ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು- ಸುರತ್ಕಲ್ ಘಟಕದ 4ನೇ ವಾರ್ಷಿಕೋತ್ಸವವು ಸುರತ್ಕಲ್ ಭಂಟರ ಭವನದ ಆವರಣದಲ್ಲಿ ನಡೆಯಿತು. ಸುರತ್ಕಲ್ ಘಟಕದ ಅಧ್ಯಕ್ಷರಾದ ಸುಧಾಕರ ಎಸ್. ಪೂಂಜ ಸ್ವಾಗತಿಸಿ ಜಗನ್ನಾಥ ಶೆಟ್ಟಿ ಬಾಳ ಇವರು ಪ್ರಸ್ತಾವನೆಗೈದರು.
ಯಕ್ಷಧ್ರುವ ಯಕ್ಷ ಶಿಕ್ಷಣ ಇದರ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ (ಯು.ಎಸ್.ಎ) ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಸ್ಥಾಪಕಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಗೌರವ ಉಪಸ್ಥಿತಿಯಲ್ಲಿ ಪಣಂಬೂರು ವಾಸುದೇವ ಐತಾಳ್ ಇವರನ್ನು ಘಟಕದ ವತಿಯಿಂದ ಗೌರವಿಸಲಾಯಿತು.
ಹಿರಿಯ ಯಕ್ಷಗಾನ ಕಲಾವಿದರು ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್ ಇವರಿಗೆ ಗೌರವಾರ್ಪಣೆ, ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಮಹಾಬಲ ಶೆಟ್ಟಿ ಜೋಕಟ್ಟೆ, ಶ್ರೀಮತಿ ಜಯಂತಿ ಹೊಳ್ಳ ಕೃಷ್ಣಾಪುರ, ವಾಸುದೇವ ಆಚಾರ್ಯ ಕುಳಾಯಿ, ಕರುಣಾಕರ ಪೂಜಾರಿ ಮಧ್ಯ ಮತ್ತು ಲಿಂಗಪ್ಪ ಶೆಟ್ಟಿ ಕೃಷ್ಣಾಪುರ ಇವರನ್ನು ಸಂಮಾನಿಸಲಾಯಿತು. ಯಕ್ಷ ಸಿರಿ ತರಗಗತಿಯ ವಿದ್ಯಾರ್ಥಿ ದಿ| ಯಶ್ವಿತ್ ಅಗರಮೇಲು ಇವರ ಹೆತ್ತವರಿಗೆ ಮರಣೋತ್ತರ ಆರ್ಥಿಕ ಸಹಾಯ ನೀಡಲಾಯಿತು. ಶ್ರೀಮತಿ ಕ್ಯಾ| ಸುಧಾ. ಯು ಶೆಟ್ಟಿ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಇವರು ವಂದಿಸಿದರು.