ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಕಾರ್ಕಳ ಘಟಕದ ಒಂಬತ್ತನೇ “ಪಟ್ಲ ಸಂಭ್ರಮೋತ್ಸವ” ಹಾಗೂ ಯಕ್ಷಕಲಾರಂಗ (ರಿ) ಕಾರ್ಕಳ ಇದರ 12ನೇ ವಾರ್ಷಿಕೋತ್ಸವವು ಪಟ್ಲ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳ ಮಾರಿಗುಡಿ ವಠಾರದಲ್ಲಿ ನಡೆಯಿತು. ಗೋವಾ ಘಟಕದ ಅಧ್ಯಕ್ಷರಾದ ಉದ್ಯಮಿ ಗಣೇಶ್ ಶೆಟ್ಟಿ, ರಶ್ಮಿ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇದರ ಅಧ್ಯಕ್ಷರಾದ ಡಿ. ಆರ್.ರಾಜು ಇವರ ಗೌರವ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ, ಜಗದೀಶ್ ಹೆಗ್ಡೆ ಕಾರ್ಕಳ , ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ , ಪಟ್ಲ ಫೌಂಡೇಶನ್ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ (C A) ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಕಾರ್ಕಳ ಘಟಕದ ಸರ್ವ ಪದಾಧಿಕಾರಿಗಳು ಸಹಕರಿಸಿದರು. ಸ್ಥಳೀಯ ಕಲಾವಿದರಾದ ಶ್ರೀ ರಾಮ ಭಟ್ ಮತ್ತು ರತ್ನಾಕರ ಆಚಾರ್ಯ ಇವರನ್ನು ಗೌರವಧನದೊಂದಿಗೆ ಸಮ್ಮಾನಿಸಲಾಯಿತು. ಕಾರ್ಕಳ ಘಟಕದ ಪ್ರಧಾನ ಸಂಚಾಲಕರಾದ ಪ್ರೊ| ಬಿ. ಪದ್ಮನಾಭ ಗೌಡ ಪ್ರಸ್ತಾವನೆಗೈದು ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು. ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.