ಪಟ್ಲ ಯಕ್ಷಾಶ್ರಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹತ್ವದ ಯೋಜನೆಯಲ್ಲಿ ಒಂದು. ಈ ಯೋಜನೆ ಮೂಲಕ ಮಂದಾರ್ತಿ ಮೇಳದ ಕಲಾವಿದ ಉದಯ ಸುವರ್ಣ ಇವರಿಗೆ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.
ಪ್ರವೀಣ್ ಶೆಟ್ಟಿ ಹಾಗೂ ಬ್ರಹ್ಮಾವರ ಘಟಕದ ಪದಾಧಿಕಾರಿಗಳು ದಿನಾಂಕ 08/07/2024 ನೇ ಸೋಮವಾರ ಉಡುಪಿ ತಾಲೂಕಿನ ಹೆಬ್ರಿಯಲ್ಲಿ ಈ ನೂತನ ಗೃಹವನ್ನು ಹಸ್ತಾಂತರಿಸಿದರು.
ಫೌಂಡೇಶನ್ ನ ಪೋಷಕರಾದ ಫೋರ್ಚೂನ್ ಗ್ರೂಪ್ಸ್ ನ ಮಾಲೀಕರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಯವರು ಈ ಮನೆಯ ಕೊಡುಗೈ ದಾನಿಗಳಾಗಿದ್ದಾರೆ.