ಜಪ್ಪು ಮಜಿಲ ಹತ್ತು ಸಮಸ್ತರ ವತಿಯಿಂದ ಮಂಗಳಾದೇವಿ ದೇವಸ್ಥಾನದ ಎದುರುಗಡೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಯವರಿಂದ ‘ತ್ರಿಜನ್ಮ ಮೋಕ್ಷ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ರೂ. ಒಂದು ಲಕ್ಷ ಮೊತ್ತದ ಚೆಕ್‌ನ್ನು ಹಾಗೂ 2 ಬೆಳ್ಳಿಯ ದೀಪವನ್ನು ಮೇಳದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಇವರಿಗೆ ನೀಡಲಾಯಿತು.
ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೋ, ಉದ್ಯಮಿ ಅಶೋಕ್ ತಾವೋ, ಅಮರ್‌ನಾಥ್ ರೈ, ಹರೀಶ್ ಕರ್ಕೇರ, ಶರತ್ ಮಜಿಲ, ದಯಾನಂದ ಅಮೀನ್, ವಿನಯವಾಸ್ ದುಬ್ಬಾ, ವಕೀಲ ದೇವಿಪ್ರಕಾಶ್, ಕಾರ್ಪೋರೇಟರ್ ಭರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.