ಮಂಗಳೂರು ಕೆನರಾ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು.
ಶ್ರೀ ಕೃಷ್ಣ ಲೀಲಾಮೃತ
ಕೋಳಿಕ್ಕಾಳು ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವ ಪ್ರಯುಕ್ತ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು- ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಸೇವಾಕರ್ತರಾದ ಶ್ರೀಮತಿ ಮತ್ತು ಶ್ರೀ ಸಂತೋಷ್ ಕುಮಾರ್ ರೈ, ಅರ್ಜಾಲ್ ಗುತ್ತು ಗಾಡಿಗುಡ್ಡೆ (ಅಧ್ಯಕ್ಷರು, ಬಂಟರ ಸಂಘ (ರಿ) ಕುಂಬಡಾಜೆ ಮತ್ತು ಮನೆಯವರ ವತಿಯಿಂದ ಗೌರವಿಸಲಾಯಿತು. 5ನೇ ವರ್ಷದ ಸೇವೆಯಾಟವಾಗಿ ಪಾವಂಜೆ ಮೇಳದವರಿಂದ “ಶ್ರೀ ಕೃಷ್ಣ ಲೀಲಾಮೃತ” ಎಂಬ ಪೌರಾಣಿಕ ಕಥಾನಕದ ಕಾಲಮಿತಿ ಯಕ್ಷಗಾನ ಬಯಲಾಟ ಜರಗಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ
ಪಟ್ಲ ಅಭಿಮಾನಿ ಬಳಗದ ವತಿಯಿಂದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು- ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ದೇವಿ ಕನ್’ಸ್ಟ್ರಕ್ಷನ್ಸ್, ಯೆಯ್ಯಾಡಿ ಕೊಪ್ಪಲಕಾಡು ಇದರ ಮಾಲಕರಾದ ವೆಂಕಟೇಶ ಕೊಪ್ಪಲಕಾಡು ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಟ್ರಸ್ಟ್ ಗೆ ರೂಪಾಯಿ ಒಂದು ಲಕ್ಷದ ಮೊತ್ತವನ್ನು ದೇಣಿಗೆಯಾಗಿ ನೀಡಿದರು.