ಯೂರೋಪ್ ರಾಷ್ಟ್ರಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ ಪಟ್ಲ ಫೌಂಡೇಶನ್ – ಅಕ್ಟೋಬರ್ 3ರಂದು ಜರ್ಮನಿಯಲ್ಲಿ ಉದ್ಘಾಟನೆ

ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದ ಉದ್ಘಾಟನಾ ಸಮಾರಂಭ ಅಕ್ಟೋಬರ್ 3ರಂದು ಜರ್ಮನಿಯಲ್ಲಿ ನೆರವೇರಲಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ ಗೌರವ

ಯಕ್ಷಧ್ರುವ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಲಿ. ಇದರ ದ್ವಿತೀಯ ವಾರ್ಷಿಕ ಮಹಾಸಭೆಯನ್ನು ಸದ್ರಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಸತೀಶ ಶೆಟ್ಟಿ ಪಟ್ಲ ಅವರು, ಸೊಸೈಟಿಯ ನಿರ್ದೇಶಕರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು. ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರು ಶ್ರೀ ಸತೀಶ ಶೆಟ್ಟಿ ಪಟ್ಲರವರನ್ನು ಗೌರವಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ

ಕಳೆದ 75 ದಿನಗಳಿಂದ ಉತ್ತರ ಅಮೆರಿಕದ ಮೂಲೆಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್ ನಲ್ಲಿ ಸೆ.22ರಂದು ಯಶಸ್ವಿಯಾಗಿ ಮುಗಿಸಿದರು.
ಅಮೇರಿಕಾದಿಂದ ಯಕ್ಷ ಯಾತ್ರೆ ಮುಗಿಸಿ ಮಂಗಳೂರಿಗೆ ಆಗಮಿಸಿದ ಪಟ್ಲ ಸತೀಶ್ ಶೆಟ್ಟಿ ಮತ್ತು ತಂಡ

ಎರಡೂವರೆ ತಿಂಗಳ ಕಾಲ ಅಮೇರಿಕಾದ ತಿರುಗಾಟದಲ್ಲಿ ಹೊಸ ಹೊಸ ದಾಖಲೆಗಳೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇತಿಹಾಸವನ್ನೇ ನಿರ್ಮಿಸಿದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ತಂಡ ತವರಿಗೆ ಮರಳಿದೆ.
ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪಟ್ಲ ಫೌಂಡೇಶನ್ ಕಲಾವಿದರು

ಅಮೇರಿಕಾ ದೇಶದ ಮೂಲೆ ಮೂಲೆಗೂ ಯಕ್ಷಗಾನದ ಕಂಪನ್ನು ಹರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ, ಭಾರತಕ್ಕೆ ಮರಳುತಿರುವ ನಮ್ಮ ಹೆಮ್ಮೆಯ ಕಲಾವಿದರು.
“ರಾಮ ರಾಮ ಶ್ರೀ ರಾಮ” ಯಕ್ಷಗಾನ ಬಯಲಾಟದ ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಮೀರಾಭಯಂದರ್ ನಲ್ಲಿ ಜರಗಲಿರುವ ಪಾವಂಜೆ ಮೇಳದ ರಾಮ ರಾಮ ಶ್ರೀ ರಾಮ ಅದ್ದೂರಿ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.
ಕಲ್ಮಂಜ: ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ-ಯಕ್ಷ ಶಿಕ್ಷಣ ನಾಟ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕಲ್ಮಂಜ: ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಯಕ್ಷಧ್ರುವ- ಯಕ್ಷ ಶಿಕ್ಷಣ ನಾಟ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಸೆ.17ರಂದು ನಡೆಯಿತು.
ಶ್ರೀಕೃಷ್ಣಲೀಲೆ ಕಂಸವಧೆ ಯಕ್ಷಗಾನ ಕಾರ್ಯಕ್ರಮಕ್ಕೆ ಅಟ್ಲಾಂಟಾ ನಗರಕ್ಕೆ ಪ್ರಯಾಣಿಸಿದ ಕಲಾವಿದರು

ಅಮೇರಿಕಾದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರದಲ್ಲಿ ದಿನಾಂಕ 15-09-2024ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ನಡೆಸಿ ಇಂದು(16-09-2024) ಜಾರ್ಜಿಯ ರಾಜ್ಯದ ಅಟ್ಲಾಂಟಾ ನಗರದಲ್ಲಿ ಶ್ರೀಕೃಷ್ಣಲೀಲೆ ಕಂಸವಧೆ ಯಕ್ಷಗಾನ ಕಾರ್ಯಕ್ರಮಕ್ಕೆ ಕಲಾವಿದರು ಪಯಣಿಸಿದರು.
ರಾಲಿ ನಗರದಿಂದ ವರ್ಜೀನಿಯಾ ರಾಜ್ಯಕ್ಕೆ ಪ್ರಯಾಣಿಸಿದ ಪಟ್ಲ ಫೌಂಡೇಷನ್ ಕಲಾವಿದರು

ಅಮೇರಿಕಾ ಪ್ರವಾಸದಲ್ಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ತಂಡ ಇಂದು ರಾಲಿ ನಗರದಿಂದ ವರ್ಜೀನಿಯಾ ರಾಜ್ಯದ ರಿಚ್ ಮಂಡ್ ನಗರಕ್ಕೆ ಪ್ರಯಾಣ ಬೆಳೆಸಿದರು.
ಅಮೇರಿಕಾದ ಮಿಚಿಗನ್ ನಲ್ಲಿ ಮಿಂಚಿದ ಯಕ್ಷಧ್ರುವ ಪಟ್ಲ ಫೌಂಡೇಶನ್

ನಮ್ಮ ಸಂಸ್ಕೃತಿ, ಕನ್ನಡ ಭಾಷೆ, ಧಾರ್ಮಿಕ ಚಿಂತನೆಗಳ ಶ್ರೀಮಂತಿಕೆಯನ್ಮು ಪ್ರಚುರ ಪಡಿಸುವುದಕ್ಕೆ ಯಕ್ಷಗಾನ ಉತ್ತಮವಾದ ಕಲಾಪ್ರಕಾರ. ರಾಮಾಯಣ, ಮಹಾಭಾರತ, ಭಾಗವತ ಇತ್ಯಾದಿ ಪುರಾಣಗಳ ಪರಿಚಯ ಮತ್ತು ಅಧ್ಯಯನವು ಮನೋರಂಜನಾತ್ಮಕವಾಗಿ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಸಹ ಜ್ಞಾನಾರ್ಜಿಸುವಲ್ಲಿ ಯಕ್ಷಗಾನದ ಪಾತ್ರ ಬಹಳ ದೊಡ್ಡದು.
