ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಮಂಗಳೂರು ಇದರ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ಮೂಡುಬಿದ್ರಿ ಜ್ಯೋತಿನಗರದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಜರಗಿತು.
ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ಉದ್ಯಮಿ ಹಾಗೂ ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಗೌರವ ಸಲಹೆಗಾರರಾದ ಶ್ರೀಯುತ ಶ್ರೀಪತಿ ಭಟ್ ಇವರಿಂದ ಯಕ್ಷ ಶಿಕ್ಷಣ ತರಬೇತಿ ಕೇಂದ್ರ ಉದ್ಘಾಟಿಸಲ್ಪಟ್ಟಿತು.
ಮುಖ್ಯ ಅಭ್ಯಾಗತರಾದ ಪುಷ್ಪರಾಜ್ (ಉಪಾಧ್ಯಕ್ಷರು, ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ), ದಿವಾಕರ್ ಶೆಟ್ಟಿ ಖಂಡಿಗ, (ಅಧ್ಯಕ್ಷರು, ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಡಬಿದ್ರಿ ಘಟಕ), ಪ್ರೇಮನಾಥ ಮಾರ್ಲ ಕೆ (ಟ್ರಸ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಘಟಕ), ಎಂ ಶಾಂತರಾಮ್ ಕುಡ್ವ (ಅಧ್ಯಕ್ಷರು, ಯಕ್ಷಸಂಘಮ ಮೂಡಬಿದ್ರಿ), ಸದಾಶಿವ ರಾವ್ ನೆಲ್ಲಿಮಾರ್ (ಅಧ್ಯಕ್ಷರು, ಯಕ್ಷಮೇನಕ), ಶ್ರೀಮತಿ ತೆರೇಸಾ ಕಾರ್ಡೊಜ (ಮುಖ್ಯೋಪಾಧ್ಯಾಯರು ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಮೂಡಬಿದ್ರಿ), ಕುಮಾರಿ ರಶಿತ ಪ್ರಸಾದ್ ಶೆಟ್ಟಿ (ನಾಟ್ಯ ಗುರುಗಳು ಪಟ್ಲ ಫೌಂಡೇಶನ್ ಮಂಗಳೂರು) ವೇದಿಕೆಯಲ್ಲಿ ವಿರಾಜಮಾನರಾಗಿದ್ದರು.
ಪಟ್ಲ ಫೌಂಡೇಶನ್ ಮೂಡುಬಿದ್ರಿ ಘಟಕದಿಂದ, ಪ್ರೊ ಸದಾಶಿವ ಶೆಟ್ಟಿಗಾರ್, ಮನೋಜ್ ಕುಮಾರ್ ಶೆಟ್ಟಿ, ನವೀನ್ ಶೆಟ್ಟಿ, ಧನಂಜಯ್ ಬಿರಾವ್, ಹಾಗೂ ಶಾಲಾ ಸಿಬ್ಬಂದಿ ವರ್ಗ, ಪತ್ರಿಕಾ ಸಿಬ್ಬಂದಿಯಾದ ಧನಂಜಯ್, ಪ್ರೇಮ, ರಾಘವೇಂದ್ರ, ಇನ್ನಿತರ ಮಹನೀಯರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಸಂಚಾಲಕರಾದ ರವಿಪ್ರಸಾದ್ ಶೆಟ್ಟಿ ಯವರು ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ತೆರೆಸಾ ಕಾರ್ಡೊಜ ರವರು ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ವೆಂಕಟರಮಣ ಕೆರೆಗದ್ದೆ ಯವರು ವಂದನಾರ್ಪಣೆ ಮಾಡಿದರು.