ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ( ರಿ.) ಮಂಗಳೂರು, ಇದರ ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ಮೂಡಬಿದ್ರೆಯ ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಸಹಕಾರದೊಂದಿಗೆ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಅಭಿಯಾನ ಕಾರ್ಯಕ್ರಮವನ್ನು ಶ್ರೀಯುತ ಉಮನಾಥ್ ಕೋಟ್ಯಾನ್ ಶಾಸಕರು ಮುಲ್ಕಿ ಮೂಡಬಿದ್ರಿ ಕ್ಷೇತ್ರ ಇವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮೂಡುಬಿದ್ರಿ ಘಟಕದ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಖಂಡಿಗ, ಅಭಯಚಂದ್ರ ಜೈನ್, ಶ್ರೀಪತಿ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ದಿನಕರ್ ಕುಂಭಾಶಿ, ನಾಟ್ಯ ಗುರುಗಳಾದ ಅನ್ವಿತಾ ಕೆರೆ ಕಾಡು ಉಪಸ್ಥಿತರಿದ್ದರು. ಹಾಗೂ ಪಟ್ಲ ಫೌಂಡೇಶನ್ ಮೂಡುಬಿದ್ರಿ ಘಟಕದಿಂದ ಸದಾಶಿವ ನೆಲ್ಲಿಮಾರ್, ಸದಾಶಿವ ಶೆಟ್ಟಿಗಾರ್, ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಸಮಾಜ ಮಂದಿರ, ನವೀನ್ ಶೆಟ್ಟಿ,ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರು, ಹಳೆ ವಿದ್ಯಾರ್ಥಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು.
ಘಟಕದ ಸಂಚಾಲಕರಾದ ರವಿಪ್ರಸಾದ್ ಕೆ ಶೆಟ್ಟಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕರಾದ ಸುಧಾಕರ್ ರವರು ಧನ್ಯವಾದ ಮಾಡಿದರು.