ಯಕ್ಷಧ್ರುವ ಫೌಂಡೇಶನ್ (ರಿ.) ಮಂಗಳೂರು ವತಿಯಿಂದ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷ ಧ್ರುವ – ಯಕ್ಷ ಶಿಕ್ಷಣ ತರಗತಿಯನ್ನು ಯಕ್ಷ ಧ್ರುವ ಫೌಂಡೇಶನ್ ಮುಡಿಪು ಘಟಕದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಯಕ್ಷ ಧ್ರುವ ಫೌಂಡೇಶನ್ ಮಂಗಳೂರು ಇದರ ಸಂಘಟನ ಕಾರ್ಯದರ್ಶಿ ಶ್ರೀ ಪ್ರದೀಪ್ ಆಳ್ವ ಕದ್ರಿ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಯಕ್ಷಗಾನ ಗುರುಗಳಾದ ಶ್ರೀ ಅಶ್ವಥ್ ಮಂಜಿನಾಡಿ, ಗೌರವ ಉಪಸ್ಥಿತಿಯಾಗಿ ಶಾಲಾ ಸಂಚಾಲಕರಾದ ಕಡೆಂಜ ಶ್ರೀ ಸೋಮಶೇಖರ್ ಚೌಟ, , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾಲತಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ರೈ , ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗು ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಶ್ರೀ ಪ್ರದೀಪ್ ಆಳ್ವ, ಸಾಮಾಜಿಕ, ಧಾರ್ಮಿಕ ಮುಂದಾಳು ಹಾಗು ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರು, ಯಕ್ಷಗಾನ ಗುರುಗಳಾದ ಶ್ರೀ ಅಶ್ವಥ್ ಮಂಜಿನಾಡಿ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ತ್ಯಾಗಮ್ ಹರೇಕಳ ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು.ಶಿಕ್ಷಕರಾದ ಶ್ರೀ ರವಿಶಂಕರ್ ಧನ್ಯವಾದ ವಿತ್ತರು. ಶಿಕ್ಷಕರಾದ ಶ್ರೀ ಕೃಷ್ಣ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರುಗಳಾದ ಶ್ರೀಮತಿ ಕುಮುದ, ಶ್ರೀ ಶಿವಣ್ಣ, ಶ್ರೀಮತಿ ಸ್ಮಿತಾ ಅವರುಗಳು ಸಹಕರಿಸಿದರು.