ಯಕ್ಷಧ್ರುವ ಪಟ್ಲ ಸತೀಶ್ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು, ಬ್ರಹ್ಮಾವರ ಘಟಕದ 2ನೇ ವಾರ್ಷಿಕೋತ್ಸವ ಸಮಾರಂಭವು 21-11-2024ರಂದು ನೂತನವಾಗಿ ಉದ್ಘಾಟನೆಗೊಂಡ ಶೇಡಿಕೊಡ್ಲು ಮಂದಾರ್ತಿ ದುರ್ಗಾ ಗಾರ್ಡನ್ ಆವರಣದಲ್ಲಿ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ ಕೊಕ್ಜರ್ಣೆ ಇವರ ಸಭಾಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು. ದಿ| ಚಂದ್ರ ನಾಯ್ಕರ ಧರ್ಮಪತ್ನಿ ಶ್ರೀಮತಿ ವಾಣಿ ಇವರಿಗೆ ನೀಲಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ. 25 ಸಾವಿರ ಆಸರೆಯ ಪ್ರೋತ್ಸಾಹಧನ, ಹಿರಿಯ ಕಲಾವಿದ ಅಜ್ರಿ ಗೋಪಾಲ ಗಾಣಿಗ ಇವರಿಗೆ ಮನೆ ನಿರ್ಮಾಣ ಸಹಾಯಾರ್ಥವಾಗಿ ರೂ. 5 ಲಕ್ಷದ ಮೊತ್ತವನ್ನು ನೀಡಲಾಯಿತು.
ಹಾಲಾಡಿ ರಾಘವ ಆಚಾರ್ಯ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಗೌರವಾಧ್ಯಕ್ಷರಾದ ಶೇಡಿಕೊಡ್ಲು ವಿಠಲ ಶೆಟ್ಟಿ ಮತ್ತು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಪ್ರಸ್ತಾವಿಸಿ, ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ ಸ್ವಾಗತಿಸಿದರು. ಜೆ. ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಸದಾಶಿವ ಅಮೀನ್ ವಂದಿಸಿದರು.