ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಾಶ್ರಯ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ವಿವಿಧ ಯಕ್ಷಗಾನ ಮೇಳಗಳ ಕಲಾವಿದರಿಗೆ ಹಾಗೂ ದೈವಾರಾದನೆಯ ಪರಿಚಾರಕರಿಗೆ ರೂ. 25 ಲಕ್ಷದ ಮೊತ್ತದ ಚೆಕ್ಕುಗಳನ್ನು ಇಂದು ಟ್ರಸ್ಟಿನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಇವರ ಕಚೇರಿಯಲ್ಲಿ 16 ಮಂದಿ ಫಲಾನುಭವಿಗಳಿಗೆ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ವಿತರಿಸಿದರು.
ಫಲಾನುಭವಿಗಳು
1.ಶ್ರೀ ಸುಕುಮಾರ್ ಬಲ್ಲಾಳ್ (ಕಟೀಲು ಮೇಳ)
2.ಶ್ರೀ ಸುರೇಶ್ ಪುರುಷ (ಕಟೀಲು ಮೇಳ)
3.ಶ್ರೀ ಕೊರಗಪ್ಪ ಪೂಜಾರಿ (ಕಟೀಲು ಮೇಳ)
4.ಶ್ರೀ ಕೃಷ್ಣಪ್ಪ ಕಟ್ಟಡಪಡ್ಪು (ಕಟೀಲು ಮೇಳ)
5.ಶ್ರೀ ಕೃಷ್ಣ ಕುಮಾರ್ ಗೋಣಿಬೀಡು (ಕಟೀಲು ಮೇಳ)
6.ಶ್ರೀ ಬಾಲಕೃಷ್ಣ ಬಂದಾರು (ಕಟೀಲು ಮೇಳ)
7.ಶ್ರೀ ವಿಶ್ವನಾಥ ಪೊಳಲಿ (ಸಸಿಹಿತ್ಲು ಮೇಳ)
8.ಶ್ರೀ ಚಂದ್ರಶೇಖರ ಸರಪಾಡಿ (ಧರ್ಮಸ್ಥಳ ಮೇಳ)
9.ಶ್ರೀ ಶರತ್ ತೀರ್ಥಹಳ್ಳಿ (ಧರ್ಮಸ್ಥಳ ಮೇಳ)
10.ಶ್ರೀ ಶ್ರೀಧರ ಮಾನ್ಯ (ಮಂದಾರ್ತಿ ಮೇಳ)
11.ಶ್ರೀ ಶ್ರೀಧರ ಭಂಡಾರಿ (ಸೌಕೂರು ಮೇಳ)
12.ಶ್ರೀ ವಿಶ್ವನಾಥ ತೊಂಬಟ್ಟು (ಹಾಲಾಡಿ ಮೇಳ)
13.ಶ್ರೀ ಆಜ್ರಿ ಗೋಪಾಲ ಗಾಣಿಗ (ಮಂದಾರ್ತಿ ಮೇಳ)
14.ಶ್ರೀ ಗಣೇಶ್ ಬಳೆಗಾರ ( ಮಡಮಕ್ಕಿ ಮೇಳ)
15.ಶ್ರೀ ದಿನೇಶ್ ಪಂಬದ (ದೈವಾರಾಧನಾ ಕಲಾವಿದ)
16.ಶ್ರೀ ಸುಮಿತ್ರಾ ಪರವ (ದೈವಾರಾಧನಾ ಕಲಾವಿದ)
ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ , ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಪ್ರದಾನ ಕಾರ್ಯದರ್ಶಿ ಕೆ ಪುರುಷೋತ್ತಮ್ ಭಂಡಾರಿ , ಸಂಘಟನಾ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ , ನ್ಯಾಯವಾದಿ ದೇವಿಪ್ರಸಾದ್ ಸಾಮಾನಿ , ಉದ್ಯಮಿ ಪ್ರಮೋದ್ ಶೆಟ್ಟಿ ಅಡ್ಯಾರ್, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಶ್ರೀಮತಿ ಸಿಎ ವೃಂದಾ ಕೊನ್ನಾರ್ ಹಾಗೂ ಮಂಜುನಾಥ್ ಕುಮಾರ್ ರೈ ಉಪಸ್ಥಿತರಿದ್ದರು.