ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವನ್ನು, ಮುಳ್ಳಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಂಗಳೂರಿನ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿದರು.
ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ವೆಂಕಟೇಶ್ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ ಪಟ್ಲ ಇವರ ಗೌರವ ಉಪಸ್ಥಿಸಿಯಲ್ಲಿ ಮಂಗಳೂರಿನ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಶ್ರೀ ವೆಂಕಟೇಶ್ ಪಟಗಾರ ಇವರನ್ನು ಗೌರವಿಸಲಾಯಿತು.
ಮುಳ್ಳಕಾಡು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಜಿ ಉಸ್ಮಾನ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಭಂಡಾರಿಯವರು ಪ್ರಸ್ತಾವನೆಗೈದರು. ಸಮಗ್ರ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯಾಧಿಕಾರಿ ಡಾ. ಸುಮಂಗಲಾ ಎಸ್ ನಾಯಕ್, ಸ್ಥಳೀಯ ಕಾರ್ಪೋರೇಟರ್ ಶ್ರೀಮತಿ ಗಾಯತ್ರಿ ಎ ರಾವ್, ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ,ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮಲ್ಲಪ್ಪ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಕೋಶಧಿಕಾರಿಗಳಾದ ಶ್ರೀ ಸಿ ಎ ಸುಧೇಶ್ ರೈ, ಪಟ್ಲ ಪೌಂಡೇಶನ್ ಮಂಗಳೂರು ನಗರ ಘಟಕದ ಅಧ್ಯಕ್ಷರಾದ ಶ್ರೀ ತಾರಾನಾಥ ಶೆಟ್ಟಿ ಬೋಳಾರ ,ಪ್ರಧಾನ ಕಾರ್ಯದರ್ಶಿ ಶ್ರೀ ಎ ಕೃಷ್ಣ ಶೆಟ್ಟಿ ತಾರೆಮಾರ್ ಕೋಶದೀಕಾರಿಗಳಾದ ಶ್ರೀ ಗೋಪಿನಾಥ್ ಶೆಟ್ಟಿ, ಮುಳ್ಳಕಾಡು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀವೇಣುಗೋಪಾಲ್,ಘಟಕದ ಟ್ರಸ್ಟಿಗಳಾದ ಶ್ರೀ ಜಯಶೀಲ ಅಡ್ಯಾಂತಾಯ, ಶ್ರೀಮತಿ ಅನಿತಾ ಪಿಂಟೋ, ಪಟ್ಲ ಫೌಂಡೇಶನ್, ಶ್ರೀ ಜೆ ವಿ ಶೆಟ್ಟಿ, ಶ್ರೀ ಸಂತೋಷ್ ಶೆಟ್ಟಿ, ಶ್ರೀಮಹೇಶ್ ಕದ್ರಿ, ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ಕೆ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಹಿಲ್ಡಾ ಕ್ಲಿಮೆನ್ಸೇನಿಯಾ ಪಿಂಟೋ ವಂದಿಸಿದರು. ಯಕ್ಷಶಿಕ್ಷಣದ ತರಬೇತುದಾರರಾದ ಶ್ರೀ ರಾಕೇಶ್ ರೈ ಅಡ್ಕರವರು ತರಬೇತಿಗೆ ಚಾಲನೆ ನೀಡಿದರು.