್ಷ ಕಲೆಯಿಂದ ತಿಳಿದು ಕೊಂಡಾಗ ಬಾಲ್ಯದಲ್ಲೆ ಸಂಸ್ಕಾರ ಪ್ರಾಪ್ತಿಸುವುದು ಎಂದರು.
ವೇದಿಕೆಯಲ್ಲಿ ಶಶಿಕಾಂತ ಜೆ.ಶೆಟ್ಟಿ ಸರಪಾಡಿ ಘಟಕದ ಅಧ್ಯಕ್ಷರು , ಚಿಣ್ಣರ ಲೋಕದ ಸ್ಥಾಪಕರಾದ ಮೋಹನ್ ದಾಸ್ ಕೊಟ್ಟಾರಿ, ರಾಮಕೃಷ್ಣ ರಾವ್, ಓಂ ಪ್ರಕಾಶ್ (ಯಕ್ಷ ಶಿಕ್ಷಕ ) ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ ಎವ್ಳಿನ್ ಡಿ ಸೋಜ ಸ್ವಾಗತಿಸಿ ಧನ್ಯವಾದ ಹಿರಿಯ ಶಿಕ್ಷಕಿ ಗೀತಾ ಪಿ. ಮಾಡಿದರು ಗೌರವ ಶಿಕ್ಷಕಿ ಕು. ದೀಕ್ಷಾ ನಿರೂಪಣೆ ಮಾಡಿದರು.