ಸರ್ಕಾರಿ ಪ್ರೌಢಶಾಲೆ ನಗರ ಮತ್ತು ಪ್ರಜ್ಞಾಭಾರತಿ ವಿದ್ಯಾಕೇಂದ್ರ ನಿಟ್ಟೂರು ಶಾಲೆಯಲ್ಲಿ ಉಚಿತ ಯಕ್ಷಗಾನ ತರಗತಿಯು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆಯುವ ” ಯಕ್ಷಧ್ರುವ-ಯಕ್ಷ ಶಿಕ್ಷಣ ” ಯೋಜನೆಯ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ಈ ಉಚಿತ ಯಕ್ಷಗಾನ ತರಗತಿಗೆ ಈಗಾಗಲೇ ಹಲವು ಶಾಲೆಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದೀಗ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ನಗರ ಮತ್ತು ಪ್ರಜ್ಞಾಭಾರತಿ ವಿದ್ಯಾಕೇಂದ್ರ ನಿಟ್ಟೂರು ಶಾಲೆಯಲ್ಲಿ ಉಚಿತ ಯಕ್ಷಗಾನ ತರಗತಿಯು ಉದ್ಘಾಟನೆಗೊಂಡಿದೆ.