ಮಂಗಳೂರು ಯಕ್ಷಾಭಿಮಾನಿ ವಕೀಲರ ವೃಂದ, ಮಂಗಳೂರು ವಕೀಲರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು – ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸುವುದರೊಂದಿಗೆ ಕಲಾವಿದರಾದ ಸುಬ್ರಾಯ ಹೊಳ್ಳ ಕಾಸರಗೋಡು, ಅಕ್ಷಯಕುಮಾರ್ ಮಾರ್ನಾಡ್ ಇವರನ್ನು ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಸಂಘಟಕರ ಉಪಸ್ಥಿತಿಯಲ್ಲಿ ಸಂಮಾನಿಸಲಾಯಿತು.
ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತೀಯ ಸಮ್ಮೇಳನ “ಉನ್ನತಿ” ಯ ಕಾರ್ಯಕ್ರಮವು ಮೂಡುಬಿದಿರೆ ಸಮೀಪದ ಅಶ್ವತ್ಥಪುರದಲ್ಲಿರುವ Leksha Valleyಯಲ್ಲಿ ನಡೆಯಿತು. ವಿಶೇಷ ಕಲಾ ಸಾಧಕರ ನೆಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು.