ಯಕ್ಷಗಾನದ ಪ್ರಸಿದ್ದ ಹಿರಿಯ ಭಾಗವತ ಜಿ. ಕೆ ನಾವಡ ಬಾಯಾರು ಇವರ ಆರೋಗ್ಯ ತುಂಬಾ ಗಂಭೀರ ಸ್ಥಿತಿಯಲ್ಲಿದ್ದು ಅವರ ಧರ್ಮಪತ್ನಿ ಶ್ರೀದೇವಿ ಯವರು ಮತ್ತು ನಾವಡರ ಸ್ನೇಹಿತ ಕೀರ್ತಿ ಭಟ್ ರವರು ಇಂದು ಪಟ್ಲ ಸತೀಶ್ ಶೆಟ್ಟಿ ಯವರನ್ನು ಭೇಟಿಯಾಗಿ ತುರ್ತು ಆರ್ಥಿಕ ಸಹಾಯಕ್ಕಾಗಿ ಯಕ್ಷದ್ರುವ ಪಟ್ಲ ಫೌಂಡೇಶನ್ ಗೆ ಮನವಿ ಸಲ್ಲಿಸಿದರು.
ಮನವಿಗೆ ಕೂಡಲೇ ಸ್ಪಂದಿಸಿದ ಫೌಂಡೇಶನ್ ರೂಪಾಯಿ 25,000 ದ ಮೊತ್ತವನ್ನು .ಜಿ.ಕೆ ನಾವಡ ಅವರ ಪತ್ನಿ ಶ್ರೀ ದೇವಿ ಯವರ ಅಕೌಂಟ್ ಗೆ ಕಳಿಸಿ, ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.