ನಾಗತೀರ್ಥ ಚಿಟ್ಸ್ ತೀರ್ಥಹಳ್ಳಿ ಇದರ ಪ್ರಧಾನ ಕಚೇರಿಯಲ್ಲಿ ತೀರ್ಥಹಳ್ಳಿಯ ಗಣ್ಯರ ಸಮ್ಮುಖದಲ್ಲಿ ಪಟ್ಲ ಸತೀಶ್ ಶೆಟ್ಟಿಯವರಿಗೆ ವಿಶೇಷ ಗೌರವ ಅಭಿವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯಕ್ಷಧ್ರು ವ ಫೌಂಡೇಶನ್ ನ ಸಥ್ಕಾರ್ಯಗಳಿಗೆ ಸಣ್ಣ ದೇಣಿಗೆಯನ್ನು ಚಿಟ್ಸ್ ನ ಅಧ್ಯಕ್ಷರು ಶ್ರೀ ಕಿಮ್ಮನೆ ಆದಿತ್ಯ ಅರ್ಪಸಿದರು.
ನಾಗತೀರ್ಥ ಚಿಟ್ಸ್ ಸಂಸ್ಥೆಯ ಪಾಲುದಾರರಾದ ಶ್ರೀ ಈಚಲಬೈಲ್ ಶಶಿಧರ್, ಶ್ರೀ ಬಿಕ್ಕೊಳ್ಳಿ ಸತೀಶ್, ಹೆದ್ದೂರ್ ಚೇತನ್, ಸತೀಶ್ ರೈ ಮಂಗಳೂರು ಹಾಗೂ ಸಂಸ್ಥೆಯ ಲೆಕ್ಕಾಧಿಕಾರಿ ಶಿಲ್ಪ ಸಹಿತ ಎಲ್ಲಾ ಸಿಬಂದಿ ವರ್ಗದವರು ಹಾಜರಿದ್ದರು. ಈ ಸಮಾರಂಭ ವಿಶೇಷ ಅತಿಥಿ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರೊಂದಿಗೆ ಮುಖ್ಯ ಅತಿಥಿಗಳಾಗಿ ನಾಗತೀರ್ಥ ಚಿಟ್ಸ್ ನ ಹಿತೈಷಿಗಳಾದ ಹಿರಿಯರಾದ ಶ್ರೀ ನಾಗರಾಜ್ ಶೆಟ್ಟಿ ಮಾರಿಕಾಂಭ ದೇವಸ್ಥಾನದ ಅಧ್ಯಕ್ಷರು, ಚಿಟ್ಸ್ ನ ಲೆಕ್ಕ ಪರಿಶೋಧಕರಾದ ಶ್ರೀ ಶ್ರೀ ಮಧುಸೂದನ್ ಸಿ ಎ, ಚಿಟ್ಸ್ ಕಟ್ಟದ ಮಾಲಕರಾದ ಶ್ರೀ ಕಟಪಾಡಿ ನರೇಂದ್ರ ಕಾಮತ್, ಚಿಟ್ಸ್ ನ ಅತ್ಯಮೂಲ್ಯ ಗ್ರಾಹಕರಾದ ಶ್ರೀ ಶ್ರೀಕಾಂತ್ ಭಟ್, ಶರಾವತಿ ಸಂಸ್ಥೆ ಯ ಮುಖ್ಯಸ್ಥರು ಶ್ರೀ ಅಜಿತ್, ಪತ್ರಕರ್ತರ ಸಂಘದ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀ ಮೋಹನ್ ಶೆಟ್ಟಿ ಮುನ್ನೂರು, ಕರ್ನಾಟಕ ಬ್ಯಾಂಕ್ ತೀರ್ಥಹಳ್ಳಿ ಇದರ ವ್ಯವಸ್ಥಾಪಕರು ಶ್ರೀ ರಾಘವೇಂದ್ರ ಕಾಮತ್ ಶ್ರೀ ಹರೀಶ್ ಬೊಗರುಕೊಪ್ಪ, ಶ್ರೀ ಶ್ರೀನಿವಾಸ್ ಕೊರಕೋಟೆ, ಶ್ರೀ ಶಿಶಿರ್ ಶೆಟ್ಟಿ ತೀರ್ಥಹಳ್ಳಿ ಉಪಸ್ಥಿತರಿದ್ದರು.